Nasik News: 7ರಿಂದ 10ನೇ ತರಗತಿ ಓದುವ ಮಕ್ಕಳ ಬ್ಯಾಗ್‌ನಲ್ಲಿ ಏನೇನಿರಬಹುದು ಅಂತಾ ಅಂದಾಜಿಸಿದರೆ, ಪೆನ್ನು, ಪುಸ್ತಕ, ಕಂಪಾಸ್ ಬಾಕ್ಸ್, ಟಿಫಿನ್ ಬಾಕ್ಸ್, ನೀರಿನ ಬಾಟಲಿ, ಚಾಕೋಲೇಟ್ಸ್, ಹೀಗೆ ಕೆಲವು ನಾರ್ಮಲ್ ಆಗಿರುವ ವಸ್ತುಗಳಿರುತ್ತದೆ ಅಂತಾ ನೀವು ಹೇಳಬಹುದು. ಆದರೆ ಇದೆಲ್ಲ ಮೊದಲಿನ ಕಾಲಕ್ಕೆ ಸಮೀತವಾಗಿದೆ. ಈಗಿನ ಕಾಲದ ಕೆಲ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಏನು ಸಿಗತ್ತೆ ಅಂತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ನಾಸಿಕ್‌ನ ಘೋಟಿಯ ಶಾಲೆಯೊಂದರಲ್ಲಿ ಕೆಲವು ದಿನಗಳಿಂದ ಮಕ್ಕಳ ಬ್ಯಾಗ್ ಚೆಕ್ ಮಾಡಲಾಗುತ್ತಿದೆ. ಮಕ್ಕಳ ಬ್ಯಾಗ್‌ನಲ್ಲಿ ಸಂಗ್ರಹಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಪ್ಯಾಕೇಟ್ಸ್, ಇಸ್ಪೀಟ್ ಕಾರ್ಡ್ಸ್, ಚಾಕು ಈ ರೀತಿಯ ವಸ್ತುಗಳು ಪತ್ತೆಯಾಗಿದೆ.
ಮಕ್ಕಳು ಅಡ್ಡ ದಾರಿ ಹಿಡಿಯುವುದನ್ನು ತಪ್ಪಿಸಲು ಶಾಲಾ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ. ಈ ಕ್ರಮಕ್ಕೆ ಪೋಷಕರು ಸಹ ಸಾಥ್ ನೀಡಿದ್ದು, ಶಾಲಾ ಆಡಳಿತ ಮಂಡಳಿ ಮಾಡುತ್ತಿರುವ ಕೆಲಸ ಸರಿಯಾಗಿದೆ. ಇದರಿಂದ ಮಕ್ಕಳು ಅಡ್ಡ ದಾರಿ ಹಿಡಿಯುವುದನ್ನು ತಪ್ಪಿಸಬಹುದು. ಮ್ಕಳ ಬ್ಯಾಗ್‌ನಲ್ಲಿ ಇಂಥ ವಸ್ತುಗಳು ಸಿಕ್ಕಿರುವುದು ತೀರಾ ಆತಂಕಕಾರಿ ಬೆಳವಣಿಗೆ ಎಂದು ಪೋಷಕರು ಹೇಳಿದ್ದಾರೆ.