Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಸಂಸದ ಜಗದೀಶ್ ಶೆಟ್ಟರ್ ಮಾಧ್ಯಮದವರ ಜೊತೆ ಮಾತನಾಡಿದ್ದು, ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಇನ್ ಫೈಟ್ ನಡೆಯುತ್ತಿದೆ.
ಸರ್ಕಾರ ಆಸ್ತಿತ್ವಕ್ಕೆ ಬಂದಾಗಲೇ ಸಿಎಂ ಆಯ್ಕೆಯ ಗೊಂದಲ ಸೃಷ್ಟಿಯಾಗಿತ್ತು. ಆರಂಭದಲ್ಲೇ ಒಂದು ಒಪ್ಪಂದ ಆಗಿದೆ ಎಂಬ ಮಾತಿದೆ. ಸಹಜವಾಗಿ ಸಿಎಂ ಸ್ಥಾನಕ್ಕೆ ಒಳಗಡೆ ಫೈಟ್ ನಡೆಯುತ್ತಿದೆ. ಇದೇ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಬಹಳ ದಿನ ಈ ಸರ್ಕಾರ ಮುಂದುವರೆಯುವುದಿಲ್ಲ ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತಂತ್ರ ಪ್ರತಿತಂತ್ರ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.
ಬುರ್ಖಾ ಧರಿಸಿ RSS ಗಲಭೆ ಸೃಷ್ಟಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದರ ಬಗ್ಗೆ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಅಲ್ಪಸಂಖ್ಯಾತ ತೃಷ್ಠಿಕರಣಕ್ಕಾಗಿ ಈ ರೀತಿ ಮಾತನಾಡ್ತಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ಹರಿಪ್ರಸಾದ್ ತಿಳಿದು ಮಾತನಾಡಬೇಕು. ನಿಮ್ಮದೆ ಸರ್ಕಾರ ತನಿಖೆ ಮಾಡಿ, ಸುಮ್ಮನೆ ಆರೋಪ ಮಾಡೋದು ಬಿಡಿ. ಬಿ.ಕೆ.ಹರಿಪ್ರಸಾದ್ ಅವರ ಈ ಹೇಳಿಕೆ ಬೇಜಾವಾಬ್ದಾರಿತನದ ಹೇಳಿಕೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.
ಮೆಟ್ರೊ ದರ ಏರಿಕೆ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ವಿಚಾರದ ಬಗ್ಗೆ ಮಾತನಾಡಿದ ಶೆಟ್ಟರ್, ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಇದಕ್ಕೆಲ್ಲ ಕಾರಣ. ಕೇಂದ್ರ ಸರ್ಕಾರದ ದರ ಏರಿಕೆ ಮಾಡೋದಾದ್ರೆ , ಬೇರೆ ರಾಜ್ಯದಲ್ಲಿ ದರ ಏರಿಕೆ ಆಗಬೇಕಿತ್ತು. ದೆಹಲಿ, ಮುಂಬೈನಲ್ಲೂ ದರ ಏರಿಕೆ ಆಗಬೇಕಿತ್ತು. ರಾಜ್ಯ ಸರ್ಕಾರದ ಪ್ರಸ್ತಾವನೆ ಮೇರೆಗೆ ದರ ಏರಿಕೆ ಆಗಿದೆ. ಇದನ್ನು ರೈಲ್ವೆ ಸಚಿವರೇ ಸ್ಪಷ್ಟಪಡಿಸಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.