Friday, November 22, 2024

Latest Posts

Horoscope: ಹಾಸಿಗೆ ಮೇಲೆ ಕುಳಿತು ಇಂಥ ಕೆಲಸಗಳನ್ನು ಮಾಡಬೇಡಿ

- Advertisement -

Spiritual: ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ತಪ್ಪನ್ನು ಮಾಡುತ್ತಲೇ ಇರುತ್ತಾನೆ. ಸಾಯುವವರೆಗೂ ತಿದ್ದುಕೊಳ್ಳಬೇಕಾದ ತಪ್ಪು, ಮತ್ತು ಕಲಿಯಬೇಕಾದ ವಿಷಯ ಸಾಕಷ್ಟಿರುತ್ತದೆ. ಹಾಗಾಗಿ ಜೀವನ ಒಂದು ಪಾಠ ಅಂತಾ ಹೇಳುತ್ತಾರೆ. ಆದರೆ ನಾವು ಮಾಡುವ ತಪ್ಪಿನಿಂದ ಪಾಠ ಕಲಿಯದಿದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದೇ ರೀತಿ ಹಿಂದೂ ಧರ್ಮದಲ್ಲಿ ಕೆಲ ತಪ್ಪುಗಳನ್ನು ಮಾಡಿದರೆ, ಅದು ನಮ್ಮ ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಹಾಸಿಗೆಯ ಮೇಲೆ ಕುಳಿತು ಕೆಲ ಕೆಲಸಗಳನ್ನು ಮಾಡಬಾರದು. ಅದೇನು ಅಂತಾ ತಿಳಿಯೋಣ ಬನ್ನಿ..

ಹಾಸಿಗೆಯ ಮೇಲೆ ಕುಳಿತು ತಿಂಡಿ, ಊಟ ಮಾಡಬೇಡಿ. ಊಟ ಮಾಡಲು ತನ್ನದೇ ಆದ ಪದ್ಧತಿ ಇದೆ. ನೆಲದ ಮೇಲೆ ಕುಳಿತು, ಪದ್ಧತಿ ಪ್ರಕಾರವಾಗಿ ಊಟ ಮಾಡಬೇಕು. ಅದು ನಮ್ಮ ಆರೋಗ್ಯಕ್ಕೂ ಉತ್ತಮ, ಮನೆಗೂ ಉತ್ತಮ. ಆದರೆ ಸಿಕ್ಕ ಸಿಕ್ಕಲ್ಲಿ ಕುಳಿತು ಊಟ ಮಾಡುವುದರಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೇ, ಮನೆಯಲ್ಲಿ ಶಾಂತಿಭಂಗವಾಗುತ್ತದೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡಬಾರದು ಅಂತಾ ಹೇಳೋದ್ಯಾಕೆ ಅಂದರೆ, ಇದು ಅನ್ನಪೂರ್ಣೆಶ್ವರಿಗೆ ಮಾಡುವ ಅಪಮಾನವಾಗಿದೆ. ಇದರಿಂದ ನಮ್ಮ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಎರಡೂ ಹಾಳಾಗುತ್ತದೆ.

ಹಾಸಿಗೆಯ ಮೇಲೆ ಕುಳಿತು ವಿದ್ಯಾರ್ಥಿಗಳು ಓದಬಾರದು. ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಓದಿದರೆ, ತುಂಬಾ ಉತ್ತಮ. ಹಾಸಿಗೆಯ ಮೇಲೆ ಕುಳಿದು ಓದುವುದರಿಂದ, ಏಕಾಗೃತೆ ಕಡಿಮೆಯಾಗುತ್ತದೆ. ಏಕೆಂದರೆ, ಹಾಸಿಗೆ ಎಂದರೆ, ನಿದ್ರೆ ಮಾಡುವ ಜಾಗ. ನಿದ್ದೆ ಮಾಡುವ ಜಾಗದಲ್ಲಿ ಏಕಾಗೃತೆ ಬರಲು ಸಾಧ್ಯವಿಲ್ಲ. ಹಾಗಾಗಿ ಏಕಾಗೃತೆಯಿಂದ ಓದಬೇಕು ಎಂದರಲ್ಲಿ, ಹಾಸಿಗೆಯಿಂದ ದೂರವಿದ್ದು ಓದಿ.

ಹಾಸಿಗೆಯ ಮೇಲೆ ಕುಳಿತು ದೇವರ ನಾಮ, ಭಜನೆ, ಶ್ಲೋಕ ಹೇಳಬೇಡಿ. ಶ್ಲೋಕ, ಭಜನೆ ಎಲ್ಲ ದೇವರ ನಾಮಸ್ಮರಣೆಯಾಗಿದೆ. ಮತ್ತು ಹಾಸಿಗೆಯ ಮೇಲೆ ನಾವು ನಿದ್ದೆ ಮಾಡುತ್ತೇವೆ. ಅದು ಪತಿ-ಪತ್ನಿ ಸೇರುವ ಜಾಗ. ಇಂಥ ಜಾಗ ದೇವರ ಪ್ರಾರ್ಥನೆ, ಭಜನೆ, ಶ್ಲೋಕ ಹೇಳಲು ಉತ್ತಮವಾದ ಜಾಗವಲ್ಲ. ಯಾಕಂದ್ರೆ ನಿದ್ರೆಯೂ ಮೈಲಿಗೆಗೆ ಸಮ. ಹಾಗಾಗಿ ರಾತ್ರಿ ನಿದ್ದೆ ಮಾಡಿ, ಬೆಳಗೆದ್ದ ತಕ್ಷಣ ಸ್ನಾನ ಮಾಡಿ, ಉಳಿದ ಕೆಲಸ ಮಾಡಬೇಕು ಅಂತಾ ಹಿರಿಯರು ಹೇಳಿದ್ದಾರೆ.

ಹಾಸಿಗೆಯ ಮೇಲೆ ಕುಳಿತು ಧ್ಯಾನ ಮಾಡಬಾರದು. ಧ್ಯಾನವೆಂದರೆ, ಏಕಾಗೃತೆ ಹೆಚ್ಚಿಸುವ ಸ್ಥಳ. ಮತ್ತು ಹಾಸಿಗೆಯ ಮೇಲೆ ಕುಳಿತಾಗ ಏಕಾಗೃತೆ ಹೆಚ್ಚಲು ಸಾಧ್ಯವೇ ಇಲ್ಲ. ಹಾಸಿಗೆ ಎಂದರೆ, ಕೇವಲ ವಿರಮಿಸಲು, ನಿದ್ರಿಸಲು ಇರುವ ಜಾಗ. ಆಲಸ್ಯ ಹೆಚ್ಚಿಸುವ ಸ್ಥಳ. ಹಾಗಾಗಿ ಹಾಸಿಗೆಯ ಮೇಲೆ ಕುಳಿತು ನೀವು ಧ್ಯಾನ ಮಾಡಿದರೆ, ಅದರಿಂದೇನೂ ಉಪಯೋಗವಾಗುವುದಿಲ್ಲ.

- Advertisement -

Latest Posts

Don't Miss