Health Tips: ಇಂದಿನ ಕಾಲದಲ್ಲಿ ಯುವ ಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಇರುವ ಆರೋಗ್ಯ ಸಮಸ್ಯೆ ಅಂದ್ರೆ ಹೊಟ್ಟೆಯ ಬೊಜ್ಜು. ಹೊಟ್ಟೆಯ ಬೊಜ್ಜು ಇಳಿಸಬೇಕು ಎಂಬ ಮನಸ್ಸಿದ್ದರೂ, ಅದನ್ನು ಇಳಿಸಲು ಸಾಧ್ಯವಾಗುವುದೇ ಇಲ್ಲ. ಕೆಲವರು ಕಸರತ್ತು, ಡಯಟ್ ಮಾಡಿ, ಹೇಗೋ ಹೊಟ್ಟೆ ಕರಗಿಸುತ್ತಾರೆ. ಅದೇ ರೀತಿ ಮೆಂಟೇನ್ ಮಾಡುತ್ತಾರೆ. ಆದರೆ ಕೆಲವರು ಹೊಟ್ಟೆ ಕರಗಿಸಿ, ಡಯಟ್, ವ್ಯಾಯಮ ನಿಲ್ಲಿಸಿ ಮತ್ತೆ ಹೊಟ್ಟೆ ಬರಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಹೊಟ್ಟೆ ಕರಗಿಸುವ ಸುದ್ದಿಗೆ ಹೋಗುವುದೇ ಇಲ್ಲ. ಹಾಗಾದ್ರೆ ಸುಲಭವಾಗಿ, ನ್ಯಾಚುರಲ್ ಆಗಿ ಹೊಟ್ಟೆ ಬೊಜ್ಜನ್ನು ಹೇಗೆ ಕರಗಿಸಬೇಕು ಅಂತಾ ತಿಳಿಯೋಣ ಬನ್ನಿ..
ನ್ಯಾಚುರಲ್ ಆಗಿ ನೀವು ಹೊಟ್ಟೆಯ ಬೊಜ್ಜು ಕರಗಿಸಬೇಕು ಅಂದ್ರೆ, ನೌಕಾಸನ, ತಾಲಾಸನ ಮಾಡಬೇಕು. ಇವೆರಡೂ ಆಸನಗಳನ್ನು ಹೇಗೆ ಮಾಡಬೇಕು ಎಂದು ಸರಿಯಾಗಿ ಕಲಿತು. ಬಳಿಕ ಮಾಡಿ. ಯೋಗಾಸನಗಳನ್ನು ಮನಬಂದಂತೆ ಮಾಡುವ ಹಾಗಿಲ್ಲ. ಹಾಗೇ ಮಾಡಿದ್ದಲ್ಲಿ, ನಿಮ್ಮ ಅಂಗಾಂಗಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ ಕಲಿತು ಮತ್ತೆ ಮಾಡುವುದು ಉತ್ತಮ.
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಿ. ಈ ನೀರಿಗೆ ಕೊಂಚ ದಾಲ್ಚೀನಿ ಪೌಡರ್ ಹಾಕಿ. ಈ ನೀರನ್ನು ಸೇವನೆ ಮಾಡಿ. ಇದು ಜೀರ್ಣಕ್ರಿಯೆ ಸುಲಭವಾಗಿಸಲು ಸಹಕಾರಿಯಾಗಿದೆ. ಅಲ್ಲದೇ, ನಿಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುತ್ತದೆ.
ಅಲ್ಲದೇ ನೀವು ಯಾವಾಗ ನೀರು ಕುಡಿಯುವುದಿದ್ದರೂ, ಆ ನೀರಿಗೆ ಕೊಂಚ ತುಳಸಿ ಮತ್ತು ಪುದೀನಾ ಸೇರಿಸಿಡಿ. ಆ ನೀರಲ್ಲಿ ಪುದೀನಾ ಮತ್ತು ತುಳಸಿ ಫ್ಲೇವರ್ ಬೆರೆಯಬೇಕು. ಅಂಥ ನೀರಿನ ಸೇವನೆಯಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ, ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತದೆ.
ಇನ್ನು ಊಟದ ಸಮಯದಲ್ಲಿ ಹೆಚ್ಚು ಮಸಾಲೆ, ಎಣ್ಣೆ ಬಳಸದೇ ಮಾಡಿದ ಅಡುಗೆ ತಯಾರಿಸಿ, ಸೇವಿಸಿ. ಊಟದ ಜೊತೆಗೆ, ಹಸಿ ಮೆಂತ್ಯೆ ಎಲೆ ಮತ್ತು ಜೀರಿಗೆಯ ಉಪಯೋಗ ಮಾಡಿ. ಇವೆರಡೂ ಹೊಟ್ಟೆಯ ಬೊಜ್ಜು ಇಳಿಸಲು ಸಹಾಯಕವಾಗಿದೆ.
ಇನ್ನು ಈ ಮೇಲಿನ ಎಲ್ಲ ಟಿಪ್ಸ್ ಪ್ರತಿದಿನ ಫಾಲೋ ಮಾಡುವುದರ ಜೊತೆಗೆ, ಸದಾ ಆ್ಯಕ್ಟೀವ್ ಇರುವುದನ್ನು ಕಲಿಯಿರಿ. ಡಾನ್ಸ್, ಸೈಕಲಿಂಗ್, ಸ್ಕಿಪಿಂಗ್, ಕ್ರಿಕೇಟ್, ಕಾಕ್ ಬ್ಯಾಟ್ ಹೀಗೆ ಯಾವುದೇ ಆಟ ಆಡಿ, ಆದರೆ ಆ್ಯಕ್ಚೀವ್ ಆಗಿರುವುದನ್ನು ಮಾತ್ರ ಮರೆಯಬೇಡಿ.