Spiritual News: ಕೆಲವರು ತಮ್ಮ ಮಗಳಿಗೆ ಮೈ ತುಂಬ ಚಿನ್ನವಿರಲಿ ಎಂದು ತಲೆಯ ಮೇಲಿನ ಬಿಂದಿಯಿಂದ ಹಿಡಿದು, ಕಾಲಿಗೆ ಹಾಕುವ ಗೆಜ್ಜೆಯವರೆಗೂ ಎಲ್ಲವನ್ನೂ ಚಿನ್ನದಿಂದಲೇ ಒಡವೆ ಮಾಡಿಕೊಡುತ್ತಾರೆ. ಆದರೆ ಆರೋಗ್ಯದ ಪ್ರಕಾರ ಮತ್ತು ಶಾಸ್ತ್ರದ ಪ್ರಕಾರ, ಸೊಂಟದಿಂದ ಕೆಳಗೆ ಚಿನ್ನ ಧರಿಸುವಂತಿಲ್ಲ. ಚಿನ್ನದ ಒಡವೆ ಹೊಟ್ಟೆಯ ತನಕ ಮಾತ್ರ ಬರಬೇಕು. ಹಾಗಾದ್ರೆ ಯಾಕೆ ಕಾಲಿಗೆ ಚಿನ್ನದ ಗೆಜ್ಜೆ ಧರಿಸಬಾರದು ಅಂತಾ ಹೇಳುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತಲೆಬೊಟ್ಟು, ಕಿವಿಯೋಲೆ, ಮೂಗುತಿ, ಸರ, ಬಳೆ, ಡಾಬು ಇವಿಷ್ಟು ಚಿನ್ನದ್ದು ಹಾಕಿದರೂ ನಡೆದೀತು. ಆದರೆ ಕಾಲ್ಗೆಜ್ಜೆ, ಕಾಲುಂಗುರ ಮಾತ್ರ ಬೆಳ್ಳಿಯದ್ದೇ ಇರಬೇಕು ಎಂಬ ನಿಯಮವಿದೆ. ಯಾಕಂದ್ರೆ ಚಿನ್ನವೆಂದರೆ ಲಕ್ಷ್ಮೀ ಸ್ವರೂಪ. ಹಾಗಾಗಿ ಚಿನ್ನವನ್ನು ಕಾಲಿಗೆ ಧರಿಸುವಂತಿಲ್ಲ. ಇದು ಧಾರ್ಮಿಕ ನಂಬಿಕೆಯ ಪ್ರಕಾರ ಇರುವ ಪದ್ಧತಿ.
ಇನ್ನು ವೈಜ್ಞಾನಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಸೊಂಟ ಪಟ್ಟಿ, ಕಾಲ್ಗೆಜ್ಜೆ ಮತ್ತು ಕಾಲುಂಗುರ ಬೆಳ್ಳಿಯದ್ದೇ ಧರಿಸಬೇಕು. ಏಕೆಂದರೆ, ಇದರಿಂದ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಚೆನ್ನಾಗಿ ಬ್ಯಾಲೆನ್ಸ್ ಆಗುತ್ತದೆ. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಹೆಚ್ಚು ಚಿನ್ನ ಧರಿಸಿದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಅದೇ ಹೆಚ್ಚು ಬೆಳ್ಳಿ ಧರಿಸಿದರೆ, ದೇಹದಲ್ಲಿ ತಂಪಿನ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಸೊಂಟದ ಕೆಳಭಾಗದಲ್ಲಿ ಸದಾ ಬೆಳ್ಳಿಯನ್ನೇ ಧರಿಸಬೇಕು.
ಇನ್ನು ಸಾಮಾನ್ಯ ಜನರ ಯೋಚನೆಯ ಪ್ರಕಾರ ನೋಡುವುದಾದರೆ, ನೀವು ಬೆಳ್ಳಿಯ ಗೆಜ್ಜೆಯನ್ನು ಧರಿಸಿದರೂ, ಅದು ಎಂದಾದರೂ ತನ್ನಿಂದ ತಾನೇ ಕಳಚಿ ಹೋಗುತ್ತದೆ. ಕಡಿಮೆ ಬೆಲೆಬಾಳುವ ಬೆಳ್ಳಿಯ ಗೆಜ್ಜೆ ಕಳೆದು ಹೋದರೂ ನಿಮಗೆ ಅಷ್ಟೆಲ್ಲ ನೋವಾಗುವುದಿಲ್ಲ. ಅದೇ ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಗೆಜ್ಜೆ ಕಳಚಿ, ಕಳೆದು ಹೋದರೆ, ನೀವು ಅದನ್ನು ಸಹಿಸಬಲ್ಲಿರೇ..?