Wednesday, January 15, 2025

Latest Posts

Doddaballapura : ಪ್ರಜಾ ವಿಮೋಚನಾ ಚಳುವಳಿಯ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಪ್ರಜಾ ವಿಮೋಚನಾ ಚಳುವಳಿ ಸಂಘಟನೆಯ (Organization of the praja Liberation Movement) ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಉಮೇಶ್ ಕಂಚಿಗನಾಳ (Umesh Kanchiganala) ,ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾಂಚನ (kanchana),ಉಪಾಧ್ಯಕ್ಷರಾಗಿ ಸಿಕಂದರ್ (Sikander) ,ಜಂಟಿ ಕಾರ್ಯದರ್ಶಿ ಶಬೀರ್ (Shabir, Joint Secretary), ದೊಡ್ಡಬಳ್ಳಾಪುರ ನಗರ ಅಧ್ಯಕ್ಷ ಮೊಖಂದರ್ ಗೌಡ ಇವರನ್ನು ಆಯ್ಕೆ ಮಾಡಲಾಯಿತು. ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಜಾ ವಿಮೋಚನಾ ಚಳುವಳಿ ಸಂಘಟನೆಯ ರಾಜ್ಯಾಧ್ಯಕ್ಷ ಆನೆಕಲ್ ಕೃಷ್ಣಪ್ಪ (President Anekal Krishnappa) ಮಾತನಾಡಿ ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಕಳೆದರೂ ಈ ದೇಶದ ಬಹುದೊಡ್ಡ ಸಮಸ್ಯೆಗಳಾದ ಉದ್ಯೋಗ, ವಸತಿ,ಆರೋಗ್ಯ, ವಿಧ್ಯಾಭ್ಯಾಸ ಎಲ್ಲಾವೂ ಕುಂಠಿತಗೊಂಡಿದೆ, ಆಡಳಿತಶಾಹಿ ಸರ್ಕಾರಗಳು ಇಂದು ನಿರ್ಲಕ್ಷ ತೋರುವ  ಮೂಲಕ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂದು ಆನೆಕಲ್ ಕೃಷ್ಣಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದರು.

                                                                                 ಅಭಿಜಿತ್ ಕರ್ನಾಟಕ ಟಿ.ವಿ, ದೊಡ್ಡಬಳ್ಳಾಪುರ.

- Advertisement -

Latest Posts

Don't Miss