ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕ್ಯಾತಗಾನಕೆರೆ ಗ್ರಾಮದಲ್ಲಿ ರಾತ್ರಿವೇಳೆ ಮನೆಯಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿತದಿಂದ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗ್ರಾಮದ ನಾಗರಾಜು ಮತ್ತು ಮಮತಾ ದಂಪತಿಗಳ ಮಗನಾದ ಅಶೋಕ್(6) ಎನ್ನುವ ಬಾಲಕ ಮನೆಯಲ್ಲಿ ಮಲಗಿದ್ದ ರಾತ್ರಿ 11.30 ರ ಸುಮಾರಿಗೆ ಹಾವು ಕಡಿದಿದೆ. ತಕ್ಷಣ ಪಾವಗಡ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ 3 ಗಂಟೆಯವರೆಗೂ ಆಸ್ಪತ್ರೆಗೆ ವೈದ್ಯರು ಬಂದು ಸರಿಯಾದ ಚಿಕಿತ್ಸೆ ನೀಡದ ಕಾರಣ ಬಾಲಕ ಮೃತಪಟ್ಟಿದ್ದಾನೆ. ತುಮಕೂರು ಜಿಲ್ಲಾ ಆಸ್ಪತ್ರಗೆ ಕರೆದೊಯ್ಯತ್ಇದ್ದ ವೇಳೆ ಮಾರ್ಗ ಮದ್ಯೆ ಬಾಲಕ ಸಾವನ್ನಪ್ಪಿದ್ದಾನೆ,
ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದರು. ಸುಮಾರಿ ಎರಡು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಪ್ರತಿಭಟನೆಯನ್ನು ಪೊಲೀಸರು ಬಲವಂತವಾಗಿ ತಿಳಿಗೊಳಿಸಿದರು.
ಕಾಂಗ್ರೆಸ್ ಚಿಲ್ಲರೆ ಹೇಳಿಕೆಗೆ ರೆಡ್ಡಿ ಗರಂ: ಅವರು ಸವಲಕು ನಾಣ್ಯವೆಂದು ಪ್ರತಿಕ್ರಿಯೆ
ಮೋದಿ ಅವರು 10 ವರ್ಷದಲ್ಲಿ ದೇಶವನ್ನ ದಿವಾಳಿ ಮಾಡಿದ್ದಾರೆ: ಸಚಿವ ಸಂತೋಷ್ ಲಾಡ್
ಹೆಬ್ಬಾಳ್ಕರ್ ಲಿಂಗಾಯತ ಲೀಡರ್ ಅಂತಾ ಹೇಳೋ ಅವಶ್ಯಕತೆ ಇದೆಯಾ? ಸಂತೋಷ ಲಾಡ್…..!

