ನಮಸ್ತೆ ಗೆಳೆಯರೇ ಯಾವಾಗ ಒಬ್ಬ ವ್ಯಕ್ತಿ ಮೋಸವನ್ನು ಮಾಡುತ್ತಾನೆಯೋ ಆಗ ಆತನಿಗೆ ಖಂಡಿತವಾಗಿ ನಾಯಿಯೂ ನೆನಪಿಗೆ ಬರುತ್ತದೆ. ಆದರೆ ಸ್ನೇಹಿತರೇ ನಿಮ್ಗೆ ಈ ಒಂದು ವಿಷ್ಯಾ ಗೊತ್ತಿದೆಯೇ, ನಾಯಿ ಅಳುವುದು ಕೂಡ ಮನುಷ್ಯರಿಗೆ ಸಂಭಂದ ಪಟ್ಟ ವಿಷಯವಾಗಿದೆ. ಈ ನಾಯಿಗಳು ಏಕೆ ಅಳುತ್ತವೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಈ ಜಗತ್ತಿನಲ್ಲಿ ನಾಯಿಯನ್ನು ಅತಿ ನಿಯತ್ತಿನ ಪ್ರಾಣಿ ಅಂತ ನಂಬಲಾಗಿದೆ ಮತ್ತು ಹೇಳಲಾಗುತ್ತದೆ. ಮನುಷ್ಯನು ನಿಮ್ಮ ಮನೆಯಲ್ಲಿ ಇರುವ ಉಪ್ಪು ತಿಂದು ದ್ರೋಹ ಮಾಡಬಹುದು ಆದರೆ ನಾಯಿಯೂ ಯಾವಾಗ ಒಂದು ಮನೆಯ ರೊಟ್ಟಿಯನ್ನು ತಿನ್ನುತ್ತದೆಯೋ ತನ್ನ ಕೊನೆ ಉಸಿರು ಇರುವವರೆಗೂ ಆ ಮನೆಯವರಿಗೆ ಮೋಸ ಮಾಡುವುದಿಲ್ಲ, ಮತ್ತು ಅವರನ್ನು ಕಚ್ಚುವುದಿಲ್ಲ. ನಾಯಿಯ ಈ ಒಂದು ನಿಯತ್ತಿನ ಗುಣದಿಂದ ತುಂಬಾ ಜನರು ತಮ್ಮ ಮನೆಯಲ್ಲಿ ಸಾಕಲು ಇಷ್ಟ ಪಡುತ್ತಾರೆ. ಬೆಕ್ಕು ಕೂಡ ಸಾಕು ಪ್ರಾಣಿ. ಇದನ್ನು ಕೂಡ ಕೆಲವು ಜನರು ಸಾಕುತ್ತಾರೆ ಆದರೆ ಇದು ಅಷ್ಟೊಂದು ನಿಯತ್ತಾಗಿ ಇರುವುದಿಲ್ಲ. ಒಂದು ದಿನ ಯಾವತ್ತಾದರೂ ನೀವು ಪ್ರೀತಿ ಇಂದ ಏನಾದರೂ ತಿನ್ನಿಸಿದರೆ ಅದು ತನ್ನ ಜೀವನದುದ್ದಕ್ಕೂ ಬಾಲವನ್ನು ಅಲ್ಲಾಡಿಸುತ್ತಾ ನಿಮ್ಮ ಹಿಂದೆ ಬರುತ್ತದೆ. ಇನ್ನೂ ಬೆಕ್ಕಿಗೆ ನೀವು ಹಾಲನ್ನು ಕೊಟ್ಟರೆ ಮಾರನೆಯ ದಿನ ನೀವು ಅದಕ್ಕೆ ಹೊಡೆದರೆ ಖಂಡಿತವಾಗಿ ಅದು ನಿಮ್ಮನ್ನು ಕಚ್ಚಲು ಪ್ರಾರಂಭ ಮಾಡುತ್ತದೆ ನಾಯಿಯೂ ಮನುಷ್ಯನ ನಿಜವಾದ ಸ್ನೇಹಿತ ಆಗಿದೆ. ಮತ್ತು ಅವರಿಗೆ ಆಗುವ ನೋವುಗಳ ಬಗ್ಗೆ ಇದು ಸರಿಯಾಗಿ ತಿಳಿದುಕೊಳ್ಳುತ್ತದೆ. ನೀವು ಯಾವತ್ತಾದರೂ ಯೋಚನೆಯನ್ನು ಮಾಡಿದ್ದೀರಿ ಏನು? ರಾತ್ರಿ ಹೊತ್ತು ನಾಯಿಗಳು ಯಾಕೆ ಬೋಗಳುತ್ತವೆ ಅಂತ. ಮತ್ತು ರಾತ್ರಿ ವೇಳೆ ನಾಯಿಗಳು ಅಳುವುದಕ್ಕೆ ಅಶುಭ ಅಂತ ಯಾಕೆ ಕರೆಯುತ್ತಾರೆ ಏಕೆ ಗೊತ್ತೆ? ರಾತ್ರಿ ವೇಳೆ ನಾಯಿಗಳು ಅಳುತ್ತಿದ್ದರೆ ಅದು ಯಾರಾದರೂ ಸಾಯುವ ಸಂಕೇತವನ್ನು ತೋರಿಸುತ್ತದೆ. ಅಂದ್ರೆ ಕುಟುಂಬದಲ್ಲಿ ಯಾರಾದರೂಸಾವು ಆಗುವ ಸಾಧ್ಯತೆ ಇದೆ ಅಂತ ಸೂಚಿಸುತ್ತದೆ. ಇದಲ್ಲದೇ ಹಲವಾರು ಜನರ ನಂಬಿಕೆ ಪ್ರಕಾರ ನಾಯಿಗಳು ಪ್ರೇತ ಪಿಶಾಚಿ ಆತ್ಮಗಳನ್ನು ನೋಡಬಲ್ಲವು. ಅಕ್ಕ ಪಕ್ಕ ನಡೆಯುವ ಘಟನೆಗಳ ಬಗ್ಗೆ ಮೊದಲೇ ತಿಳಿದಿರುತ್ತದೆ. ಇಂಥಹ ಸ್ಥಿತಿಯಲ್ಲಿ ರಾತ್ರಿ ವೇಳೆ ಅಚಾನಕ್ ವಾಗಿ ನಾಯಿಗಳು ಅಳುವುದನ್ನು ಕಂಡರೆ ಇದರ ಅರ್ಥ ಯಾವುದಾದ್ರೂ ಪ್ರೇತಕ್ಕೆ ಹೋಲಿಕೆ ಮಾಡಲಾಗುತ್ತದೆ. ಈ ಮಾತುಗಳು ಸತ್ಯವೇ ಆಗಿದೆ. ಆದ್ರೆ ಒಂದು ವೇಳೆ ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಇದು ಏನು ಇರುವುದಿಲ್ಲ. ವಿಜ್ಞಾನಿಗಳು ಹಲವಾರು ಸಂಶೋಧನೆಯನ್ನು ಮಾಡಿದ್ದಾರೆ ಇದರ ನಂತರ ಹಲವಾರು ಅಚ್ಚರಿ ವಿಷಯ ಮೂಡಿ ಬಂದಿದೆ. ನಾಯಿಗಳು ಅಳುವುದಕ್ಕೆ ವೈಜ್ಞಾನಿಕವಾಗಿ ಹೌಲ್ ಅಂತ ಕರೆಯುತ್ತಾರೆ. ನಾಯಿಗಳು ನರಿಗಳಂತೆ ಒಂದು ಜಾತಿಗೆ ಸೇರಿವೆ. ಹಾಗಾಗಿ ಹೆಚ್ಚಾಗಿ ನಾಯಿಗಳು ನರಿಗಳಂತೆ ವ್ಯವಹಾರ ಮಾಡುತ್ತದೆ. ಇಂತಿಷ್ಟು ಗಲ್ಲಿಗೆ ಇಂತಿಷ್ಟು ನಾಯಿಗಳು ಇರುತ್ತದೆ ಅಲ್ಲಿ ಬೇರೆ ಯಾವುದಾದ್ರೂ ನಾಯಿ ಸೇರಿಕೊಂಡರೆ ಅವುಗಳು ಸಿಟ್ಟಿನಲ್ಲಿ ಕಿರಿಚಾಡುತ್ತವೆ. ಅದಕ್ಕಾಗಿ ಅವುಗಳು ಹೌಲ ಅನ್ನು ಮಾಡುತ್ತದೆ. ಹೌಲ ಅಂದ್ರೆ ಇದು ನಾಯಿಗಳ ಭಾಷೆ ಕೂಡ ಆಗಿದೆ. ಸಾಮಾನ್ಯವಾಗಿ ನಾಯಿಗಳಿಗೆ ಪಾತ್ರೆಗಳ ಶಬ್ದ ಸಮಾರಂಭದ ಶಬ್ದ ಇಷ್ಟ ಆಗುವುದಿಲ್ಲ. ಇಂಥಹ ಸ್ಥಿತಿಯಲ್ಲಿ ಅವುಗಳು ಕಿರುಚುತ್ತವೆ. ವಿರೋಧ ಮಾಡುತ್ತವೆ. ಇನ್ನೂ ಅಪರಿಚಿತ ವ್ಯಕ್ತಿಗಳು ಗಲ್ಲಿಯಲ್ಲಿ ಬಂದರೆ ಆಗ ಅವು ತಮ್ಮ ಜೊತೆಯಲ್ಲಿ ಇರುವ ನಾಯಿಗಳಿಗೆ ಆ ವ್ಯಕ್ತಿಗಳ ಮೇಲೆ ದೃಷ್ಟಿ ಇಡಲು ಹೇಳುತ್ತದೆ. ಇದರಿಂದ ಮನುಷ್ಯಗಿಂತ ನಾಯಿಯೂ ತುಂಬಾ ನಿಯತ್ತಿನ ಪ್ರಾಣಿ ಅಂತ ತಿಳಿದು ಬರುತ್ತದೆ.