Monday, July 22, 2024

Latest Posts

ಕೊಳಕು ಸಂದೇಶ ಬಂದಾಗ ಏನ್‌ ಮಾಡಿದೆ ಗೊತ್ತೆ? ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ ಎಂದ ರಮ್ಯಾ

- Advertisement -

Sandalwood News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಟ ದರ್ಶನ್‌ ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚುತ್ತಿರುವ ಟ್ರೋಲ್‌ಗಳ ಕುರಿತು ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಕಿಡಿಕಾರಿದ್ದಾರೆ.

ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಸುದೀರ್ಘ ಬರಹ ಬರೆದುಕೊಂಡಿರುವ ರಮ್ಯಾ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲು ಹೋಗಬಾರದು. ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಬ್ಲಾಕ್‌ ಆಯ್ಕೆಯನ್ನು ನೀಡಲಾಗಿದೆ. ಬ್ಲಾಕ್‌ ಮಾಡಿದರೂ ಟ್ರೋಲಿಂಗ್‌ ಮುಂದುವರೆದರೆ ನೀವು ದೂರು ದಾಖಲಿಸಬೇಕು. ನನ್ನನ್ನು ಟ್ರೋಲಿಗರು ನಿರಂತರವಾಗಿ ಕೊಳಕು ಭಾಷೆ ಬಳಸಿ ಟ್ರೋಲ್‌ ಮಾಡಿದ್ದಾರೆ. ನನಗೆ ಮಾತ್ರವಲ್ಲ. ಇತರೆ ನಟಿನಟರನ್ನೂ ಟ್ರೋಲ್‌ ಮಾಡಿದ್ದಾರೆ. ಹೆಂಡತಿ, ಮಕ್ಕಳನ್ನು ಬಿಡದೆ ಟ್ರೋಲ್‌ ಮಾಡಿದ್ದಾರೆ. ಎಂತಹ ಶೋಚನೀಯ ಸಮಜಾದಲ್ಲಿ ನಾವು ಬದುಕುತ್ತಿದ್ದೇವೆ? ಎಂದು ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ರೀತಿ ಕೆಟ್ಟ ಟ್ರೋಲ್‌ಗಳಿಗೆ ಕೆಲವೊಮ್ಮೆ ಉತ್ತರಿಸಬೇಕಾಗುತ್ತದೆ. ಯಾವುದೇ ಕಾನೂನು ಪಾಲಿಸುವ ನಾಗರಿಕರು ಮಾಡಬೇಕಾದ ರೀತಿ ನಾನೂ ಮಾಡಿದ್ದೇನೆ. ಅನೇಕ ಪ್ರಕರಣಗಳನ್ನು ದಾಖಲಿಸಿದ್ದೇನೆ. ಕೆಲವೊಮ್ಮೆ ಟ್ರೋಲ್‌ ಮಾಡಿದವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಹಾನುಭೂತಿಯ ಆಧಾರದ ಮೇಲೆ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

ಈ ರೀತಿ ಟ್ರೋಲ್‌ ಮಾಡುವವರು ಯುವ ಜನತೆ ಎಂಬ ಅಂಶವನ್ನು ನಾನು ಪರಿಗಣಿಸಿದ್ದೇನೆ. ಈ ವಯಸ್ಸಲ್ಲಿ ಅನಾಮಧೇಯ ಅಕೌಂಟ್‌ಗಳ ಮೂಲಕ ಟ್ರೋಲ್‌ ಮಾಡುತ್ತ ತಮ್ಮ ಜೀವನವನ್ನು ಹಾಳುಮಾಡುತ್ತಿದ್ದಾರೆ. ವ್ಯರ್ಥ ಮಾಡುತ್ತಿದ್ದಾರೆ. ಯಾರೂ ಕಾನೂನಿಗಿಂತ ಮೇಲಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಜನರನ್ನು ಹೊಡೆಯಲು, ಕೊಲ್ಲಲು ಹೋಗಬಾರದು. ನ್ಯಾಯದ ಮೇಲೆ ನಂಬಿಕೆ ಇದ್ದರೆ ಪೊಲೀಸರಿಗೆ ದೂರು ನೀಡಿದರೆ ಸಾಕು ಎಂದು ದಿವ್ಯ ಸ್ಪಂದನ ತಿಳಿಸಿದ್ದಾರೆ.

ದರ್ಶನ್ ಬಂಧನ ವಿಚಾರದಲ್ಲಿ ಕರ್ನಾಟಕ ಪೊಲೀಸರನ್ನು ನಟಿ ರಮ್ಯಾ ಶ್ಲಾಘಿಸಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮೆಚ್ಚುಗೆ ಮತ್ತು ಗೌರವ ಸೂಚಿಸುವೆ. ಇದು ಥ್ಯಾಂಕ್‌ಲೆಸ್‌ ಜಾಬ್‌. ಅವರು ತಮಗೆ ಸಾಧ್ಯವಿರುವಷ್ಟು ಮಾಡುತ್ತಿದ್ದಾರೆ. ಅವರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಕಾನೂನು ಮತ್ತು ನ್ಯಾಯದಲ್ಲಿ ಜನರ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ ಎಂದು ರಮ್ಯಾ ಪೋಸ್ಟ್‌ ಮಾಡಿದ್ದಾರೆ.

ಕರ್ನಾಟಕ ಬಾಕ್ಸ್ ಆಫೀಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ‘ದರ್ಶನ್​ಗೆ ಸೆಕ್ಷನ್ 302ರ ಅಡಿಯಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಒಂದೊಮ್ಮೆ ಈ ಪ್ರಕರಣದಲ್ಲಿ ದರ್ಶನ್​ಗೆ ಶಿಕ್ಷೆ ಆಗದಿದ್ದಲ್ಲಿ ಹಣದ ಪ್ರಭಾವ ಕೆಲಸ ಮಾಡಿದೆ ಎಂದರ್ಥ ಹಾಗೂ ಭಾರತೀಯ ಕಾನೂನು ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದು ತೋರಿದಂತಾಗುತ್ತದೆ. ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಅನ್ನು ನಟಿ ರಮ್ಯಾ ರೀಟ್ವೀಟ್ ಮಾಡಿದ್ದು ಗೊತ್ತೇ ಇದೆ.

ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ: ಕಾಲು ಮುರಿತ

ದರ್ಶನ್ ಕೇಸ್ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದ್ರಜೀತ್‌ ಲಂಕೇಶ್ ಮಾತು

ಹಿಂದಿನ ಕೇಸ್‌ನಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

- Advertisement -

Latest Posts

Don't Miss