Saturday, July 13, 2024

Latest Posts

ಅಹಂ ಬೇಕಿತ್ತಾ..? : ಬಿಜೆಪಿಗೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಚಾಟಿ

- Advertisement -

National Political News: ದೇಶದ ಸಾರ್ವತ್ರಿಕ ಚುನಾವಣೆ ಮುಗಿದಿದ್ದು ಬಿಜೆಪಿ ಅಂದುಕೊಂಡಿದ್ದ 400 ಸ್ಥಾನವಿರಲಿ ಕನಿಷ್ಟ ಬಹುಮತವಾದ 272 ಸ್ಥಾನದ ಗುರಿಯನ್ನು ಕೂಡ ದಾಟಲಿಲ್ಲ. ಬಿಜೆಪಿ ಕೇವಲ 240 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಿರೀಕ್ಷಿತ ಸ್ಥಾನಗಳಿಸದ ಬಿಜೆಪಿ ಬಗ್ಗೆಇದೀಗ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಆರೆಸ್ಸೆಸ್ ಸಂಬಂಧಿ ನಿಯತಕಾಲಿಕೆ ಆರ್ಗನೈಸರ್ ಚಾಟಿ ಬೀಸಿದೆ.

ಸಮಾರಂಭವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್ ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ, ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿ ನೋಡಬೇಕೇ ಹೋರತು ಯುದ್ಧದ ರೀತಿಯಲ್ಲ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಆಡಿದ ಮಾತುಗಳು , ಪರಸ್ಪರ ನೀಡಿದ ಎಚ್ಚರಿಕೆಗಳು, ಬೇಡದ ಮಾತುಗಳಿಂದ ಸಮಾಜವನ್ನು ವಿಭಜನೆ ಮಾಡಿದ ಹೊರತಾಗಿಯೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ಧಿದ್ದು , ತಂತ್ರಜ್ಱನ ಬಳಸಿಕೊಂಡು ವಿನಾಕಾರಣ ಇಂಥ ವಿಷಯಗಳಲ್ಲಿ ಸಂಘಪರಿವಾರಗಳನ್ನು ಎಳೆದು ತಂದಿದ್ದು ಚುನಾವಣೆಯಲ್ಲಿ ಬಿಜೆಪಿ ಹಿನ್ನೆಡೆಗೆ ಕಾರಣವಾಯಿತು. ಇದೆಲ್ಲವೂ ಜ್ಱನವನ್ನು ಬಳಸಿಕೊಳ್ಳುವ ರೀತಿಯೇ ಎಂದು ಬಿಜೆಪಿಗರನ್ನು ಪ್ರಶ್ನಿಸಿದ ಭಾಗವತ್, ದೇಶವನ್ನು ಈ ರೀತಿ ಮುನ್ನೆಡೆಸಲು ಸಾಧ್ಯವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ಸಂಬಂಧಿತ ನಿಯತಕಾಲಿಕೆ ‘ಆರ್ಗನೈಸರ್’ ಕೂಡ ಬೇಸರ ವ್ಯಕ್ತಪಡಿಸಿದ್ದು ಈ ರೀತಿಯಾಗಿ ಬರೆದಿದೆ – ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅದರ ಅನೇಕ ನಾಯಕರ ‘ರಿಯಾಲಿಟಿ ಚೆಕ್’ ಆಗಿ ಈ ಲೋಕಸಭಾ ಚುನಾವಣಾ ಪಲಿತಾಂಶಗಳು ಬಂದಿವೆ. ಆದರೂ ಕೆಲವು ನಾಯಕರು ಒಡೆದುಹೋದ ಗುಳ್ಳೆಯಲ್ಲೇ ಸಂಭ್ರಮಪಟ್ಟಿದ್ದಾರೆ. ಇನ್ನು ಕೆಲವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಭೆಯ ಹೊಳಪನ್ನು ಆನಂದಿಸುತ್ತಿದ್ದಾರೆ. ಆದರೆ ಇವರ್ಯಾರೂ ಕೂಡ ಬೀದಿಯಲ್ಲಿನ ಜನಸಾಮಾನ್ಯರ ದನಿಯನ್ನು ಕೇಳುತ್ತಿಲ್ಲ ಎಂದು ಆರ್ಗನೈಸರ್ ವರದಿ ಮಾಡಿದೆ.

ನರೇಂದ್ರ ಮೋದಿಯವರು ಇಟ್ಟುಕೊಂಡಿದ್ದ 400+ ಗುರಿ , ತಮಗೆ ಹಾಕಿದ್ದ ಗುರಿಯೆಂದು ಬಿಜೆಪಿ ಕಾರ್ಯಕರ್ತರು ಭಾವಿಸಲೇ ಇಲ್ಲ , ಇಂಥ ಗುರಿ ತಲುಪಬೇಕಾದರೆ ಕಠಿಣ ಶ್ರಮ ಬೇಕು, ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವುದರಿಂದ ಗುರಿ ತಲುಪಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್ ಚಿಂತಕ ರತನ್ ಶಾರದಾ ಬರೆದಿದ್ದಾರೆ.

ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದ ಪಕ್ಷದ ಹಳೆಯ ನಿಷ್ಟಾವಂತ ಕಾರ್ಯಕರ್ತರನ್ನು ಚುನಾವಣೆ ವೇಳೆ ನಿರ್ಲಕ್ಷ ಮಾಡಲಾಯಿತು. ಆದರೆ ಈ ಸಾಮಾಜಿಕ ಮಾಧ್ಯಮ ಯುಗದ ಸೆಲ್ಫಿ ಪ್ರಿಯ ಕಾರ್ಯಕರ್ತರಿಗೆ ಮಣೆ ಹಾಕಲಾಯಿತು ಇದರ ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣಿಸಿದೆ ಎಂದಿದ್ದಾರೆ.

ಇಂದು ಬೆಂಗಳೂರಿಗೆ ರಾಹುಲ್- ಪ್ರಿಯಾಂಕಾ ನಾಳೆ ವಯನಾಡಿಗೆ ರಾಹುಲ್ ಭೇಟಿ

Sandalwood News: ದರ್ಶನ್ ಅರೆಸ್ಟ್- ನಟಿ ರಮ್ಯಾ ಎಂಟ್ರಿ!

ಮೈಸೂರು ದಸರಾ ಆನೆ ಇನ್ನಿಲ್ಲ: ವಿದ್ಯುತ್ ತಂತಿ ತಗುಲಿ ಅಶ್ವತ್ಥಾಮ ಸಾವು

- Advertisement -

Latest Posts

Don't Miss