ಸ್ಲಿಮ್ ಆಗಿ ಫಿಟ್ ಆಗಿ ಇರಬೇಕು ಅಂತಾ ಯಾರಿಗೆ ತಾನೇ ಆಸೆ ಇರೋದಿಲ್ಲಾ ಹೇಳಿ. ನೋಡಲು ಚಂದವಾಗಿ, ಉತ್ತಮ ಮೈಕಟ್ಟು ಹೊಂದಿದವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರ್ತಾರೆ. ಹಾಗಂತ ಡಯಟ್ ಕೂಡ ಮಾಡ್ತಾರೆ. ಆದ್ರೆ ಡಯಟ್ ಮಾಡುವವರು ಕೆಲ ತಪ್ಪುಗಳನ್ನು ಮಾಡಬಾರದು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಮೊದಲನೇಯದಾಗಿ ಡಯಟ್ ಮಾಡುವವರು ಎಂದಿಗೂ ಖಾಲಿ ಹೊಟ್ಟೆಯಲ್ಲಿರಬಾರದು. ಕೆಲವರು ತೂಕ ಕಳೆದುಕೊಳ್ಳಬೇಕು ಅಂತಾ ಉಪವಾಸ ಮಾಡುತ್ತಾರೆ. ಏನೂ ತಿನ್ನದೇ, ಬರೀ ನೀರು ಕುಡಿದು ಇರುತ್ತಾರೆ. ಹಾಗೆ ಮಾಡುವುದು ಉತ್ತಮವಲ್ಲ. ಡಯಟ್ ಮಾಡುವವರು ಹಸಿವಾದಾಗಲೆಲ್ಲ ಹಸಿ ತರಕಾರಿ, ಫ್ರೆಶ್ ಹಣ್ಣುಗಳ ತುಂಡು, ಜ್ಯೂಸ್, ನಿಂಬೆ ಪಾನಕ, ಡ್ರೈಫ್ರೂಟ್ಸ್, ಓಟ್ಸ್ ಇವುಗಳಲ್ಲಿ ಏನಾದ್ರೂ ತಿನ್ನಬಹುದು ಅಥವಾ ಕುಡಿಯಬಹುದು.
ಎರಡನೇಯದಾಗಿ ಊಟ ತಿಂಡಿಯ ಸಮಯದಲ್ಲಿ ಹೆಚ್ಚು ತಿಂದು ಬಿಟ್ಟರೆ ದಪ್ಪ ಆಗಿ ಬಿಡುತ್ತೇನೆ ಅಂತಾ ಕೊಂಚ ಕೊಂಚ ತಿಂದು ಹಸಿದುಕೊಂಡಿರುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಊಟ ತಿಂಡಿ ಮಾಡುವಾಗ ಬೇಕಾದಷ್ಟು ತಿನ್ನಬೇಕು. ಹಾಗಾಗಿ ಊಟ ತಿಂಡಿಯಲ್ಲಿ ಕ್ಯಾಲೋರಿ ಇಲ್ಲದ, ಎಣ್ಣೆ, ತುಪ್ಪ ಹೆಚ್ಚು ಬಳಸದ ಆಹಾರವನ್ನೇ ಬಳಸಿ.
ಮೂರನೇಯದಾಗಿ ಹಸಿವಾದಾಗ ಕೈಗೆ ಸಿಕ್ಕ ಆಹಾರವನ್ನು ಸೇವಿಸಬಾರದು. ಹಸಿವಾಯಿತೆಂದು ಬ್ರೆಡ್, ಕೇಕ್, ಚಿಪ್ಸ್‌ನಂಥ ಜಂಕ್ ಫುಡ್ ತಿನ್ನುವುದರಿಂದ ಬೊಚ್ಚು ಬೆಳೆಯುತ್ತದೆ. ಹಾಗಂತ ಈ ತಿಂಡಿಗಳನ್ನು ತಿನ್ನಲೇಬೇಡಿ ಅಂತಾ ಹೇಳುವುದಿಲ್ಲ. ಲಿಮಿಟ್‌ನಲ್ಲಿ ತಿನ್ನಬೇಕು. ಡಯಟ್ ಮಾಡುವವರು ಇಂಥ ತಿಂಡಿಯನ್ನು ತ್ಯಜಿಸಿದರೂ ತಪ್ಪಿಲ್ಲ.
ಇನ್ನು ನಾಲ್ಕನೇಯದಾಗಿ ಅಂಗಡಿಗಳಲ್ಲಿ ಸಿಗುವ ಯೋಗರ್ಟ್ ಪ್ಯಾಕ್, ಜ್ಯೂಸ್‌ಗಳನ್ನ ಬಳಸಬೇಡಿ. ಇದರಲ್ಲಿ ಪ್ರಿಸರ್ವೇಟಿವ್ಸ್ ಹಾಕುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲೇ ಮೊಸರು ತಯಾರಿಸಿ, ಫ್ರೆಶ್ ಜ್ಯೂಸ್ ತಯಾರಿಸಿ ಬಳಸುವುದು ಉತ್ತಮ.
ಐದನೇಯದಾಗಿ ಅತೀಯಾದ ವ್ಯಾಯಾಮ ಮಾಡುವುದು, ಅತೀಯಾಗಿ ತರಕಾರಿ, ಹಣ್ಣು ಸೇವಿಸುವುದು ಕೂಡ ಉತ್ತಮವಲ್ಲ. ವ್ಯಾಯಾಮವನ್ನು ಮಿತಿಯಾಗಿ ಮಾಡಿ, ತರಕಾರಿ ಹಣ್ಣಿನ ಸೇವನೆ ಅಗತ್ಯವಿದ್ದಷ್ಟು ಮಾಡಿ, ಜೊತೆಗೆ ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಅವಲಕ್ಕಿ, ಉಪ್ಪಿಟ್ಟು ಸೇರಿ ಹೆಚ್ಚು ಎಣ್ಣೆ ಬಳಸದೇ ಮಾಡಿದ ತಿಂಡಿಯನ್ನ ತಿನ್ನಿ. ಕಾಫಿ ಟೀ ಸೇವನೆ ಕಡಿಮೆ ಮಾಡಿ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507