Friday, March 14, 2025

Latest Posts

Doddaballapura : ಆಶ್ರಯ ಯೋಜನೆಯ ಮನೆ ಖಾಲಿ ಮಾಡುವಂತೆ ದಬ್ಬಾಳಿಕೆ..!

- Advertisement -

ದೊಡ್ಡಬಳ್ಳಾಪುರ : ತಾಲೂಕಿನ ಕಸಬಾ ಹೋಬಳಿ ಮಾದಗೊಂಡನಹಳ್ಳಿ ಯಲ್ಲಿ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವತಿಯಿಂದ 494 ಮನೆಗಳನ್ನು ಕೊಡಲಾಗಿದೆ. ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ಜನರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರು ಇಲ್ಲಿ ವಾಸವಾಗಿದ್ದಾರೆ, ಕಳೆದ 16 ವರ್ಷಗಳಿಂದ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಹೊರತಾಗಿಯೂ ಮನೆ ಇದೆಯೆಂಬ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಕೆಲವು ಮನಗಳು ಖಾಲಿ ಇದ್ದು ಮನೆ ಇಲ್ಲದ ನಿರ್ಗತಿಕ 38 ಕುಟುಂಬಗಳು ಖಾಲಿ ಮನೆಗಳಲ್ಲಿ ವಾಸವಾಗಿದ್ದಾರೆ, ಆದರೀಗ ಅಸಲಿ ಮಾಲೀಕರು ಬಂದು ಮನೆಯನ್ನು ಕಾಲಿ ಮಾಡಿ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಪ್ರತಿದಿನ ಮನೆಯ ಬಳಿ ಗೂಂಡಾಗಳನ್ನು ಕರೆತಂದು ಮನೆ ಖಾಲಿ ಮಾಡಿ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಜನರು ಕಣ್ಣೀರು ಹಾಕುತ್ತಿದ್ದಾರೆ.

ಆಶ್ರಯ ಯೋಜನೆಯ ನಿಯಮದ ಪ್ರಕಾರ ಫಲಾನುಭವಿಗಳು ತಮಗೆ ಮಂಜೂರಾದ ಮನೆಗಳಲ್ಲಿ ವಾಸವಾಗಿರಬೇಕು ಖಾಲಿ ಬಿಡುವಂತಿಲ್ಲ ಮತ್ತು ಮನೆಗಳನ್ನು ಬಾಡಿಗೆ ಕೊಡುವಂತಿಲ್ಲ, ಇಲ್ಲಿಯೂ ಸಹ ನೈಜ ಫಲಾನುಭವಿಗಳು ತಮಗೆ ಮಂಜೂರಾದ ಮನೆಗಳಲ್ಲಿ ವಾಸವಾಗಿದೆ ಖಾಲಿ ಬಿಟ್ಟಿದ್ದಾರೆ ಮತ್ತು ಕೆಲವರು ಬಾಡಿಗೆ ಸಹ ಕೊಟ್ಟಿದ್ದಾರೆ ಎಂಬ ಆರೋಪ ಸಹ ಇದೆ. ನೈಜ ಫಲಾನುಭವಿಗಳು ಈಗ ಬಂದು ಮನೆಗಳನ್ನು ಖಾಲಿ ಮಾಡಿ ನಮ್ಮ ಹೆಸರಿನಲ್ಲಿ ಮನೆ ಇದೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಕಳೆದ ಹದಿನಾರು ವರ್ಷಗಳಿಂದ ವಾಸವಾಗಿರುವ ಕುಟುಂಬಗಳಿಗೆ ವಾಸವಾಗಿರುವ ಮನೆಯ ವಿಳಾಸಕ್ಕೆ ವೋಟರ್ ಐಡಿ ಪಡಿತರ ಚೀಟಿ ಇದೆ ಮತ್ತು ವಿದ್ಯುತ್ ಬಿಲ್ ಸಹ ಕಟ್ಟುತ್ತಿದ್ದಾರೆ. ಆದರೆ ತಮ್ಮ ಹೆಸರಿನಲ್ಲಿ ಮನೆ ಹಕ್ಕುಪತ್ರ ಇಲ್ಲದಿರುವುದು ಅತಂತ್ರ ಪರಿಸ್ಥಿತಿಯನ್ನು ಉಂಟುಮಾಡಿದೆ. ಈಗ ವಾಸವಾಗಿರುವ ಮನೆಗಳಿಗೆ ಹಕ್ಕುಪತ್ರವನ್ನು ಮಾಡಿಕೊಡಿ, ಇಲ್ಲ ನೈಜ ಫಲಾನುಭವಿಗಳಿಗೆ ಬದಲಿ ನಿವೇಶನ ವಾದರೂ ಕೊಡಿ, ಇದೇ ಸ್ಥಳದಲ್ಲಿ 44 ನಿವೇಶನಗಳು ಖಾಲಿ ಇತ್ತು ಈ ನಿವೇಶನಗಳನ್ನು ನಮ್ಮ ಹೆಸರಿಗೆ ಮಾಡಿಕೊಡಿ ಆಗ ಮನೆ ಖಾಲಿ ಮಾಡುವುದಾಗಿ ಹೇಳುತ್ತಾರೆ. ಆದರೆ ದೊಡ್ಡಬಳ್ಳಾಪುರ ನಗರಸಭೆ ಇಲ್ಲಿನ ಜನರ ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ, ಬದಲಿಗೆ ಮನೆ ಖಾಲಿ ಮಾಡಿಸಿಕೊಂಡು ಮನೆಗಳಿಗೆ ಹೋಗಿ ಎಂದು ನೈಜ ಮನೆಮಾಲೀಕರಿಗೆ ಸಲಹೆ ನೀಡುತ್ತಿದ್ದಾರಂತೆ.

ಅಭಿಜಿತ್, ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

- Advertisement -

Latest Posts

Don't Miss