ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತ(Bangalore rural) ರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸ ವರ್ಷದ ಪ್ರಯುಕ್ತ ಹಾಗೂ ಕರುನಾಡ ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ದೀಪು ಗೌಡ(Deepu Gowda) ಇವರ ಹುಟ್ಟು ಹಬ್ಬದ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯ ಸುಮಾರು ಇನ್ನೂರು ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ಹಾಗೂ ಆಸ್ಪತ್ರೆಯ ವೈದ್ಯರಿಗೆ ಸಾನಿಟೇಸರ್ ಮತ್ತು ಕೈ ಗೌಸ್ ವಿತರಣೆ ಮಾಡಲಾಯಿತು.
ಹಟ್ಟುಹಬ್ಬದಂದು ದುಂದು ವೆಚ್ಚ ಮಾಡಿ ಅರ್ಥವಿಲ್ಲದ ಹುಟ್ಟುಹಬ್ಬ ಆಚರಣೆ ಮಾಡುವ ಬದಲು ರೋಗಿಗಳ ಸೇವೆ ಮಾಡಿದರೆ ಶ್ರೇಯಸ್ಸು ಸಿಕ್ಕಿದಂತೆ ಆಗುತ್ತೆ ಅಂತ ಕರುನಾಡ ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕ(Bangalore Rural District Youth Unit)ದ ಅಧ್ಯಕ್ಷ ದೀಪು ಗೌಡ ಮಾತನಾಡಿದರು.ಕಾರ್ಯಕ್ರಮದಲ್ಲಿಕನಕರಾಜ್ ಗೌಡ,ಬಿ.ಆರ್ ಶಶಿದರ್ ಹಾಗೂ ಮಹಿಳಾ ಘಟಕದ ಕಾರ್ಯಕರ್ತರಾದ ರತ್ನಮ್ನ ,ಮೀನಮ್ಮ,ಡಿ.ಎಸ್ ಲಕ್ಷ್ಮೀದೇವಿ ಹಾಗೂ ಸಂಘಟನೆಯ ಎಲ್ಲಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Doddaballapura : ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ ದೀಪುಗೌಡ..!
- Advertisement -
- Advertisement -