Health Tips: ಹರಳೆಣ್ಣೆ ದೇಹಕ್ಕೆ ತಂಪು ನೀಡುವ ವಸ್ತು. ಹಾಗಾಗಿಯೇ ಇದನ್ನು ತಲೆಗೆ ಹಚ್ಚುವಾಗ, ಕೊಂಚ ಬಿಸಿ ಮಾಡಿ ಹಚ್ಚಲಾಗುತ್ತದೆ. ತೆಂಗಿನ ಎಣ್ಣೆ, ಹರಳೆಣ್ಣೆ ಮತ್ತು ವಿಟಾಮಿನ್ ಈ ಎಣ್ಣೆಯನ್ನು ಬಿಸಿ ಮಾಡಿ, ತಲೆಗೆ ಹೆಚ್ಚುವುದರಿಂದ ಕೂದಲು ದಡ್ಡವಾಗಿ ಬೆಳೆಯುತ್ತದೆ. ಆದರೆ ಇಂದು ನಾವು ಹರಳೆಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮಗೆ ಏನೇನು ಉಪಯೋಗವಾಗುತ್ತದೆ ಎಂದು ತಿಳಿಯೋಣ ಬನ್ನಿ.
ಹೊಕ್ಕಳಿಗೆ ಹರಳೆಣ್ಣೆ ಹಚ್ಚುವುದರಿಂದ ಹೆಣ್ಣು ಮಕ್ಕಳ ಮುಟ್ಟಿನ ಹೊಟ್ಟೆನೋವು ಕಂಟ್ರೋಲಿಗೆ ಬರುತ್ತದೆ. ಏಕೆಂದರೆ, ಹರಳೆಣ್ಣೆ ದೇಹಕ್ಕೆ ತಂಪು ನೀಡುತ್ತದೆ. ಹೊಕ್ಕಳಿನ ಮೂಲಕ ಹರಳೆಣ್ಣೆ ದೇಹಕ್ಕೆ ಹೋಗಿ, ದೇಹದಲ್ಲಿ ಉಷ್ಣತೆ ಕಡಿಮೆಗೊಳಿಸಿ, ಮುಟ್ಟಿನ ಹೊಟ್ಟೆನೋವು ಕಡಿಮೆ ಮಾಡುತ್ತದೆ.
ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ. ತ್ವಚೆಯಲ್ಲಿ ಕಾಂತಿ ಬರುತ್ತದೆ. ನಿಮ್ಮ ಚರ್ಮ ಬಾಡಿ ಹೋದ ಹಾಗಿದ್ದರೆ, ನೀವು ಹೊಕ್ಕಳಿಗೆ ಎಣ್ಣೆ ಹಾಕಿ, ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.
ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಜೀರ್ಣಕ್ರಿಯೆ ಕೂಡ ಉತ್ತಮವಾಗುತ್ತದೆ. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಅಥವಾ ನಿಮಗೆ ಹೊಟ್ಟೆ ನೋವಿನ ಸಮಸ್ಯೆ ಇದ್ದಲ್ಲಿ, ನೀವು ಹೊಕ್ಕಳಿಗೆ ಹರಳೆಣ್ಣೆ ಹಚ್ಚಿ ನೋಡಿ. ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅಲ್ಲದೇ ಹೊಟ್ಟೆ ನೋವು ಉಂಟಾಗುತ್ತದೆ. ಹೊಕ್ಕಳಿಗೆ ಹರಳೆಣ್ಣೆ ಹಾಕುವುದರಿಂದ ದೇಹ ತಂಪಾಗಿ, ತಿಂದ ಆಹಾರ ಚೆನ್ನಾಗಿ ಜೀರ್ಣವಾಗುವುದಲ್ಲದೇ, ಹೊಟ್ಟೆ ನೋವು ಕೂಡ ಇರುವುದಿಲ್ಲ.