Sunday, December 1, 2024

Latest Posts

Medicine:ಗರ್ಭನಿರೋಧಕ ಮಾತ್ರೆ ತಗೋತೀರಾ

- Advertisement -

ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ಫ್ಯಾಶನ್ ಅಥವಾ ಮತ್ಯಾವುದೋ ಕಾರಣಕ್ಕಾಗಿ ಗರ್ಭಧರಿಸಲು ಇಷ್ಟಪಡೋದಿಲ್ಲ. ಒಂದು ವೇಳೆ ಮಿಸ್ ಆಗಿ ಪ್ರಗ್ನೆಂಟ್ ಆದ್ರೂ, ಅದರಿಂದ ತಪ್ಪಿಸೋಕೆ ಗರ್ಭನಿರೋಧಕ ಮಾತ್ರೆಗಳನ್ನು ತಗೋತಾ ಇದ್ದಾರೆ. ಆದ್ರೆ ತಪ್ಪಾದ ವಿಧಾನದಲ್ಲಿ ಮಾತ್ರೆ ಸೇವನೆ ಮಾಡ್ತಿರೋದ್ರಿಂದ ಅನೇಕ ಸಾವು ನೋವುಗಳು ಆಗ್ತಿದೆ . ಇಂತಹ ಅನಗತ್ಯ ಗರ್ಭಧಾರಣೆ ತಪ್ಪಿಸುವ ಮಾತ್ರೆಯನ್ನು ತಗೋಳೋ ಮುಂಚೆ ಕೆಲವೊಂದು ವಿಷಯವನ್ನ ತಿಳಿದುಕೊಳ್ಳೋದು ಮುಖ್ಯ .ಅಂತಹ ಅಂಶಗಳು ಯಾವುದು ಅಂತಾ ತೋರೀಸ್ತೀವಿ

 

ಸಾಕಷ್ಟು ಮಹಿಳೆಯರಲ್ಲಿ ಇದೀಗ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸೋದು ಕಾಮನ್ ಆಗಿದೆ. ಇಂತಹ ಮಾತ್ರೆಗಳಿಂದಾಗುವ ಸೈಡ್ ಎಫೆಕ್ಟ್​​ ನಿಂದ ತಾಯಿಯಾಗುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿನೇ ಗರ್ಭನೀರೋಧಕ ಮಾತ್ರೆಗಳನ್ನು ಸರಿಯಾಗಿ ತಗೋಳೋ ಮುನ್ನ ಕೆಲವೊಂದು ಕ್ರಮಗಳನ್ನ ಅನುಸರಿಸಬೇಕಾಗುತ್ತೆ.

ಅಂದಹಾಗೆ ವೈದ್ಯರ ಪ್ರಕಾರ ಗರ್ಭಧಾರಣೆ ಮಾತ್ರೆಗಳನ್ನು ಕನಿಷ್ಠ 5 ದಿನಗಳವರೆಗೂ ಸೇವಿಸಬೇಕು. ಇದು ಮುಖ್ಯವಾಗಿ ವೀರ್ಯವನ್ನು ಗರ್ಭಾಶಯ ತಲುಪದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಈ ಮಾತ್ರೆಗಳನ್ನು ಸೇವಿಸುವುದರಿಂದ ,ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಷ್ಟೇ ಅಲ್ಲದೇ ಈ ಮಾತ್ರೆಗಳಿಂದ ಮಹಿಳೆಯರಿಗೆ ಸ್ತನದ ಸಮಸ್ಯೆ , ಮುಟ್ಟಿನ ಸಮಯದಲ್ಲಿ ರಕ್ತದ ಹೆಪ್ಪು ಗಟ್ಟುವಿಕೆ ಹಾಗೂ ವಾಂತಿಗೂ ಕಾರಣವಾಗುತ್ತದೆ.

 

ಇದಲ್ಲದೇ ಕೆಲ ಮಹಿಳೆಯರಿಗೆ ತೀವ್ರವಾದ ಜ್ವರ ,ಶೀತ ,ತಲೆನೋವು ,ತಲೆತಿರುಗುವಿಕೆ ಸೇರಿದಂತೆ ದೇಹದಲ್ಲಿ ಬಹಳಷ್ಟು ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಗರ್ಭನಿರೋಧಕ ಮಾತ್ರಗಳು ಭಯ ಮತ್ತು ಆತಂಕದ ವಾತಾವರಣವನ್ನು ಹೆಚ್ಚಿಸುತ್ತದೆ. ಹೀಗಾಗಿನೇ ಮಹಿಳೆಯರು ಇಂತಹ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸೋ ಮುನ್ನ ಮುಂಜಾಗೃತ ಕ್ರಮವಾಗಿ ವೈದ್ಯರನ್ನ ಸಂಪರ್ಕಿಸಿ ಸಲಹೆ ಪಡೆದುಕೊಳ್ಳೊದೇ ಉತ್ತಮ.

- Advertisement -

Latest Posts

Don't Miss