ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual: ಕಪ್ಪು ಬಣ್ಣದ ಬಟ್ಟೆ ಖರೀದಿಸುತ್ತೇವೆ ಎಂದಾಗ, ಹಲವು ಪೋಷಕರು ಅದನ್ನು ವಿರೋಧಿಸುತ್ತಾರೆ. ಕಪ್ಪು ಬಣ್ಣದ ಬಟ್ಟೆ ಹಾಕಬೇಡ. ಬೇರೆ ಬಣ್ಣದ ಬಟ್ಟೆ ತೆಗೆದುಕೋ ಎನ್ನುತ್ತಾರೆ. ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಲು ಅವಕಾಶವಿರುವುದಿಲ್ಲ. ಹಾಗಾದ್ರೆ ಯಾಕೆ ಕಪ್ಪು ಬಣ್ಣದ ಬಟ್ಟೆ ಧರಿಸಲು ಹಿರಿಯರು ಒಪ್ಪಿಗೆ ಸೂಚಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..

ಕಪ್ಪು ಬಣ್ಣವನ್ನು ನಕಾರಾತ್ಮಕ ಶಕ್ತಿಗಳ ಬಣ್ಣ ಎಂದು ಹೇಳಲಾಗುತ್ತದೆ. ಕಪ್ಪು ಬಣ್ಣದ ಬಟ್ಟೆ ಧರಿಸಿದರೆ, ಅದು ನಕಾರಾತ್ಮಕತೆಯನ್ನು ಬೇಗ ಆಕರ್ಷಿಸುತ್ತದೆ ಎಂದು ವೈಜ್ಞಾನಿಕವಾಗಿಯೂ ಹೇಳಲಾಗುತ್ತದೆ. ಹಾಗಾಗಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳಲಾಗುತ್ತದೆ. ಅಲ್ಲದೇ, ಕೀಟಾಣುಗಳು ಕೂಡ ಕಪ್ಪು ಬಣ್ಣದ ಮೇಲೆ ಬೇಗ ಬಂದು ಕೂರುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಈ ಎಲ್ಲ ಕಾರಣಗಳು ಕಪ್ಪು ಬಟ್ಟೆಯಿಂದ ನಾವು ದೂರವಿರಬೇಕು ಎಂದು ಸೂಚಿಸುತ್ತದೆ.

ಇನ್ನು ಶವಸಂಸ್ಕಾರ, ಸಾವಿನ ಮನೆಗೆ ಹೋಗುವಾಗ ಬಿಳಿ ಬಣ್ಣದ ಬಟ್ಟೆ ಧರಿಸಿ,ಹೋಗಬೇಕು. ಗಾಢವಾದ ಬಣ್ಣ ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎನ್ನುತ್ತಾರೆ. ಏಕೆಂದರೆ, ನಕಾರಾತ್ಮಕ ಶಕ್ತಿಗಳು ಕಪ್ಪು ಬಣ್ಣಕ್ಕೆ ಆಕರ್ಷಿತವಾಗುತ್ತದೆ. ಮತ್ತು ಶವದ ಬಳಿ ಹೆಚ್ಚು ಕೀಟಾಣುಗಳಿಂದ ಅವುಗಳಿಂದ ಕೂಡ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಶವಸಂಸ್ಕಾರಕ್ಕೆ ಹೋಗುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸಬೇಕು.

ಕಪ್ಪು ಬಣ್ಣದ ಬಟ್ಟೆ ಧರಿಸುವುದು ಅಷ್ಟು ಉತ್ತಮವಲ್ಲ ಎಂದು ಹಿರಿಯರು ಹೇಳಿದರೂ ಕೂಡ, ಕಪ್ಪು ಬಣ್ಣದ ಬಟ್ಟೆ ಧರಿಸಿದವರು ಆಕರ್ಷಕರಾಗಿ ಕಾಣುತ್ತಾರೆ. ಅವರಿಗೆ ಬಹುಬೇಗ ದೃಷ್ಟಿ ತಾಕುತ್ತದೆ ಎಂದು ಹೇಳಲಾಗಿದೆ. ಇದು ಕೂಡ ನಮ್ಮ ನೆಮ್ಮದಿ ಹಾಳುಗಲು ಒಂದು ಕಾರಣವೆನ್ನಬಹುದು.

About The Author