Political News: ಪ್ರತೀ ಸಲ ಚುನಾವಣೆ ಸಮಯದಲ್ಲಿ ಮಂಡ್ಯದ ಚುನಾವಣ ಕಣ ಇಂಡಿಯಾದಲ್ಲೇ ಚರ್ಚೆಯಾಗುವ ರೀತಿ ರಂಗೇರುತ್ತದೆ.
ಈ ಬಾರಿಯೂ ಎಲ್ಲೆಡೆ ಬಿಜೆಪಿ ಟಿಕೇಟ್ ಯಾರಿಗೆ ಸಿಗಲಿದೆ ಎಂಬ ಚರ್ಚೆಯಾಗುತ್ತಿದೆ. ಏಕೆಂದರೆ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಇತ್ತ ಜೆಡಿಎಸ್ ಕೂಡ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಮಂಡ್ಯ ಕ್ಷೇತ್ರವನ್ನು ತಮಗೇ ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ. ಹಾಗಾಗಿ ಟಿಕೇಟ ಯಾರಿಗೆ ಕೊಡಬೇಕು ಅನ್ನೋ ಗೊಂದಲದಲ್ಲಿ ಬಿಜೆಪಿ ಇದೆ.
ಆದರೆ ಸುಮಲತಾ ಈ ಹಿಂದೆ ಚುನಾವಣೆಗೆ ನಿಲ್ಲೋ ಬಗ್ಗೆ ಮಾತನಾಡಿದ್ದು, ಟಿಕೇಟ್ ನೀಡಲಿ ಬಿಡಲಿ ಚುನಾವಣೆಗೆ ಸ್ಪರ್ಧಿಸೋದೇ ಎಂದಿದ್ದರು. ಹಾಗಾಗಿ ಸುಮಲತಾ ಅಂಬರೀಷ್ ಚುನಾವಣೆಗೆ ನಿಲ್ಲೋದು ಪಕ್ಕಾ ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ.
ಇನ್ನು ಸುಮಲತಾ ಬೆಂಬಲಿಗನೊಬ್ಬ, ಸುಮಲತಾ ಅವರಿಗೆ ಮನವಿ ಮಾಡಿದ್ದು, ಆಡಿಯೋ ಎಲ್ಲೆಡೆ ವೈರಲ್ ಆಗಿದೆ. ನಾವು ಅಂಬರೀಷಣ್ಣನ ಫ್ಯಾನ್ಸ್. ಅವರಿಗೋಸ್ಕರ ಏನು ಮಾಡೋಕ್ಕೂ ತಯಾರಾಗಿದ್ದೇವೆ. ನೀವು ಮಂಡ್ಯಕ್ಕಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀರಿ. ನೀವು ಈ ಬಾರಿ ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ಬಿಟ್ಟು ಕೊಡದೇ, ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ಹೇಳಿದ್ದಾರೆ.
ಅಲ್ಲದೇ, ಸೋಲಾಗಲಿ ಗೆಲುವಾಗಲಿ, ಎಂಥ ಕೋಟ್ಯಧಿಪತಿಗಳು ನಿಮ್ಮೆದುರು ನಿಲ್ಲಲಿ, ಮಂಡ್ಯ ಸ್ವಾಭಿಮಾನಿ ಬಿಡಬೇಡಿ ಅಕ್ಕ, ನಿಮ್ಮ ಬಗ್ಗೆ ತುಂಬಾ ಗೌರವವಿದೆ. ಸತ್ಯಾಸತ್ಯತೆಗಳು ಗೊತ್ತಾಗಲಿ, ನ್ಯಾಯ ನೀತಿ ಧರ್ಮದ ಬಗ್ಗೆ ವಿಚಾರಗಳು ಗೊತ್ತಾಗಲಿ. ಸೋಲಾಗಲಿ, ಗೆಲುವಾಗಲಿ, ಅಂಬರೀಷ್ ಅಣ್ಣ ಕೂಡ ಸೋತಿದ್ದಾರೆ, ಗೆದ್ದಿದ್ದಾರೆ. ಆದರೆ ನಿಮ್ಮ ಕುಟುಂಬಕ್ಕೆ ಪ್ರಾಣ ಕೊಡಲು ಕೂಡ ನಾನು ಸಿದ್ಧನಿದ್ದೇನೆ. ನಾನು ನಿಮ್ಮ ಕಣ್ಣ ಮುಂದೆ ಬಂದಿಲ್ಲ. ಬರೀ ವಾಟ್ಸಾಪ್‌ನಲ್ಲಿ ಆಡಿಯೋ ಕಳಿಸಿದ್ದೇನೆ. ಆದರೆ ನಾನು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಬೆಂಬಲಿಗ ಹೇಳಿದ್ದಾನೆ.
ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್