Friday, November 22, 2024

Latest Posts

ನೀವು ತಿನ್ನಲು ಇಷ್ಟಪಡುವ ಮೊಮೊಸ್ ಎಷ್ಟು ಅಪಾಯಕಾರಿ ಗೊತ್ತಾ..?

- Advertisement -

Health:

ಮೊಮೊಸ್ ತಿನ್ನಲು ಯಾರಿಗೆ ಇಷ್ಟವಿಲ್ಲ.. ಶಾಲೆ, ಕಾಲೇಜು, ಕಚೇರಿಯಿಂದ ಹಿಂತಿರುಗಿ ಬರುವಾಗ ರಸ್ತೆ ಬದಿ ನಿಂತು ಮೊಮೊಸ್ ತಿನ್ನುತ್ತೀರಿ, ಅಥವಾ ಮನೆಗೆ ತಲುಪುವಾಗ ಅದನ್ನು ಪ್ಯಾಕ್ ಮಾಡಿ ಮನೆಯಲ್ಲಿ ತಿನ್ನಲು ತೆಗೆದುಕೊಳ್ಳುತ್ತೀರಿ. ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ.. ಮೊಮೊಸ್‌ನಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ನಿಮಗೆ ಗೋತ್ತಾ ?.. ಅದರಲ್ಲಿ ಎಣ್ಣೆ ಮತ್ತು ಮಸಾಲೆಗಳಿರುವುದಿಲ್ಲ ಹಾಗಾದರೆ ಇದು ಹೇಗೆ ಅಪಾಯಕಾರಿ ಎಂದು ಹಲವರು ಅಂದುಕೊಳ್ಳುತ್ತಾರೆ. ಎಷ್ಟೇ ತಿಂದರೂ ದೇಹಕ್ಕೆ ದುಷ್ಪರಿಣಾಮ ಬೀರುವುದಿಲ್ಲ ಎಂದುಕೊಳ್ಳುವುದು ತುಂಬಾ ತಪ್ಪು..ಹಾಗಾದರೆ ಮೊಮೊಸ್ ನಿಮ್ಮ ದೇಹಕ್ಕೆ ಹೇಗೆ ಹಾನಿಕಾರಕ ಎಂಬುದನ್ನು ತಿಳಿದುಕೊಳ್ಳೋಣ .

ನಿಮಗೆ ತಿಳಿದಿರುವಂತೆ, ಮೊಮೊಸ್ ಗಳನ್ನೂ ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟಿನಲ್ಲಿ ಅಜೋಡಿಕಾರ್ಬೊನಮೈಡ್ ಮತ್ತು ಬೆಂಜಾಯ್ಲ್ ಪೆರಾಕ್ಸೈಡ್ ಸಮೃದ್ಧವಾಗಿದೆ. ಮೊಮೊಸ್ ಅನ್ನು ಹೆಚ್ಚು ಕಾಲ ಮೃದುವಾಗಿಡಲು ಅಲೋಕ್ಸಾನ್ ಎಂಬ ದ್ರವವನ್ನು ಸೇರಿಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮೈದಾ ಹಿಟ್ಟು ಮಾಡಲು ಅದಕ್ಕೆ ಸೇರಿಸುವ ವಿಶೇಷ ವಸ್ತು ದೇಹಕ್ಕೆ ಒಳ್ಳೆಯದಲ್ಲ. ಈ ನಿರ್ದಿಷ್ಟ ವಸ್ತುವು ದೇಹದಲ್ಲಿನ ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸುತ್ತದೆ. ಅಲ್ಲದೆ ಮಧುಮೇಹವನ್ನು ಹೆಚ್ಚಿಸುತ್ತದೆ.

ನಾನ್ ವೆಜ್ ಮೊಮೊಸ್ .
ಅದರಲ್ಲೂ ನಾನ್ ವೆಜ್ ಮೊಮೊಸ್ ಹೆಚ್ಚು ಅಪಾಯಕಾರಿ. ಮಾಂಸಾಹಾರಿ ಮೊಮೊಸ್ ಗಳನ್ನೂ ಚಿಕನ್ ಜೊತೆ ನೀಡಲಾಗುತ್ತದೆ. ಇದರ ಗುಣಮಟ್ಟ ತುಂಬಾ ಕಡಿಮೆ. ಇದು ಎಂಥಹ ವ್ಯಕ್ತಿಯನ್ನು ಬೇಕಾದರೂ ಅನಾರೋಗ್ಯಕ್ಕೆ ಒಳಪಡಿಸಬಹುದು.

ಮೊಮೊಸ್ ಜೊತೆ ಕೆಂಪು ಚಟ್ನಿ
ಮೊಮೊಸ್ ಜೊತೆ ಕೆಂಪು ಚಟ್ನಿಯನ್ನು ಕೊಡುತ್ತಾರೆ . ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಕೆಂಪು ಚಟ್ನಿಯನ್ನು ಮೊಮೊಸ್ ಜೊತೆ ತಿನ್ನಲಾಗುತ್ತದೆ. ಇದರ ರುಚಿ ತುಂಬಾ ಖಾರವಾಗಿ ಚೆನ್ನಾಗಿರುತ್ತದೆ .ಹಾದರೆ ಇದು ಹೊಟ್ಟೆಗೆ ಸಂಬಂಧಿಸಿದಂತೆ ಒಳ್ಳೆಯದಲ್ಲ ಇದರಿಂದ ಹೊಟ್ಟೆಗೆ ಸಂಬಂದಿಸಿದ ಕಾಯೆಲೆಗಳು ಹೆಚ್ಚಾಗುತ್ತದೆ ಎಂದು ಪರಿಗಣಿಸಲಾಗಿದೆ .

ಸ್ಥೂಲಕಾಯಕ್ಕೆ ಕಾರಣವಾಗುತ್ತದೆ
ಮೊಮೊಸ್‌ನಲ್ಲಿ ಮೊನೊ-ಸೋಡಿಯಂ ಗ್ಲುಟಮೇಟ್ (MSG) ಅಧಿಕವಾಗಿದೆ, ಇದು ಬೊಜ್ಜುಗೆ ಕಾರಣವಾಗುವುದಲ್ಲದೆ ನರವೈಜ್ಞಾನಿಕ ಅಸ್ವಸ್ಥತೆಗಳು, ಬೆವರುವಿಕೆ, ಎದೆ ನೋವು ವಾಕರಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ ಅಕ್ಕಿ ಹಿಟ್ಟಿನಿಂದ ಮಾಡಿದರೆ ಸ್ವಲ್ಪ ಆರೋಗ್ಯಕ್ಕೆ ಒಳ್ಳೆಯದು ಆದರೆ ಹೋಟೆಲ್ ಗಳಲ್ಲಿ ಹಾಗೆ ಮಾಡುವುದಿಲ್ಲ.. ಮೈದಾ ಹಿಟ್ಟು ಬಳಸುತ್ತಾರೆ. ಮೈದಾ ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಹದಾಕಾರಣ ಇದನ್ನು ಅತಿಯಾಗಿ ತಿನ್ನುವುದನ್ನು ತಪ್ಪಿಸಿ .

ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆಯೇ ಎಚ್ಚರ ..!

ರಾಮಫಲ ದಿಂದ ಆರೋಗ್ಯ ಲಾಭಗಳು ..!

ನೀವು ಚಳಿಗಾಲದಲ್ಲಿ ಹಲ್ಲುನೋವಿನಿಂದ ಬಳಲುತ್ತಿದ್ದೀರಾ..?

- Advertisement -

Latest Posts

Don't Miss