Health Tips: ಮಾರುಕಟ್ಟೆಯಲ್ಲಿ ಸೋಡಾ ಬಳಸಿ, ಪ್ಯಾಕ್ ಆಗಿ ಬರುವ ತಂಪು ಪಾನೀಯವೇ ಹಾಗೆ. ಒಮ್ಮೆ ಕುಡಿದರೆ, ಮತ್ತೆ ಮತ್ತೆ ಕುಡಿಯಬೇಕು ಅನ್ನಿಸುವ ಹಾಗೆ ಇರತ್ತೆ. ಅದರಲ್ಲೂ ಮನೆಗೆ ತಂದು ಫ್ರಿಜ್‌ನಲ್ಲಿರಿಸಿ, ಸಿಪ್ ಸಿಪ್ ಕುಡಿತಿದ್ರೆ, ಒಂದೇ ದಿನ ಒಂದು ಬಾಟಲ್ ಖಾಲಿ ಮಾಡಬೇಕು ಅನ್ನಿಸುತ್ತೆ. ಆದ್ರೆ ನೀವೇನಾದ್ರೂ ಕೂಲ್ ಡ್ರಿಂಕ್ಸ್ ಕುಡಿಯೋದೇ ಚಟ ಮಾಡಿಕೊಂಡ್ರೋ, ನಿಮ್ಮ ಕಿಡ್ನಿ, ಲಿವರ್ ಹಾಳಾಗೋಕ್ಕೆ ಹೆಚ್ಚು ಸಮಯ ಆಗೋದಿಲ್ಲ. ಹಾಗಾದ್ರೆ ಕೂಲ್ ಡ್ರಿಂಕ್ಸ್ ಕುಡಿಯೋದು ಯಾಕೆ ಆರೋಗ್ಯಕ್ಕೆ ಮಾರಕ ಅಂತಾ ತಿಳಿಯೋಣ ಬನ್ನಿ..
ಯಾಕೆ ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಮಾರಕ ಅಂದ್ರೆ, ಇದರಲ್ಲಿ ಅತೀ ಹೆಚ್ಚು ಪ್ರಮಾಣದ ಸಕ್ಕರೆ ಬಳಸಿರುತ್ತಾರೆ. ಕೆಲ ಅವಿವೇಕಿ ಪೋಷಕರು ಪುಟ್ಟ ಮಕ್ಕಳಿಗೆ ಆಸೆ ಎಂದು, ಇಂಥ ಕೂಲ್ ಡ್ರಿಂಕ್ಸ್ ತಂದು ಪ್ರಿಜ್‌ನಲ್ಲಿ ಇಟ್ಟು ಬಿಡ್ತಾರೆ. ಮಕ್ಕಳು ಪದೇ ಪದೇ ಹೋಗಿ, ಪ್ರತಿದಿನ ಅದನ್ನೇ ಕುಡಿತಾವೆ. ಬಳಿಕ ಚಿಕ್ಕ ವಯಸ್ಸಿಗೆ ಅವುಗಳಿಗೆ ಡಯಾಬಿಟೀಸ್ ಬಂದು, ಜೀವ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಕೂಲ್ ಡ್ರಿಂಕ್ಸ್ ಕುಡಿಯಲೇಬಾರದು ಅಂತಾ ಹೇಳೋದು.
ಎರಡನೇಯದಾಗಿ ಲಿವರ್‌ನಲ್ಲಿ ಕೊಬ್ಬು ಜಮೆಯಾಗಿ, ಲಿವರ್ ಆರೋಗ್ಯ ಹಾಳಾಗೋಕ್ಕೆ, ಈ ಕೂಲ್ ಡ್ರಿಂಕ್ಸ್ ಕಾರಣ. ಲಿವರ್ ಡ್ಯಾಮೇಜ್ ಆಗುವುದು, ಶುಗರ್ ಬರುವುದು, ಸರಿಯಾಗಿ ನಿದ್ರೆ ಬಾರದೇ, ಮಾನಸಿಕ ತೊಂದರೆ ಉಂಟಾಗುವುದೆಲ್ಲ ಆಗುತ್ತದೆ. ಹಾಗಾಗಿ ಕೂಲ್ ಡ್ರಿಂಕ್ಸ್ ಸೇವನೆ ಮಾಡಬಾರದು.
ಅಷ್ಟೇ ಅಲ್ಲದೇ, ಕಿಡ್ನಿ ಫೇಲ್ ಆದವರ ಬಳಿ ಹೋಗಿ, ನಿಮ್ಮ ಕಿಡ್ನಿ ಫೇಲ್ ಆಗಲು ಕಾರಣವೇನು ಅಂತಾ ಕೇಳಿದ್ರೆ, ಹೆಚ್ಚಿನವರು ಕೊಡುವ ಉತ್ತರ, ನಾನು ಹೆಚ್ಚು ಕೂಲ್ ಡ್ರಿಂಕ್ಸ್, ಸೋಡಾ ಕುಡಿಯುತ್ತಿದ್ದೆ ಅಂತ. ಇದರಿಂದಲೇ, ಕಿಡ್ನಿ ಫೇಲ್ ಆಗುವುದೆಂದು ಸಾಬೀತು ಕೂಡ ಆಗಿದೆ. ಹಾಗಾಗಿ ಕೂಲ್ ಡ್ರಿಂಕ್ಸ್ ಕುಡಿಯುವುದು ಆರೋಗ್ಯಕ್ಕೆ ಮಾರಕ.