Friday, December 5, 2025

Latest Posts

Doddaballapura : ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಕಾರ್ಯದರ್ಶಿ ಕಿಲಾಡಿ ತಿಮ್ಮರಾಜ್ ಎಸ್.ಜಿ..!

- Advertisement -

ದೊಡ್ಡಬಳ್ಳಾಪುರ : ಗ್ರಾಮಪಂಚಯ್ತಿ ಅಭಿವೃದ್ಧಿ ಅಧಿಕಾರಿ ನೀಡಬೇಕಾಗಿದ್ದ ಪರವಾನಿಗೆಯನ್ನು ಗ್ರಾಮಪಂಚಾಯ್ತಿ ಕಾರ್ಯದರ್ಶಿಯೇ (Secretary) ಕಟ್ಟಡ ಪರವಾನಗಿ ನೀಡದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನಲ್ಲಿ ನಡೆದಿದೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮಪಂಚಯ್ತಿ (Bhaktarahalli Grama Panchayat) ಕಾರ್ಯದರ್ಶಿ ತಿಮ್ಮರಾಜ್ ಎಸ್.ಜಿ (Thimmaraj SG) ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರದೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ ಎಂದು ಕಾರ್ಯದರ್ಶಿ ತಿಮ್ಮರಾಜ್ ಎಸ್.ಜಿ  ವಿರುದ್ಧ ಆರೋಪ  ಕೇಳಿಬಂದಿದೆ,ಇದಕ್ಕೆ ಸಂಬಂಧಿಸಿದಂತೆ ಭಕ್ತರಹಳ್ಳಿ ಗ್ರಾಮಪಂಚಯ್ತಿ ಅಭಿವೃದ್ಧಿ ಅಧಿಕಾರಿ ಎನ್ .ತ್ರಿವೇಣಿ (N .Triveni) ಪ್ರತಿಕ್ರಿಯಿಸಿದ್ದು ಕಟ್ಟಡ ಪರವಾನಗಿ ಮತ್ತು ಜನರಲ್  ಲೈಸೆನ್ಸ್ (General License) ಕಾರ್ಯದರ್ಶಿ ನೀಡಲು ಬರುವುದಿಲ್ಲ. ಪಿ‌.ಡಿ.ಓ ಅಧಿಕಾರಿಗಳಿಗೆ ಮಾತ್ರ ಪರವಾನಗಿ ನೀಡಲು ಅಧಿಕಾರ ಎಂದು ಪಿ.ಡಿ.ಓ ಎನ್.ತ್ರಿವೇಣಿ ತಿಳಿಸಿದ್ದಾರೆ. ಭಕ್ತರಹಳ್ಳಿ ಗ್ರಾಮಪಂಚಯ್ತಿಯ ಕಾಡತಿಪ್ಪೂರೂ ಎಂಬ ಗ್ರಾಮದಲ್ಲಿ ರಾಮರಸಯ್ಯ ಎಂಬುವವರು ಕಾಡತಿಪ್ಪೂರು ಗ್ರಾಮದ ಗ್ರಾಮಠಾಣದ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು ಮನೆ ನಿರ್ಮಾಣದ ಜಾಗಕ್ಕೆ ಸಂಬಂದಿಸಿದಂತೆ ಸೂಕ್ತ ದಾಖಲಾತಿಗಳು ಇದೆ ಈ ಹಿಂದೆ ಅದೇ ಜಾಗದಲ್ಲಿ ಗುಡಿಸಲಲ್ಲಿ ವಾಸವಿದ್ದೆ  ಪರವಾನಿಗೆಯನ್ನು ಪಡೆದು ಮನೆ ನಿರ್ಮಾಣ ಮಾಡುತ್ತಿದ್ದೇನೆ ಎಂದು ರಾಮರಸಯ್ಯ ಮಾತನಾಡಿದ್ದಾರೆ. ಇನ್ನೂ ಕಟ್ಟಡ  ನಿರ್ಮಾಣಕ್ಕೆ ಪರವಾನಗಿ ನೀಡಿದ ಗ್ರಾಮಪಂಚಯ್ತಿ ಕಾರ್ಯದರ್ಶಿ ತಿಮ್ಮರಾಜ್ ಎಸ್.ಜಿ ವಿರುದ್ಧ ಗ್ರಾಮಪಂಚಯ್ತಿ ಅದ್ಯಕ್ಷ ಸಿದ್ದಲಿಂಗಯ್ಯ ಬಿ.ಆರ್ ಇವರು ಆಕ್ರೋಶ ವ್ಯಕ್ತಪಡಿಸಿದ್ದು ರಾಮರಸಯ್ಯ ಮನೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಯ್ತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜಾರ್ ಮಾಡಿದ್ದು ಆದರೆ ಜಾಗದ ತಕರಾರು ಇರುವ ವಿಷಯವನ್ನು ಪಂಚಾಯತಿ ಅದ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ಬಾರದಂತರ ಮುಚ್ಚಿಟು ಸ್ಥಳ ಮಹಜಾರ್ ಮಾಡಿಸಲಾಗಿದೆ. ಪ್ರಸ್ತುತ ಕಟ್ಟಡ ಪರವಾನಗಿ ರದ್ದು ಮಾಡಲು ಪಿಡಿಓ ಹಾಗೂ ಕಾರ್ಯದರ್ಶಿಗೆ  