Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ ಗರ್ಭದ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ಒಂದು ಶಿಶುವಿಗೆ ತಾಯಿಯ ಗರ್ಭಕ್ಕಿಂತ ಉತ್ತಮವಾದ ಮನೆ ಇನ್ನೊಂದಿಲ್ಲ. ಆದರೆ ಮಗು 40 ವಾರಕ್ಕಿಂತ ಹೆಚ್ಚು ಕಾಲ ತಾಯಿಯ ಹೊಟ್ಟೆಯಲ್ಲಿ ಇರಬಾರದು ಅಂತಾರೆ ವೈದ್ಯರು. ಆದರೆ ಕೆಲವರು ಬೇಗ ಸಿಸರಿನ್ ಮಾಡಿ, ಡಿಲೆವರಿ ಮಾಡಲು ಮುಂದಾಗುತ್ತಾರೆ. ಆದರೆ ಅಂಥ ತಪ್ಪು ಎಂದಿಗೂ ಮಾಡಬಾರದು.
ಇನ್ನು ಮಗು ಜನಿಸಿದ ಬಳಿಕ, ಪ್ರತೀ ತಾಯಿ ತನ್ನ ಎದೆ ಹಾಲನ್ನು ಮಗುವಿಗೆ ಕುಡಿಸಬೇಕು. ಕೆಲವರು ತಮ್ಮ ದೇಹದ ಅಂದ ಚೆಂದ ಹಾಳಾಗುತ್ತದೆ ಎಂಬ ಕಾರಣಕ್ಕೆ, ಮಗುವಿಗೆ ಎದೆ ಹಾಲನ್ನು ಕುಡಿಸುವುದಿಲ್ಲ. ಹೊರಗಿನ ಹಾಲನ್ನು ಅಥವಾ ಹಾಲಿನ ಪುಡಿಯನ್ನು ನೀರಿಗೆ ಸೇರಿಸಿ, ಕುಡಿಸುತ್ತಾರೆ. ಇದು ತಪ್ಪು, ತಾಯಿ ತನ್ನ ಎದೆ ಹಾಲನ್ನು ಮಕ್ಕಳಿಗೆ ಕುಡಿಸುವುದರಿಂದ ಮಗು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತದೆ. ಅಲ್ಲದೇ ತಾಯಿಯ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.