Thursday, December 5, 2024

Latest Posts

ನಿಮ್ಮ ಮನಸ್ಸಿಗೆ ನೋವು ಮಾಡಿದವರಿಗೆ ಶಾಪ ನೀಡಬೇಡಿ.. ಬದಲಾಗಿ ಹೀಗೆ ಮಾಡಿ..

- Advertisement -

Spiritual: ಮನುಷ್ಯ ಎಂದ ಮೇಲೆ ಅವನಿಗೆ ಸಂಬಂಧಿಕರು, ಗೆಳೆಯರು, ಮನೆಮಂದಿ ಎಲ್ಲರೂ ಇರಲೇಬೇಕು. ಸುಖ ದುಃಖ, ಪ್ರೀತಿ- ಕಾಳಜಿ ಎಲ್ಲವೂ ಇರಬೇಕು. ಜೊತೆಗೆ ಮನಸ್ಸಿಗೆ ನೋವಾಗುವ ಕೆಲವು ವಿಷಯಗಳನ್ನು ಕೆಲವೊಮ್ಮೆ ಎದುರಿಸಲೇಬೇಕಾಗುತ್ತದೆ. ಆಗ ನಮ್ಮ ಮನಸ್ಸಿಗೆ ಬೇಸರವಾದವರಿಗೆ ಶಾಪ ನೀಡಬೇಕು ಎಂಬ ಮನಸ್ಸೂ ಬರುತ್ತದೆ. ಕೆಲವರು ಶಾಪ ನೀಡಿ, ಆ ಶಾಪ ನಿಜವಾಗಿ, ಅದು ಅವರಿಗೆ ತಾಕುವ ಸಾಧ್ಯತೆ ಇರುತ್ತದೆ. ಅದಕ್ಕೆ ಅನುಭವಸ್ಥರು ಹೇಳುವುದೇನೆಂದರೆ, ನಿಮ್ಮ ಮನಸ್ಸಿಗೆ ನೋವು ಮಾಡಿದವರಿಗೆ ನೀವು ಶಾಪ ನೀಡಬೇಕು, ಎದುರುತ್ತರ ನೀಡಬೇಕು, ಅವರೊಂದಿಗೆ ಜಗಳ ಮಾಡಬೇಕು, ಅವರಿಗೆ ಅವಮಾನ ಮಾಡಬೇಕು ಅಂತೇನಿಲ್ಲ. ಹಾಗಾದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಅನುಭವಸ್ತರು ಹೇಳುವ ಪ್ರಕಾರ, ನಿಮ್ಮ ಮನಸ್ಸಿಗೆ ಯಾರಾದರೂ ನೋವಾಗುವಂತೆ ನಡೆದುಕೊಂಡರೆ ಅವರಿಗೆ ಶಾಪ ನೀಡಬಾರದಂತೆ. ಏಕೆಂದರೆ ನೀವು ಶಾಪ ನೀಡಿದರೆ, ಅದರ ಶಕ್ತಿ ಕಡಿಮೆ ಇರುತ್ತದೆ. ಅದು ತಿರುಗಿ ನಿಮಗೇ ತಾಕಬಹುದು. ಹಾಗಾಗಿ ನಿಮ್ಮನ್ನು ಅವಮಾನ ಮಾಡಿದವರ ಮುಂದೆ, ನಿಮಗೆ ಕೊಂಕು ಮಾತನಾಡಿದವರ ಮುಂದೆ ನೀವು ಮೌನವಾಗಿರಬೇಕು.

ಹೊರಗಿನವರು, ಪರಿಚಯವೇ ಇಲ್ಲದಿದ್ದವರಾಗಿದ್ದರೆ, ನಾಲ್ಕು ಬೈದು ಬರಬಹುದು. ಆದರೆ ಅವನು ನಿಮ್ಮ ಮನೆಯವರೇ, ಅಥವಾ ನಿಮ್ಮ ಸಂಬಂಧಿಕರೇ, ಅಥವಾ ನಿಮಗಿಂತ ಹಿರಿಯರೇ ಆಗಿದ್ದರೂ, ನೀವು ಅವರಿಗೆ ಎದುರುತ್ತರ ನೀಡದೇ, ಅವಮಾನ ಮಾಡದೇ ಸುಮ್ಮನಿರಬೇಕು.

ಏಕೆಂದರೆ, ಸಂಬಂಧಿಕರು, ಮನೆಮಂದಿ, ಹಿರಿಯರು ನಿಮ್ಮನ್ನು ತಿದ್ದಿ ಬುದ್ಧಿ ಹೇಳಲು ನಿಮ್ಮನ್ನು ಬೈದಿರಬಹುದು. ಅದನ್ನು ತಿಳಿದು ನಾವು ಸರಿಪಡಿಸಿಕೊಳ್ಳಬೇಕು. ಆದರೆ ಹಿರಿಯರಾಗಿದ್ದರೂ, ನಿಮ್ಮ ತಪ್ಪಿಲ್ಲದೇ, ನಿಮ್ಮನ್ನು ಅವಮಾನಿಸಲು ಬಂದರೆ, ಮನಸ್ಸಿನಲ್ಲಿಯೇ ದೇವರೇ ನೀನೇ ಇವರನ್ನು ನೋಡಿಕೋ ಎಂದು ಪ್ರಾರ್ಥಿಸಿ. ಏಕೆಂದರೆ, ಸ್ವಾರ್ಥಿಗಳಿಗೆ ನೀವು ಕೊಡುವ ಶಿಕ್ಷೆಗಿಂತ ದೇವರು ಕೊಡುವ ಶಿಕ್ಷೆ ಘೋರವಾಗಿರುತ್ತದೆ.

- Advertisement -

Latest Posts

Don't Miss