Hubballi News: ಹುಬ್ಬಳ್ಳಿ: ಮಾಟ ಮಂತ್ರದ ಹೆಸರಿನಲ್ಲಿ ಚಿನ್ನಾಭರಣ ದೋಚಲು ಬಂದ ಫಕೀರ ವೇಷಧಾರಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಮಿಲ್ಲತ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಜಯತನುಬಿ ಎಂಬಾಕೆಯ ಮನೆಗೆ ಬಂದ ಫಕೀರ, ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ದೊಡ್ಡ ಅನಾಹುತ ಸಂಭವಿಸಲಿದೆ. ನಿಮ್ಮ ಚಿನ್ನಾಭರಣಗಳನ್ನು ಮಾಟಮಂತ್ರವನ್ನು ಮನೆಯಲ್ಲಿನ ಮಡಿಕೆಯಲ್ಲಿ ಹಾಕಿಕೊಡಿ . ಮನೆಗಂಟಿದ ಮಾಟವನ್ನು ತೆಗೆಯುತ್ತೇವೆ ಎಂದು ಆತನೇ ತಂದ ಮಡಿಕೆಗೆ ಚಿನ್ನವನ್ನು ಹಾಕಿಸಿಕೊಂಡು, ನಕಲಿ ಫಕೀರ ಮಹಿಳೆಯೊಬ್ಬರನ್ನು ನಂಬಿಸಿದ 1.65ಲಕ್ಷ ಚಿನ್ನಾಭರಣ ಎಗರಿಸಿದ್ದ.
ಅದರಂತೆಯೇ ಮಹಿಳೆ ಚಿನ್ನಾಭರಣ ಹಾಕಿಕೊಟ್ಟ ಮಡಿಕೆಯನ್ನು ಮಂತ್ರಿಸುವ ನೆಪದಲ್ಲಿ, ಅವರ ಗಮನ ಬೇರೆಡೆಗೆ ಸೆಳೆದು ಖಾಲಿ ಮಡಿಕೆಯನ್ನು ಮಹಿಳೆಗೆ ಕೊಟ್ಟು ಚಿನ್ನಾಭರಣಗಳಿದ್ದ ಮಡಿಕೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಬಳಿಕ ತಾನು ಎಂಥ ತಪ್ಪು ಮಾಡಿದ್ದೇನೆಂದು ಮಹಿಳೆಗೆ ಅರಿವಾಗಿ, ಆಕೆ ಸ್ಥಳೀಯರಿಗೆ ಈ ಬಗ್ಗೆ ಹೇಳಿದ್ದಾರೆ.
ಆಗ ಎಲ್ಲಾ ಕಡೆ ಹುಡಕಿದಾಗ, ಈ ನಕಲಿ ಫಕೀರ ಸ್ಥಳೀಯರ ಕೈಗೆ ಸಿಲುಕಿಕೊಂಡಿದ್ದಾನೆ. ಸ್ಥಳಿಯರು ಫಕೀರನ ವೇಷಧಾರಿಯನ್ನು ತರಾಟೆಗೆ ತಗೆದುಕೊಂಡು ಬೆಂಡಿಗೇರಿ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
‘ರಾವಣ ತಲೆಗಳ ಕಾಂಗ್ರೆಸ್ ಪಕ್ಷಕ್ಕೆ ಮೈಯ್ಯೆಲ್ಲಾ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ’
‘ಪ್ರಜ್ವಲ್ ರೇವಣ್ಣರ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಇದ್ದಾರೆ ಎಂಬ ಹೇಳಿಕೆ ಹಾಸ್ಯಸ್ಪದ’
ಬಾಲಿವುಡ್ ನಟಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು: 12 ವರ್ಷದ ದಾಂಪತ್ಯ ಜೀವನ ಅಂತ್ಯ