Friday, November 22, 2024

Latest Posts

ಶವವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಬಾರದು ಅಂತಾ ಹೇಳುವುದೇಕೆ ಗೊತ್ತಾ..?

- Advertisement -

Spiritual: ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ, ಆ ಶವವನ್ನು ಅಂತ್ಯಸಂಸ್ಕಾರ ಮಾಡುವವರೆಗೂ ಅದನ್ನು ಒಂಟಿಯಾಗಿ ಬಿಡುವುದಿಲ್ಲ. ಯಾರಾದರೂ ಅದರ ಪಕ್ಕದಲ್ಲಿ ಕುಳಿತಿರುತ್ತಾರೆ. ಇನ್ನು ರಾತ್ರಿ ಹೊತ್ತು, ಯಾಾರಾದರೂ ಅದರ ಪಕ್ಕದಲ್ಲೇ ನಿದ್ರೆ ಬಿಟ್ಟು ಕುಳಿತುಕೊಳ್ಳಬೇಕಾಗುತ್ತದೆ. ಬಳಿಕ ಬೆಳಗ್ಗಿನ ಜಾವ ವಿಧಿವಿಧಾನಗಳನ್ನು ಮುಗಿಸಿ, ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಹಾಗಾದ್ರೆ ಯಾಕೆ ಶವವನ್ನು ಒಬ್ಬಂಟಿಯಾಗಿ ಯಾಕೆ ಬಿಡಲಾಗುವುದಿಲ್ಲ.

ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡುವುದಿಲ್ಲ. ಸೂರ್ಯೋದಯವಾದ ಮೇಲೆಯೇ ಶವ ಸಂಸ್ಕಾರ ಮಾಡಲಾಗುತ್ತದೆ. ಒಂದು ವೇಳೆ ವ್ಯಕ್ತಿ ಮಧ್ಯಾಹ್ನದ ಹೊತ್ತು ತೀರಿಹೋದರೆ, ಅವರ ಸಂಬಂಧಿಕರು ದೂರದ ಊರಿನಿಂದ ಬರುವುದಿದ್ದರೆ, ಅಂಥ ಸಂದರ್ಭದಲ್ಲಿ ಶವವನ್ನು ರಾತ್ರಿಯಿಡಿ ಇಡಬೇಕಾಗುತ್ತದೆ. ಮರುದಿನವೇ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ.

ಆ ಸಂದರ್ಭದಲ್ಲಿ ಶವದ ಪಕ್ಕದಲ್ಲಿ ಯಾರಾದರೂ ನಿದ್ರೆಗೆಟ್ಟು ಇರಬೇಕಾಗುತ್ತದೆ. ಇನ್ನು ನಮ್ಮ ಪ್ರೀತಿಪಾತ್ರರು ಸಾವನ್ನಪ್ಪಿದಾಗ, ಯಾರಿಗೆ ತಾನೇ ಕಣ್ತುಂಬ ನಿದ್ರೆ ಬರುತ್ತದೆ..? ಆದ್ರೆ ಇಲ್ಲಿ ಯಾಕೆ ಶವವನ್ನು ಒಂಟಿಯಾಗಿ ಬಿಡಬಾರದು ಅಂತಾ ಹೇಳುತ್ತಾರೆ ಅಂದ್ರೆ, ಹಾಗೆ ಶವವನ್ನು ಒಂಟಿಯಾಗಿ ಬಿಟ್ಟಾಗ, ಬಿಟ್ಟು ಹೋದ ಆತ್ಮ, ತಮ್ಮವರರ ಬೇಸರ, ಕಣ್ಣೀರು ನೋಡಿ, ಮತ್ತೆ ದೇಹ ಸೇರಲು ಪ್ರಯತ್ನಿಸುತ್ತದೆ. ಇದು ಉತ್ತಮವಲ್ಲ. ಆಗ ನೀವು ಅಂತ್ಯಸಂಸ್ಕಾರ ಮಾಡಿದರೂ, ಆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.

ಅಲ್ಲದೇ, ಸಾವು ಸಂಭವಿಸಿದಾಗ, ನಕಾರಾತ್ಮಕ ಶಕ್ತಿಗಳು ಆ ಮನೆಗೆ ಪ್ರವೇಶಿಸುತ್ತದೆ. ಏಕೆಂದರೆ, ಸತ್ತ ವ್‌ಯಕ್ತಿಯ ದೇಹ, ಹಳಸಿದ ವಸ್ತುವಿನಂತೆ. ಅಂಥ ಜಾಗದಲ್ಲಿ ನಕಾರಾತ್ಮಕ ಹೆಚ್ಚಾಗಿರುತ್ತದೆ. ಆ ನಕಾರಾತ್ಮಕ ಶಕ್ತಿ, ದೇಹ ಸೇರಲು ಪ್ರಯತ್ನಿಸುತ್ತದೆ. ಹಾಗಾಗಿ ಶವವನ್ನು ಒಂಟಿಯಾಗಿ ಬಿಡಬಾರದು ಅಂತಾ ಹೇಳಲಾಗುತ್ತದೆ.

ಇನ್ನು  ಸತ್ತ ವ್ಯಕ್ತಿಗೆ ಯಾಾರಾದರೂ ವಿರೋಧಿಗಳಿದ್ದು, ಅವರು ಶವ ನೋಡಲು ಬರುವ ನೆಪದಲ್ಲಿ, ಶವದ ಕೂದಲು ಕಿತ್ತುಕೊಂಡು, ಮಾಟ ಮಾಡಿಸಿದರೆ, ಆ ಆತ್ಮಕ್ಕೆ ಎಂದಿಗೂ ಮುಕ್ತಿ ಸಿಗುವುದಿಲ್ಲ. ಹಾಗಾಗಿ ಹೊರಗಿನವರು ಶವಕ್ಕೆ ನಮಸ್ಕಾರ ಮಾಡಲು ಮಾತ್ರ ಅವಕಾಶ ಕೊಡಬೇಕು. ತಲೆ ಸವರಲು ಬಿಡಬಾರದು.

ಇನ್ನು ವೈಜ್ಞಾನಿಕವಾಗಿ ನೋಡುವುದಾದರೆ, ಸತ್ತ ದೇಹವನ್ನು ಕ್ರಿಮಿ ಕೀಟಗಳು ಬಹುಬೇಗ ಆವರಿಸುತ್ತದೆ. ಹಾಗಾಗಿ ಪದೇ ಪೇದ ನೋಣ, ಸೊಳ್ಳೆ, ಕೀಟಗಳು ಶವದ ಬಳಿ ಬರುತ್ತದೆ. ಹಾಗಾಗಿಯೇ ಶವದ ಬಳಿ, ಧೂಪ, ಅಗರಬತ್ತಿ ಹಚ್ಚಿ ಇಡಲಾಗುತ್ತದೆ. ಈ ಕಾರಣಕ್ಕೆ ಶವದ ಬಳಿ ಕೀಟಗಳು ಸುಳಿಯಬಾರದು ಎನ್ನುವ ಕಾರಣಕ್ಕೆ ಶವವನ್ನು ಒಬ್ಬಂಟಿಯಾಗಿ ಬಿಡಲಾಗುವುದಿಲ್ಲ.

- Advertisement -

Latest Posts

Don't Miss