Friday, June 20, 2025

Latest Posts

ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಯಾಕೆ ಗೊತ್ತಾ..!

- Advertisement -

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಹಿರಿಯರು ಹೇಳುವ ಹಾಗೆ ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು, ಇದರಿಂದ ಸಾಕಷ್ಟು ಕಷ್ಟಗಳು ನಷ್ಟಗಳು ಉಂಟಾಗುತ್ತವೆ ಎಂದು, ನಮ್ಮ ಶಾಸ್ತ್ರಗಳು ಕೂಡ ಇದನ್ನೇ ಹೇಳುತ್ತದೆ. ದೇವಾಲಯದ ಗೋಪುರ ನೆರಳುಗಳು ಮನೆಯ ಮೇಲೆ ಬೀಳುವುದು ಮನೆಯ ಅಭಿವೃದ್ಧಿಗೆ ಶ್ರೇಯಸ್ಕರವಲ್ಲ ಇದು ಸಾಕಷ್ಟು ಕಷ್ಟಗಳನ್ನು ಉಂಟುಮಾಡುತ್ತದೆ ಎಂದು, ಕೆಲವರು ವಿಧಿ ಇಲ್ಲದೆ ದೇವಸ್ಥಾನದ ಅಕ್ಕಪಕ್ಕವೇ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ. ಅಥವಾ ಈಗಾಗಲೇ ಮನೆಯು ಇರುತ್ತದೆ ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರಗಳನ್ನು ಅಥವಾ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಹಾಗಾದರೆ ಮನೆಯ ಮೇಲೆ ಗೋಪುರದ ನೆರಳಿಗಾಗಿ ಬೀಳಬಾರದು ಹಾಗೂ ಇದಕ್ಕೆ ಪರಿಹಾರ ಏನು ಎಂಬುವುದನ್ನು ನೋಡೋಣ. ದೇವಸ್ಥಾನಗಳಲ್ಲಿ ನಡೆಯುವಂತಹ ಪೂಜೆ-ಪುನಸ್ಕಾರಗಳು, ದೇವಾಲಯದಿಂದ ಹೊರಬರುವಂತಹ ಧೂಪ, ಆರತಿ ಗಂಟೆ ನಾದ ಇವು ಗುಡಿಯಲ್ಲಿರುವ ಗುಡಿಯ ಹತ್ತಿರ ಇರುವ ಎಲ್ಲಾ ರೀತಿಯ ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಈ ಸಂದರ್ಭದಲ್ಲಿ ಆ ಋಣಾತ್ಮಕ ಶಕ್ತಿಗಳು ದೇವಾಲಯದ ಹತ್ತಿರ ಇರುವಂತಹ ಮನೆಗಳಿಗೆ ಪ್ರವೇಶ ಮಾಡುವಂತಹ ಅವಕಾಶ ಇದ್ದು ಇದರಿಂದ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ದೇವಾಲಯದ ಅಕ್ಕಪಕ್ಕ ಮನೆಗಳು ಇರಬಾರದು. ದೇವಾಲಯದ ನೆರಳು ಮನೆಯ ಮೇಲೆ ಬೀಳಬಾರದು ಎಂದು ಹೇಳುವುದು. ಇನ್ನು ದೇವಾಲಯದ ಬಳಿ ಮನೆಗಳು ಇದ್ದರೆ ಅಥವಾ ಮನೆಯನ್ನು ನಿರ್ಮಾಣ ಮಾಡುವಂತಹ ಪರಿಸ್ಥಿತಿ ಎದುರಾದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಅದು ಏನೆಂದರೆ, ಮನೆಯು ದೇವಸ್ಥಾನ ಅಕ್ಕ ಪಕ್ಕದಲ್ಲಿದ್ದರೆ ಆಗ ಮನೆ ದೇವಸ್ಥಾನದ ಗೋಪುರಕ್ಕಿಂತ ಎತ್ತರ ಇರದಂತೆ ಎಚ್ಚರ ವಹಿಸಬೇಕು. ಇನ್ನು ಮನೆಯ ಬಾಗಿಲು ಕೂಡ ದೇಗುಲದ ಬಾಗಿಲಿಗಿಂತ ಎತ್ತರದಲ್ಲಿ ಇಬಾರದು, ಅದೇ ರೀತಿಯಾಗಿ ಮನೆಯ ಪಿಲ್ಲರ್ ಗಳು ಪೂರ್ವ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿರಬಾರದು. ಇನ್ನು ಮನೆಯ ಮುಖ್ಯದ್ವಾರದ ಮೇಲೆ ದೇವಸ್ಥಾನದ ನೆರಳು ಬೀಳದಂತೆ ಕ್ರಮ ಕೈಗೊಳ್ಳಬೇಕು, ಅದರಲ್ಲೂ ಶಿವ, ಸೂರ್ಯ, ವಿಷ್ಣು ದೇಗುಲದ ಎದುರು ಮುಂಬಾಗಿಲು ಬಾರದಂತೆ ಯೋಜನೆ ಮಾಡಿಕೊಳ್ಳಬೇಕು. ಈ ರೀತಿಯ ದೇವಾಲಯಗಳ ಬಳಿ ಮನೆಗಳು ಇದ್ದರೆ ಅಥವಾ ಮನೆಯನ್ನು ನಿರ್ಮಾಣ ಮಾಡುವಂತಹ ಪರಿಸ್ಥಿತಿ ಎದುರಾದರೆ ಈ ತಪ್ಪುಗಳು ನಡೆಯದಂತೆ ನಿಯಮಗಳನ್ನು ಅನುಸರಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಷ್ಟಗಳು ಎದುರಾಗುವುದಿಲ್ಲ.

- Advertisement -

Latest Posts

Don't Miss