ಸೂಚಿಸಲಾಗಿದೆ  ಎಂದು  ಪಿಡಿಓ ಹಾಗೂ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ ಪರವಾನಗಿ ನೀಡಿದ ಬಗ್ಗೆ ಭಕ್ತರಹಳ್ಳಿ ಗ್ರಾಮಪಂಚಯ್ತಿ ಕಾರ್ಯದರ್ಶಿ ತಿಮ್ಮರಾಜ್ ಇವರನ್ನು ನಮ್ಮ ಪ್ರತಿನಿದಿ  ಕೇಳಿದ ಸಂದರ್ಭದಲ್ಲಿ  ಕಾರ್ಯದರ್ಶಿ ತಿಮ್ಮರಾಜ್ ಪಿಡಿಓ ತ್ರಿವೇಣಿ ಇವರಿಬ್ಬರ ನಮಡುವೆ ಮಾತಿನ ಚಕಮಕಿ ನಡೆಯಿತು, ಕೊಂಚ ಕಸಿವಿಸಿಗೊಂಡ ಕಾರ್ಯದರ್ಶಿ ತಿಮ್ಮರಾಜ್ ಎಸ್.ಜಿ ತಮ್ಮ ಗ್ರಾಮಪಂಚಯ್ತಿಯಲ್ಲೆ ,ಹೈ ಡ್ರಾಮವನ್ನು  ಮಾಡಿದ್ರು. ನೋಡಿದ್ರಲ್ಲಾ ವೀಕ್ಷಕರೆ ಭಕ್ತರಹಳ್ಳಿ ಗ್ರಾಮಪಂಚಯ್ತಿ ಕಾರ್ಯದರ್ಶಿ  ಏನ್ ಮಾಡಿದ್ರು ಅಂತ ಗ್ರಾಮಪಂಚಯ್ತಿ ಅಧ್ಯಕ್ಷರ ಅನುಮತಿ ಪಡೆಯದೆ ತಮ್ಮ ಮೇಲಾಧಿಕಾರಿ ಪಿಡಿಓ ಗಮನಕ್ಕೂ ತರದೆ  ಕಾರ್ಯದರ್ಶಿ ತಿಮ್ಮರಾಜ್ ತಾವೇ ಕಟ್ಟಡ ನಿರ್ಮಾಣ ಮಾಡಲು ಪರವಾನಗಿ ನೀಡಿದ್ದು ಈಗಾ ತಾಲೂಕಿ ಪಂಚಾಯಿತಿ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು ಕಟ್ಟಡ ಪರವಾನಗಿಯನ್ನು ಪಿಡಿಓ ನೀಡಬೇಕು, ಕರ್ತವ್ಯಲೋಪ ಮಾಡಿದ್ದಲ್ಲಿ ಕಾರ್ಯದರ್ಶಿ ವಿರುದ್ಧ  ನಿರ್ದಾಕ್ಷಿಣ್ಯವಾಗಿ ಕ್ರಮ ತೆಗಡದುಕೊಳ್ಳುತ್ತೇವೆ ಎಂದು ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ್ (srinivas) ಮಾದ್ಯಮದವರೊಂದಿಗೆ ಮಾತನಾಡಿದ್ರು, ಭಕ್ತರಹಳ್ಳಿ ಗ್ರಾಮಪಂಚಯ್ತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ  ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇದ್ದರೂ ಕೂಡ ಕಾರ್ಯದರ್ಶಿಯವರು ಕಟ್ಟಡ ಪರವಾನಗಿ ನೀಡಿದ್ದು ಇದಕ್ಕೆ ಮೇಲಾಧಿಕಾರಿಗಳು ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲಾ ಹಾಗೂ ಪಿಡಿಓ ಇದ್ದರೂ  ಸಹಾ ಕಾರ್ಯದರ್ಶಿ ಅಕ್ರಮವಾಗಿ ಪರವಾನಗಿ ನೀಡಿದ್ದು  ಸರ್ಕಾರಕ್ಕೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ ಎಂದು ಗ್ರಾಮಪಂಚಯ್ತಿ ಸದಸ್ಯ ಕೃಷ್ಣಮೂರ್ತಿ ಕಾರ್ಯದರ್ಶಿ ತಿಮ್ಮರಾಜ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟರೆಯಾಗಿ ಭಕ್ತರಹಳ್ಳಿ ಗ್ರಾಮಪಂಚಯ್ತಿಯಲ್ಲಿ ಅಭಿವೃದ್ಧಿ ಅಧಿಕಾರಿ ಇದ್ದರೂ ಕೂಡ ಕಾರ್ಯದರ್ಶಿ ತಿಮ್ಮರಾಜ್  ಕಟ್ಟದ ಪರವಾನಗಿ ನೀಡಿದ್ದು ಯಾಕೆ,ಕಾರ್ಯದರ್ಶಿ ತಿಮ್ಮರಾಜ್ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳುತ್ತಾರ ಎನ್ನುವಂತದ್ದು  ನೋಡಬೇಕಾಗಿದೆ.

                                                                                ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

- Advertisement -

Latest Posts

Don't Miss