ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ದಾಳಿ ನಡೆಸಿ, 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕುತ್ತಿದ್ದಾರೆ. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಹೆಚ್‌ಡಿ ದೇವೇಗೌಡ. ಅವರನ್ನೇ ಮರೆತ ಕೈ ನಾಯಕರು ಸತ್ಯಕ್ಕೆ ಸಮಾಧಿ ಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದರ ವಿರುದ್ಧ ಗುಡುಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೆಚ್‌ಡಿಕೆ ಹಿರಿಯರು, ಬುದ್ಧಿವಂತರು, ಹೋರಾಟಗಾರರು. H.D. ಕುಮಾರಸ್ವಾಮಿ ಕುಟುಂಬದವರೇ ಹೋರಾಟಗಾರರು. ಅವರ ಮನೆಯಲ್ಲಿ ಸಾಹಿತ್ಯ, ನಿರ್ದೇಶನ ಎಲ್ಲವೂ ಇದೆ. ಫಿಲ್ಮ್ ಪ್ರೊಡ್ಯೂಸರ್ ಕೂಡ ಇದ್ದಾರೆ , ನಾನು ಹಳ್ಳಿಯವನು, ನಮಗೆ ವಿದ್ಯೆ ಕಡಿಮೆ, ನಮ್ಮಪ್ಪ ರೈತ. ನಾನು ಯಾವುದೇ ಜಾತಿ ಮೇಲೆ ರಾಜಕಾರಣವನ್ನು ಮಾಡಲ್ಲ ಎಂದೂ ಮಾಜಿ ಸಿಎಂ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ನನಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನೂರಾರು ನಾಯಕರು ಇದ್ದಾರೆಂದು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