ದೊಡ್ಡಬಳ್ಳಾಪುರ : ಕರೋನ ರೂಪಾಂತರಿ ಒಮಿಕ್ರಾನ್ ಆತಂಕದ ಹಿನ್ನೆಲೆ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಜಾತ್ರೆ ರದ್ದು ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಜಾತ್ರೆ ರದ್ದು ಮಾಡಲಾಗಿದೆ. ಹೌದು ಜನವರಿ 8 ರಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವ ರದ್ದು ಮಾಡಿದ್ದು ದೇವಾಲಯದ ಆವರಣದಲ್ಲಿ ಚಿಕ್ಕ ರಥದಲ್ಲಿ ರಥೋತ್ಸವಕ್ಕೆ ಸೂಚನೆಯನ್ನು ನೀಡಲಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಸಾಂಕೇತಿಕ ರಥೋತ್ಸವಕ್ಕೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ದೇವಾಲಯದ ಆವರಣದ ಒಳಾಂಗಣದಲ್ಲಿ ನಡೆಯುವ ರಥೋತ್ಸವಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ತರಲಾಗಿದೆ. ಕೇವಲ ಅರ್ಚಕರು ಹಾಗೂ ದೇವಾಲಯದ ಆಡಳಿತ ಮಂಡಳಿಯಿಂದ ಮಾತ್ರ ರಥೋತ್ಸವ ನಡೆಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಸಿ ಶ್ರೀನಿವಾಸ್ ಹೇಳಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ.