Thursday, December 26, 2024

Latest Posts

Doddaballapura : ಭಕ್ತರಿಗೆ ತಾರತಮ್ಯ, ಆರ್ಚಕನನ್ನ ವಜಾ ಮಾಡಿದ ಟ್ರಸ್ಟ್..!

- Advertisement -

ದೊಡ್ಡಬಳ್ಳಾಪುರ  : ದೇವರ ಪೂಜಾ ಕಾರ್ಯದಲ್ಲಿ ಭಕ್ತರ ನಡುವೆ  ತಾರತಮ್ಯ ಮತ್ತು ಭಕ್ತರ ಹುಂಡಿ ಹಣದಲ್ಲಿ ವಂಚನೆ ಹಿನ್ನಲೆ ಟ್ರಸ್ಟ್  ನವರು ಆರ್ಚಕನನ್ನ ವಜಾ ಮಾಡಿದ್ದರು, ಆರ್ಚಕ  ದೇವಾಲಯಕ್ಕೆ  ಬಾಗಿಲು ಹಾಕಿ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (doddaballapura) ನಗರದ ಕರೇನಹಳ್ಳಿಯ  ಬಯಲು ಬಸವಣ್ಣ ದೇವಸ್ಥಾಕ್ಕೆ ಆರ್ಚಕ ಹೆಚ್.ವಿ. ಕೃಷ್ಣಮೂರ್ತಿ (H.V. Krishnamurti) ಬಾಗಿಲು ಹಾಕಿ ಎರಡು ದಿನದಿಂದ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದರು,  ಆರ್ಚಕನ ವರ್ತನೆಯಿಂದ ಬೇಸತ್ತ  ಭಕ್ತರು ಬೀಗ ರಿಪೇರಿ ಮಾಡುವವನನ್ನು  ಕರೆದು  ದೇವಸ್ಥಾನದ  ಬಾಗಿಲು  ತೆರೆದು ದೇವರಿಗೆ ಪೂಜೆ ಮಾಡಿ ದೇವರ ದರ್ಶನ ಪಡೆದರು. ಐತಿಹಾಸಿಕ  ಹಿನ್ನಲೆ ಬಯಲು ಬಸವಣ್ಣ ದೇವಸ್ಥಾನಕ್ಕೆ (Bayalu Basavanna Temple) ಪೂಜೆ ಮಾಡಲು ಅರ್ಚಕರು ಇರಲಿಲ್ಲ, ಬಯಲು ಬಸವಣ್ಣ  ದೇವಸ್ಥಾನದ  ಸೇವಾ ಟ್ರಸ್ಟ್  ನವರು 11 ವರ್ಷಗಳ ಹಿಂದೆ ಗೌರಿಬಿದನೂರು  ಮೂಲದ ಹೆಚ್.ಎನ್ ಕೃಷ್ಣಮೂರ್ತಿಯನ್ನ ಆರ್ಚಕನನ್ನಾಗಿ  ನೇಮಿಸಿದರು, ದಿನ ಕಳೆದಂತೆ ಆರ್ಚಕ ದೇವಸ್ಥಾನವನ್ನು ತನ್ನ ಸ್ವತ್ತು ಎಂಬಂತೆ ವರ್ತಿಸತೊಡಗಿದ, ದೇವಾಸ್ಥಾನಕ್ಕೆ  ಬರುವ ಭಕ್ತರ ನಡುವೆ ತಾರತಮ್ಯ  ಮಾಡ ತೋಡಗಿದ, ಹಣ ಕೊಟ್ಟವರಿಗೆ ಪೂಜೆ ಹಣ ಕೊಡದಿದ್ದವರಿಗೆ ಪೂಜೆ ಮಾಡಿ ಕೊಡುತ್ತಿರಲಿಲ್ಲ, ಕಾಣಿಕೆ ಹುಂಡಿ ಮೇಲೆ ಆರತಿ ತಟ್ಟಿ ಇಟ್ಟು  ಭಕ್ತರು ಕಾಣಿಕೆ ಹಣವನ್ನ ತಾನೇ ಪಡೆಯುತ್ತಿದ್ದ, ಟ್ರಸ್ಟ್  ನವರು ಗಮನಕ್ಕೂ ತರದೆ ಮುಜರಾಯಿ  ಇಲಾಖೆ ಅಧಿಕಾರಿಗಳನ್ನ ಕರೆದು ಹುಂಡಿ ಹಣ ಎಣಿಕೆ ಮಾಡಿದ್ದಾನೆಂದು ಟ್ರಸ್ಟ್  ನವರು ಗಂಭೀರ ಆರೋಪ ಮಾಡಿದ್ದಾರೆ. ಅರ್ಚಕನ ವರ್ತನೆಯಿಂದ ಬೇಸತ್ತ ಟ್ರಸ್ಟ್  ನವರು ಸರ್ವಾನುಮತದಿಂದ  ಅರ್ಚಕನನ್ನು ವಜಾ ಮಾಡಿದ್ದಾರೆ. ಬಯಲು ಬಸವಣ್ಣ  ದೇವಸ್ಥಾನಕ್ಕೆ ಸಂಬಂಧಿಸಿದಂತೆ  ಸರ್ವೆ ನಂಬರ್ 54ರಲ್ಲಿ  37 ಗುಂಟೆ ಜಮೀನು  ಇದೆ,  ಟ್ರಸ್ಟ್  ಅನ್ನು ಮುಜರಾಯಿ ಇಲಾಖೆಗೆ ಸೇರಿಸಿದ್ದಾರೆ. ಇಡೀ ದೇವಸ್ಥಾನ ತನಗೆ ಸಿಗುತ್ತೆ ಎಂಬ ಕಾರಣಕ್ಕೆ ಮುಜರಾಯಿ ಇಲಾಖೆಗೆ (Muzarai Department) ದೂರು ನೀಡಿರುವ ಆರ್ಚಕ ಟ್ರಸ್ಟ್  ನವರು ದೇವಸ್ಥಾನದ  ಜಾಗದಲ್ಲಿ ವಾಣಿಜ್ಯ  ಮಳಿಗೆ ನಿರ್ಮಿಸಿ ಹಣ ದೋಚುತ್ತಿದ್ದಾರೆಂದು ಆರೋಪ ಮಾಡಿದ್ದಾರೆ, ಇಲಾಖೆಯವರು ಸ್ಥಳಕ್ಕೆ  ಭೇಟಿ ನೀಡಿ ಯಾವುದೇ ಮಳಿಗೆ ನಿರ್ಮಾಣ  ಮಾಡಿಲ್ಲವೆಂದು  ವರದಿ ನೀಡಿದ್ದಾರೆಂದು ಟ್ರಸ್ಟ್  ನವರು ಆರ್ಚಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss