Business Tips: ಆಲೂಗಡ್ಡೆ ಚಿಪ್ಸ್ ಅಂದ್ರೆ ಎಲ್ಲರೂ ಇಷ್ಟಪಟ್ಟು ತಿನ್ನುವ ಕುರುಕಲು ತಿಂಡಿ. ಚಿಪ್ಸ್ ಟೇಸ್ಟಿಯಾಗಿದ್ದರೆ, ಮಸಾಲೆ ಕರೆಕ್ಟ್ ಆಗಿ ಇದ್ದರೆ, ಹೊಟ್ಟೆತುಂಬುವಷ್ಟು ತಿನ್ನುವವರಿದ್ದಾರೆ. ಇತ್ತೀಚೆಗೆ ಸಿಗುತ್ತಿರುವ ಹಾಟ್ ಚಿಪ್ಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಚಿಪ್ಸ್ ಬ್ಯುಸಿನೆಸ್ ಹೇಗೆ ಮಾಡೋದು..? ಇದಕ್ಕೆ ಬಂಡವಾಳವೆಷ್ಟು ಬೇಕು..? ಹೀಗೆ ಹಲವು ವಿಷಯಗಳನ್ನು ತಿಳಿಸಲಿದ್ದೇವೆ.
ಸಾಮಾನ್ಯವಾಗಿ ಒಂದಿಷ್ಟು ಆಲೂಗಡ್ಡೆ ಸ್ವಚ್ಛಗೊಳಿಸಿ, ಸಿಪ್ಪೆ ತೆಗೆದು, ಸ್ಲೈಸ್ ಮಾಡಿ, ನೀರಿನಲ್ಲಿ ತೊಳೆದು, ಕೊಂಚ ಬಿಸಿ ನೀರಿನಲ್ಲಿ ಅದ್ದಿಷ್ಟು, ಬಟ್ಟೆಯ ಮೇಲೆ ನೆರಳಿನಲ್ಲೇ ಒಣಗಿಸಿ, ಎಣ್ಣೆಯಲ್ಲಿ ಕರಿದು ಚಿಪ್ಸ್ ತಯಾರಿಸುತ್ತಾರೆ. ಆದರೆ ವ್ಯಾಪಾರ ಮಾಡುವಾಗ ಹಾಗಲ್ಲ. ರಾಶಿ ರಾಶಿ ಆಲೂಗಡ್ಡೆ ಬೇಕಾಗುತ್ತದೆ. ಅದನ್ನು ಸ್ವಚ್ಛಗೊಳಿಸಿ, ಸಿಪ್ಪೆ ತೆಗೆದು ಸ್ಲೈಸ್ ಮಾಡಬೇಕಾಗುತ್ತದೆ.
ಅದಕ್ಕಾಗಿ ಇಬ್ಬರಾದರೂ ಈ ಕೆಲಸಕ್ಕೆ ಬೇಕಾಗುತ್ತಾರೆ. ಇಬ್ಬರೂ ನಿಮ್ಮ ಮನೆಯವೇ ಆಗಿದ್ದರೆ, ಅಥವಾ ನಿಮ್ಮವರೇ ಆಗಿದ್ದರೆ, ಅದಕ್ಕಾಗಿ ನೀವು ಖರ್ಚು ಮಾಡಬೇಕೆಂದಿಲ್ಲ. ಆದರೆ ಜನರನ್ನು ನೇಮಿಸಿದ್ದಲ್ಲಿ, ಅವರಿಗೆ ಸ್ಯಾಲರಿ ಕೊಡಬೇಕಾಗುತ್ತದೆ. ಅಥವಾ ನೀವು ಮಷಿನ್ ಖರೀದಿಸಿ, ಈ ಕೆಲಸವನ್ನು ಮಾಡಬಹುದು. ಮಷಿನ್ ಬಳಸಬೇಕಾದರೆ ಹೆಚ್ಚು ಬಂಡವಾಳ ಹಾಕಬೇಕಾಗುತ್ತದೆ. ಆದರೆ ಕಡಿಮೆ ಬಂಡವಾಳ, ಹೆಚ್ಚು ಕೆಲಸ ಮಾಡುವವರು ಮಷಿನ್ ಬಳಸುವ ಅಗತ್ಯವಿಲ್ಲ.
ಮಷಿನೆ ತೆಗೆದುಕೊಳ್ಳುವುದಿದ್ದರೆ. 75ರಿಂದ 80 ಸಾವಿರ ರೂಪಾಯಿ ಬೇಕಾಗುತ್ತದೆ. ಇದರಲ್ಲಿ ಆಲೂಗಡ್ಡೆಯನ್ನು ಈಸಿಯಾಗಿ ಸ್ವಚ್ಛಗೊಳಿಸಿ, ಸಿಪ್ಪೆ ತೆಗೆದು, ಸ್ಲೈಸ್ ಮಾಡಬಹುದು. ಮತ್ತು ಒಣಗಿಸಲೂ ಬಹುದು. ಅದನ್ನು ಕರಿದು, ಪ್ಯಾಕ್ ಮಾಡುವುದು ಮಾತ್ರ ನಿಮ್ಮ ಕೆಲಸ. ಮಷಿನ್ ಬೇಡವೆಂದಲ್ಲಿ ನೀವೇ ಪೀಲರ್ ಮತ್ತು ಸ್ಲೈಸರ್ ತೆಗೆದುಕೊಂಡು ಚಿಪ್ಸ್ ಮಾಡಬಹುದು. ಇದಕ್ಕೆ ಇನ್ನೂರು ರೂಪಾಯಿ ಸಾಕು.
ದೊಡ್ಡ ಬಾಣಲಿ, ಗ್ಯಾಸ್ ಸ್ಟವ್‌ಗಾಗಿ 5 ಸಾವಿರ ರೂಪಾಯಿ ಖರ್ಚಾಗಬಹುದು. 2ರಿಂದ 3 ಸಾವಿರ ರೂಪಾಯಿ ಆಲೂಗಡ್ಡೆ, ಎಣ್ಣೆ ಸೇರಿ ಕೆಲವು ಕಚ್ಚಾ ವಸ್ತುಗಳನ್ನು ಖರೀದಿಸಲು ಬೇಕಾಗುತ್ತದೆ. ಪ್ಯಾಕ್ ಮಾಡಲು 13ರಿಂದ 15 ಸಾವಿರ ರೂಪಾಯಿ ಬೆಲೆ ಬಾಳುವ ಮಷಿನ್ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಪೇಪರ್ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ ಕೊಡಬಹುದು. ಇನ್ನು ಫುಡ್ ಲೈಸೆನ್ಸ್ ತೆಗೆದುಕೊಳ್ಳಲು 10ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತದೆ.
ಮಷಿನ್ ಬಳಸದೇ ಚಿಪ್ಸ್ ವ್ಯಾಪಾರ ಮಾಡುವುದಿದ್ದರೆ, ಫುಡ್ ಲೈಸೆನ್ಸ್ ಬಿಟ್ಟು 10ರಿಂದ 15 ಸಾವಿರ ಬೇಕಾಗಬಹುದು. ಮಷಿನ್ ಬಳಸಿ ವ್ಯಾಪಾರ ಮಾಡುತ್ತೇವೆ ಎಂದಲ್ಲಿ ಒಂದು ಲಕ್ಷ ಬಂಡವಾಳ ಬೇಕಾಗುತ್ತದೆ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..

