ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯಾ..?- ಶೆಟ್ಟರ್

Political News: ಹುಬ್ಬಳ್ಳಿ: ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ, ಕೇಂದ್ರ ಸಚಿವರಿಗೆ ಕನಸು ಬಿದ್ದಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಶಯ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.

ಶಶಿ ತರೂರ್ ಸಭೆಯಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಶೆಟ್ಟರ್ ಟಾಂಗ್ ಕೊಟ್ಟು, ಕೇಂದ್ರ ಸಚಿವರಿಗೆ, ಅವರಿಗೆನು ಅಂತರಾತ್ಮ ಇದೆಯಾ..? ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿಯಿದೆಯಾ..? ಸುಮ್ಮನೆ ಆರೋಪ ಮಾಡೋದು, ಪ್ರಚಾರ ತೆಗೆದುಕೊಳ್ಳುವುದು ಬಿಟ್ಟ್ರೆ ಇದರ ಹಿಂದೆ ಏನು ಇಲ್ಲ. ಇದು 100% ಆಧಾರ ರಹಿತ ಆರೋಪ ಆಗಿದೆ ಎಂದಿದ್ದಾರೆ.

ಅಲ್ಲದೇ, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಬೇಜವ್ದಾರಿ ಹೇಳಿಕೆ ನೀಡಬಾರದು. ಒಂದು ಸಾವಿರ ಕೋಟಿ ಕಲೆಕ್ಟ್ ಮಾಡಿ ತೆಲಂಗಾಣಕ್ಕೆ ರಾಜ್ಯ ಕಾಂಗ್ರೆಸ್ ನೀಡುತ್ತೆ ಅಂತ ಜೋಶಿ ಆರೋಪ ಮಾಡಿದ್ದರು. ಈಗ ಅದಕ್ಕೆ ಅವರು ಏನು ಉತ್ತರ ನೀಡುತ್ತಾರೆ..? ಅವರು ಸುಮ್ಮನೆ ವೇಗವಾದ ಆರೋಪ ಮಾಡುತ್ತಾರೆ. ಬೆಂಗಳೂರಿನಲ್ಲಿ ಸಿಕ್ಕ ಹಣ ಕಾಂಗ್ರೆಸ್ ಪಾರ್ಟಿಗೆ ಸೇರಿದ್ದು ಅಂತ ಜೋಶಿ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಳಿ‌ ಐಟಿ, ಈಡಿ, ಸಿಬಿಐ ಇದೆ ಅದನ್ನು ತನಿಖೆ ಮಾಡಿ ಅದು ಯಾರ ಹಣ, ಅದು ಯಾರ ಮನೆ ಅಂತ ಹೊರಗೆ ತರಲಿ ಎಂದು ಒತ್ತಾಯ ಮಾಡಿದರು.

ಕಾಂಗ್ರೆಸ್ ನಲ್ಲಿ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಇದು ಸಾರ್ವಜನಿಕವಾಗಿ‌ ಚರ್ಚೆ ಮಾಡುವ ವಿಚಾರ ಅಲ್ಲಾ.ಆದರೆ ಅವರಿಗೆ ವಯಕ್ತಿಕ ಸಮಸ್ಯೆ ಆದಾಗ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುತ್ತಾರೆ. ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ.  ಅದನ್ನು ಸಿಎಂ ಅದನ್ನು ಸರಿ ಮಾಡತ್ತಾ. ನಿಗಮ ಮಂಡಳಿ ಆಯ್ಕೆ ಯಾವುದೇ ಸಮಸ್ಯೆ ಇಲ್ಲ. ಯಾವುದೇ ಸರ್ಕಾರದ ಬಂದಾಗ ಇಂತಹ ವಿಚಾರ ಬರೋದು ಸಹಜ ಇದನ್ನು ಸರಿ ಮಾಡುವ ಕೆಲಸ ಸಹ ನಡೆಯುತ್ತಿವೆ ಎಂದರು.

ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಪ್ರದರ್ಶನ: ಸಚಿವರ ಅಸಮಾಧಾನ

ನಮ್ಮ ಎಲ್ಲರ ವಿರುದ್ದನೂ ಕೇಸ್ ಮಾಡಿಬಿಡಿ: ಸಂಸದ ಶಶಿ ತರೂರ್

ರಜತ್ ಗೆ ಟಿಕೇಟ್ ನೀಡುವಂತೆ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡರಿಂದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ

About The Author