Web News: ಉತ್ತರಪ್ರದೇಶದ ಅಲಹಾಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟ್ಯಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಾಯಾಗಿದ್ದಾರೆ. ಇಷ್ಟು ಜನ ಸೇರುವ ಈ ಸಂಭ್ರಮದಲ್ಲಿ ಫೆವಿಕೋಲ್ ತಮ್ಮ ಬ್ರ್ಯಾಂಡ್‌ನ್ನು ಡಿಫ್ರೆಂಟ್ ಆಗಿ ಪ್ರಮೋಟ್ ಮಾಡಿದೆ. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.
ಕೋಟ್ಯಂತರ ಜನ ಸೇರುವ ಜಾಗದಲ್ಲಿ ನೂಕು ನುಗ್ಗಲು ಉಂಟಾಗುವುದು ಸಹಜ. ಈ ವೇಳೆ ಒಬ್ಬರಿಂದ ಒಬ್ಬರು ದೂರಾಗಿ ಕಳೆದು ಹೋಗಬಹುದು. ಮೊಬೈಲ್ ಇದ್ದರೆ ಕಾಲ್ ಮಾಡಿ, ಮತ್ತೆ ಒಂದಾಗಬಹುದಾದರೂ, ಕಷ್ಟವಾಗಬಹುದು. ಇಂಥ ವಿಷಯಗಳನ್ನು ಗಮನವಿಟ್ಟುಕೊಂಡಿರುವ ಫೆವಿಕೋಲ್, ಮೂರರಿಂದ ನಾಲ್ಕು ಜನರು, ಒಮ್ಮೆಲೆ ಧರಿಸಿ, ಓಡಾಡಬಹುದಾದ ಟೀ ಶರ್ಟ್‌ಗಳನ್ನು ಪರಿಚಯಿಸಿದ್ದು, ಇದರ ಮೇಲೆ ನಾವೆಂದಿಗೂ ದೂರವಾಗುವುದಿಲ್ಲ ಎಂದು ಬರೆಯಿಸಿದ್ದಾರೆ.
ಹಳದಿ ಬಣ್ಣದ ಈ ಶರ್ಟ್‌ಗಳನ್ನು ಧರಿಸಿ, ಹಲವರು ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಹೀಗೆ ಟೀ ಶರ್ಟ್‌ಗಳನ್ನು ಮಾರಾಟ ಮಾಡುವ ಮೂಲಕ, ತಮ್ಮದೇ ಶೈಲಿಯಲ್ಲಿ ಫೆವಿಕೋಲ್ ತಮ್ಮ ಬ್ರ್ಯಾಂಡ್‌ನ್ನು ಪ್ರಮೋಟ್ ಮಾಡಿದೆ. ಇನ್ನು ಹೆಚ್ಚಿನ ಜನ ತಮ್ಮ ಮಕ್ಕಳಿಗಾಗಿ ಈ ಟೀ ಶರ್ಟ್ ಖರೀದಿಸಿ, ಮಕ್ಕಳಿಗೆ ಹಾಕಿದ್ದಾರೆ. ಇದರಿಂದ ಮಕ್ಕಳು ಸುರಕ್ಷಿತವಾಗಿರಲಿ ಅನ್ನೋದು ಪೋಷಕರ ಯೋಚನೆ.