Saturday, April 12, 2025

Latest Posts

ಕೀನ್ಯಾ ಕ್ರಿಕೇಟ್ ಟೀಂ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಂಡ ದೊಡ್ಡ ಗಣೇಶ್

- Advertisement -

Sports News: ಕೆಲ ದಿನಗಳ ಹಿಂದಷ್ಟೇ ಕನ್ನಡಿಗ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ದೊಡ್ಡ ಗಣೇಶ್, ಕೀನ್ಯಾ ಕ್ರಿಕೇಟ್ ಟೀಂನ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಿತ್ತರಿಸಿದ್ದೆವು. ಆದ್ರೆ ಒಂದೇ ತಿಂಗಳಲ್ಲಿ ದೊಡ್ಡಗಣೇಶ್ ಈ ಸ್ಥಾನದಿಂದ ವಜಾಗೊಂಡಿದ್ದಾರೆ.

ದೊಡ್ಡಗಣೇಶ್ ಕೆಲವು ರೂಲ್ಸ್ ಫಾಲೋ ಮಾಡದ ಕಾರಣ, ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆಯುವ ಆಫ್ರಿಕಾ ತಂಡದ ಟೀ20 ಅರ್ಹತಾ ಸುತ್ತಿನಲ್ಲಿ ಕೀನ್ಯಾ ತಂಡ ಭಾಗವಹಿಸಲಿತ್ತು. ಇದರ ಜವಾಬ್ದಾರಿ ದೊಡ್ಡಗಣೇಶ್ ಮೇಲಿತ್ತು. ಆದರೆ ರೂಲ್ಸ್ ಫಾಲೋ ಮಾಡದ್ದಕ್ಕೆ, ಗಣೇಶ್ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ.

ವೇಗದ ಬೌಲರ್ ಎನ್ನಿಸಿಕೊಂಡಿದ್ದ ದೊಡ್ಡ ಗಣೇಶ್, ಟೀಂ ಇಂಡಿಯಾ ಪರ 4 ಟೆಸ್ಟ್ ಕ್ರಿಕೇಟ್ ಮತ್ತು 1 ಏಕದಿನ ಪಂದ್ಯವಾಡಿದ್ದಾರೆ. ಬಳಿಕ ಗೋವಾ ತಂಡದ ಕೋಚ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದರು.

- Advertisement -

Latest Posts

Don't Miss