ಬೆಂಗಳೂರು : ನಟ ಡಾಲಿ ಧನಂಜಯ್ ಅವರಿಗೆ ಸಾಲು ಸಾಲು ಸಿನಿಮಾಗಳು ಅರಸಿ ಬರುತ್ತಿವೆ. ಅವರ ಅಭಿನಯದ ರತ್ನನ್ ಪ್ರಪಂಚ ಸಿನಿಮಾ ಇತ್ತೀಚಿಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇದೀಗ ಅವರ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೆರಿದೆ. ಒನ್ಸ್ ಅಪನ್ ಅ ಟೈಮ್ ಇನ್ ಜಮಾಲ್ ಗುಡ್ಡ' ತಮ್ಮ ಮುಂದಿನ ಹೊಸ ಸಿನಿಮಾ ಎಂದು ಧನಂಜಯ್ ಟ್ವಿಟರ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಈ ಚಿತ್ರವನ್ನು
ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ವಿಭಿನ್ನ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಕುಶಾಲ್ ಗೌಡ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿಹಾರಿಕಾ ಮೂವೀಸ್ ಬ್ಯಾನರ್ ಅಡಿ ಶ್ರೀಹರಿ ಅವರು ನಿರ್ಮಾಪಕರಾಗಿದ್ದಾರೆ. ಉಳಿದಂತೆ ಹೆಚ್ಚಿನ ಮಾಹಿತಿಗಳು ಹೊರ ಬಿದ್ದಿಲ್ಲ.
ಚಿತ್ರಕ್ಕೆ ಸಂಬoಧಪಟ್ಟoತೆ ಪೋಸ್ಟರ್ ಒಂದನ್ನು ಧನಂಜಯ್ ಹಂಚಿಕೊoಡಿದ್ದಾರೆ. ಇದು ನನ್ನ ಹೊಸ ಪ್ರಾಜೆಕ್ಟ್ ಎಂದು ಹೇಳಿಕೊಂಡಿದ್ದಾರೆ.
ಇನ್ನು ಡಾಲಿ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ' ಮುಂದಿನ ತಿಂಗಳು ತೆರೆ ಕಾಣಲಿದೆ. ಬಡವ ರಾಸ್ಕಲ್,
ತೋತಾಪುರಿ’ ಬಿಡುಗಡೆಗೆ ಸಿದ್ದವಾಗಿದ್ದು, ಹೆಡ್ ಬುಶ್',
ಮಾನ್ಸೂನ್ ರಾಗಾ’, ಭೈರಾಗಿ',
೨೧ ಅವರ್ಸ್’ ಡಾಲಿ ಅಭಿನಯದ ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. `ಪಾಯಮ್ ಓಲಿ ನೀ ಎನಕು’ ಎಂಬ ಒಂದು ತನಿಳು ಸಿನಿಮಾಕ್ಕು ಅವರು ಬಣ್ಣ ಹಚ್ಚಿದ್ದಾರೆ.
`ಒನ್ಸ್ ಅಪನ್ ಅ ಟೈಮ್ ಇನ್ ಜಮಾಲ್ ಗುಡ್ಡ’ ಸಿನಿಮಾದಲ್ಲಿ ಡಾಲಿ ಧನಂಜಯ್ !
- Advertisement -
- Advertisement -