Saturday, July 12, 2025

Latest Posts

Recipe: ಪಾಲಕ್ ಕೋಫ್ತಾ ಕರ್ರಿ ರೆಸಿಪಿ

- Advertisement -

Recipe: ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ, ಪಲಾವ್ ಎಲೆ, ಹಸಿಮೆಣಸು, ಸಣ್ಣಗೆ ಹೆಚ್ಚಿದ ಪಾಲಕ್ ಹಾಕಿ, ಹಸಿವಾಸನೆ ಹೋಗುವವರೆಗೂ ಹುರಿದುಕ“ಳ್ಳಿ. ಬಳಿಕ ಈ ಮಿಶ್ರಣ ತಣ್ಣಗಾದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ತಯಾರಿಸಿ.

ಬಳಿಕ ಮಿಕ್ಸಿಂಗ್ ಬೌಲ್‌ಗೆ ಪಾಲಕ್ ಪೇಸ್ಟ್, ತುರಿದ ಪನೀರ್, ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಕಾಲು ಕಪ್ ಕಡಲೆಹುಡಿ, ಸ್ವಲ್ಪ ಗೋಡಂಬಿ, ಕಾಲು ಸ್ಪೂನ್ ಗರಂ ಮಸಾಲೆ, ಉಪ್ಪು, ಇವಿಷ್ಟು ಹಾಕಿ ಮಿಕ್ಸ್ ಮಾಡಿ. ಇದರಿಂದ ಉಂಡೆ ಅಥವಾ ಚಪ್ಪಟೆ ಆಕಾರ ಮಾಡಿ, ಕಾರ್ನ್ ಫ್ಲೋರ್ ಹುಡಿಯಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಪಾಲಕ್ ಕೋಫ್ತಾ ರೆಡಿ.

ಈಗ ಕರ್ರಿ ಮಾಡಲು ಪ್ಯಾನ್ ಬಿಸಿ ಮಾಡಿ ಅದಕ್ಕೆ 2 ಸ್ಪೂನ್ ತುಪ್ಪ, ಜೀರಿಗೆ, ಪಾಲಕ್ ಎಲೆ, ಸೋಂಪು, ಕಸೂರಿ ಮೇಥಿ ಹಾಕಿ ಹುರಿಯಿರಿ. ಬಳಿಕ 2 ಈರುಳ್ಳಿ, 2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೆಸ್ಟ್, ಅರಿಶಿನ, ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, 2 ಕಪ್ ಟೋಮೆಟೋ ಪ್ಯೂರಿ ಹಾಕಿ ಮಂದ ಉರಿಯಲ್ಲಿ ಬೇಯಿಸಿ. ನಂತರ ಕಾಲು ಕಪ್ ಕ್ರೀಮ್, ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ನೀರು ಹಾಕಿ ಬೇಕಾದಷ್ಟು ಬೇಯಿಸಿ. ಇದಕ್ಕೆ ಈಗಾಗಲೇ ರೆಡಿ ಮಾಡಿದ ಪಾಲಕ್ ಕೋಫ್ತಾ, ಗರಂ ಮಸಾಲೆ, ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿದರೆ ಪಾಲಕ್ ಕೋಫ್ತಾ ಕರ್ರಿ ರೆಡಿ.

- Advertisement -

Latest Posts

Don't Miss