ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ (Doddaballapura City) ಮಖ್ಯರಸ್ತೆಯ ಪಕ್ಕದಲ್ಲಿರುವ ಕಾಸ್ ಬಾಗ್ ಎಂಬಲ್ಲಿ ಇರುವ ಒಂದು ಮನೆಯಲ್ಲಿ ಕಳ್ಳರು ಕಳ್ಳತನ ನಡೆಸಿದ್ದಾರೆ,ಪದ್ಮ ಎಂಬುವವರು ದುಬೈ ನಲ್ಲಿರುವ ಮಗಳ ಮನಗೆಂದು ನವೆಂಬರ್ ತಿಂಗಳಲ್ಲಿ ದುಬೈಗೆ (Dubai) ಹೋಗಿದ್ದರು. ಇದನ್ನು ಗಮನಿಸಿದ ಕದೀಮರು ಪದ್ಮ ಎಂಬುವವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಚಿನ್ನ,ಬೆಳ್ಳಿ ನಾಣ್ಯಗಳು,ಸೀರೆಗಳನ್ನು (Gold, silver coins, saris) ಕದೀಮರು ದರೋಡೆ ಮಾಡಿದ್ದು ಕಳ್ಳತನ ಮಾಡಿದ ಸುಳಿವು ಸಿಗಬಾರದೆಂದು ಕಳ್ಳತನ ಮಾಡಿದ ಸ್ಥಳಗಳಲ್ಲಿ ಕಾರದ ಪುಡಿಯನ್ನು ಹಾಕಿದ ಖತರ್ನಾಕ್ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಅಡೀಷನಲ್ (SP Additional), ಎಸ್ಪಿ ಹಾಗೂ ಸರ್ಕಲ್ ಇನ್ ಪೆಕ್ಟರ್ (Circle Inspector) ಸ್ಥಳಕ್ಕೆ ಬೇಟಿನೀಡಿ ಪರಿಶೀಲನೆ ನಡೆಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಅಧಿಕಾರಿ ಡಾಕ್ಟರ್ ಕೋನ ವಂಶಿಕೃಷ್ಣ (SP Officer Dr. Kona Vamishrishna) ಇವರು ಮಾತನಾಡಿ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಮಹಿಳೆ ದೂರು ನೀಡಿದ್ದಾರೆ. ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದೇವೆ ಪಿಂಗರ್ ಪ್ರಿಂಟ್ ಟೀಮ್ ಹಾಗೂ ಡಾಗ್ ಸ್ಕ್ವಾಡ್ ಟೀಮ್ ಸ್ಥಳದ ಪರಿಶೀಲನೆ ನಡೆಸಿದೆ ಇದಕ್ಕೆ ಸಂಬಂಧಿಸಿದಂತೆ ಕಳ್ಳರನ್ನು ಹಿಡಿಯಲು ಎರಡು ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲಿ ಕಳ್ಳರನ್ನು ಪತ್ತೆಹಚ್ಚಿಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಅಧಿಕಾರಿ ಡಾ.ಕೋನ ವಂಶಿಕೃಷ್ಣ ಮಾತನಾಡಿದರು.
ಅಭಿಜಿತ್,ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.