ದೊಡ್ಡಬಳ್ಳಾಪುರ : ಅವರಿಬ್ಬರು ಕಳೆದ 16 ವರ್ಷಗಳಿಂದೆ ಮದುವೆಯಾಗಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ದರು. ಆದ್ರೆ ಗಂಡ ಕುಡಿತಕ್ಕೆ ದಾಸನಾಗಿ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬರ್ತಿದ್ದ. ಕಳೆದ ರಾತ್ರಿಯೂ ಕೂಡ ಕುಡಿದು ಮನೆಗೆ ಬಂದವನು ಬೆಳಗ್ಗೆಯಾಗೋದ್ರೊಳಗೆ ಬರ್ಭರವಾಗಿ ಕೊಲೆಯಾಗಿ ಹೋಗಿದ್ದಾನೆ. ಹೆಂಡತಿಯೇ ಗಂಡನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾಳೆ. ಬರ್ಭರವಾಗಿ ಕೊಲೆಯಾಗಿ ಬಿದ್ದಿರೋ ಗಂಡ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಗಂಡನನ್ನೆ ಕೊಲೆ ಮಾಡಿರೋ ಪತ್ನಿ. ಕೊಲೆಯಾಗಿರೋ ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು (police). ಅಯ್ಯೋ ನನ್ನ ಮಗನನ್ನು ಕೊಲೆಮಾಡಿ ಬಿಟ್ಟಳಲ್ಲ ಅಂತಾ ಸ್ಥಳದಲ್ಲಿ ಪೋಷಕರ ಆಕ್ರಂಧನ. ಇಂತಹ ಭೀಕರ ಕೊಲೆಯಾಗಿರೋ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ. ಇನ್ನೂ ಗ್ರಾಮದ ನಿವಾಸಿ ಹನುಮಯ್ಯ (Hanumaya) (32) ಕೊಲೆಯಾಗಿರೋ ದುರ್ಧೈವಿ. ಇನ್ನೂ ತನ್ನ ಪತ್ನಿ ಭಾಗ್ಯ ಎಂಬಾಕೆ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಅಂದಹಾಗೆ ಕಳೆದ 16 ವರ್ಷಗಳಿಂದೆ ಮದುವೆಯಾಗಿರೋ ಹನುಮಯ್ಯ ಹಾಗೂ ಭಾಗ್ಯ (bhagya) ಕೂಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ದರು. ಇನ್ನೂ ಇವರಿಗೆ ಗಂಡು ಹೆಣ್ಣು ಇಬ್ಬರು ಮಕ್ಕಳಿದ್ದು ಇವರಿಬ್ಬರು ಭಾಗ್ಯಳ ತವರು ಮನೆಯಲ್ಲೆ ಬೆಳೆಯುತ್ತಿದ್ದಾರಂತೆ. ಇನ್ನೂ ಭಾಗ್ಯ ಗಂಡನ ಜತೆಯಲ್ಲೆ ವಾಸವಿದ್ದು, ಗಂಡ ಯಾವಾಗಲೂ ನಿರಂತರ ಕುಡಿದ ಅಮಿನಲ್ಲಿ ಬರುತ್ತಿದ್ದನಂತೆ. ಹೀಗಾಗಿ ಕಳೆದ ರಾತ್ರಿಯೂ ಕುಡಿದ ಅಮಲಿನಲ್ಲಿ ಬಂದ ಗಂಡನ ಕುಡಿತದಿಂದ ಬೇಸತ್ತ ಹೆಂಡತಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಅಂದಹಾಗೆ ನೆನ್ನೆ ಬೆಳಗ್ಗೆ ಕೂಲಿಗೆ ಹೋಗಿದ್ದ ಗಂಡ ಮನೆಗೆ ಮಟನ್ ತೆಗೆದುಕೊಂಡು ಬಂದು ಕೊಟ್ಟಿದ್ದನಂತೆ. ಇನ್ನೂ ಸಾಂಬಾರ್ ಮಾಡುವಂತೆ ಹೇಳಿ ಹೋದವನು ಕುಡಿದು ರಾತ್ರಿ 9 ಗಂಟೆಗೆ ಮನೆಯ ಬಳಿ ಹನುಮಯ್ಯ ಬಂದಿದ್ದಾನೆ. ಈ ವೇಳೆ ಬಾಗಿಲು ತೆಗೆಯದ ಪತ್ನಿ ಮದ್ಯರಾತ್ರಿವರೆಗೂ ಹೊರಗಡೆಯೇ ನಿಲ್ಲಿಸಿದ್ದಳಂತೆ. ಇನ್ನೂ ಒಂದುಗಂಟೆಗೆ ಬಾಗಿಲು ತೆಗೆದಾಗ ಒಳಗಡೆ ಪತಿ ಹಾಗೂ ಪತ್ನಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರಂತೆ. ಈ ವೇಳೆ ಹೆಂಡತಿ ದೊಡ್ಡ ಕಲ್ಲು ತಂದು ಮಲಗಿದ್ದ ಗಂಡನ ತಲೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದು, ಸಾಕ್ಷಿ ಸಿಗಬಾರದು ಎಂದು ಕಲ್ಲನ್ನ ಮನೆಯ ಪಕ್ಕದ ಬಾವಿಯಲ್ಲಿ ಎಸೆದಿದ್ದಾಳೆ. ಬೆಳಗ್ಗೆ ಪಕ್ಕದ ಮನೆಯವರು ಬಂದು ನೋಡಿದಾಗ ಯಾರೋ ಕೊಲೆ ಮಾಡಿ ಹೋಗಿದ್ದಾರೆ ಅಂತಾ ಸುಳ್ಳು ಹೇಳಿದ್ದಾಳೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು (Doddaballapur Rural Police) ಭೇಟಿ ನೀಡಿ ಪತ್ನಿ ಭಾಗ್ಯಳನ್ನ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ತಾನೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಇನ್ನೂ ಈಕೆ ಮೊಬೈಲ್ (Mobile) ಪೋನ್ ಬಳಕೆ ಮಾಡ್ತಿದ್ದು, ನನ್ನ ಬಳಿ ಮೊಬೈಲ್ ಇಲ್ಲ ಅಂತಾ ಸುಳ್ಳು ಹೇಳುತ್ತಿದ್ದಳಂತೆ. ಜತೆಗೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಈಕೆ ಒಬ್ಬಳೆ ಅಲ್ಲ ಈಕೆಯ ಜೊತೆ ಬೇರೆಯವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ಇನ್ನೂ ತನ್ನ ಗಂಡನ ನಿರಂತರ ಕುಡಿತದಿಂದ ಬೇಸತ್ತು ಕೊಲೆ ಮಾಡಿರೋದಾಗಿ ಭಾಗ್ಯ ಹೇಳ್ತಿದ್ದು, ಅನೈತಿಕ ಸಂಬಂಧದ ಹಿನ್ನಲೆ ಕೊಲೆ ಅಂತಾ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ನಿ ಭಾಗ್ಯಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಪೊಲೀಸರ ತನಿಖೆಯ ನಂತರ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ
ಅಭಿಜಿತ್,ಕರ್ನಾಟಕ ಟಿವಿ,ದೊಡ್ಡಬಳ್ಳಾಪುರ.