ಮೊದಲೆಲ್ಲ ಮಕ್ಕಳು ಅಪ್ಪ ಅಮ್ಮನ ಜೊತೆಗೇ, ಅಥವಾ ಅಜ್ಜ ಅಜ್ಜಿಯ ಜೊತೆ ಮಮಲಗುತ್ತಿದ್ದರು. ಇದೀಗ ಕೆಲವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಮಕ್ಕಳಿಗಾಗಿಯೇ ಸಪರೇಟ್ ರೂಮ್ ಮಾಡಿರುತ್ತಾರೆ. ಆದ್ರೆ ಹಾಗೆ ಮಕ್ಕಳಿಗಾಗಿ ಮೀಸಲಿರುವ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇರಿಸಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅಂತಾ ನೋಡೋಣ ಬನ್ನಿ..

ಮೊದಲನೇಯದಾಗಿ ಮಗುವಿಗೆ ಗಾಯ ಮಾಡಬಹುದಾದ ಚೂಪಾದ ವಸ್ತುಗಳು, ಮುರಿದ ವಸ್ತುಗಳನ್ನ ಮಕ್ಕಳ ಕೋಣೆಯಲ್ಲಿರಿಸಬಾರದು. ಇಷ್ಟೇ ಅಲ್ಲದೇ ಭಾರವಾದ ವಸ್ತುಗಳು, ಕತ್ತರಿ, ಸೂಜಿ, ಹಗ್ಗ ಇತ್ಯಾದಿ ವಸ್ತುಗಳು ಮಕ್ಕಳ ಕೈಗೆ ಸಿಗದಿರುವ ಥರ ಇಡಿ. ಇಲ್ಲವಾದಲ್ಲಿ ಅಂಥ ವಸ್ತುಗಳನ್ನು ಮಕ್ಕಳ ರೂಮ್‌ನಲ್ಲಿ ಇರಿಸಬೇಡಿ.

ಇನ್ನೊಂದು ಮುಖ್ಯವಾದ ವಿಷಯವೆಂದರೆ, ಮಕ್ಕಳ ರೂಮಿನಲ್ಲಿ ಮೊಬೈಲ್ ಅಥವಾ ಮೊಬೈಲ್ ಚಾರ್ಜರ್, ಇಸ್ತ್ರೀ ಪೆಟ್ಟಿಗೆ ಟೇಬಲ್ ಫ್ಯಾನ್, ಇವೆಲ್ಲವನ್ನೂ ಇರಿಸಬೇಡಿ. ಯಾಕಂದ್ರೆ ಇಲೆಕ್ಟ್ರಾನಿಕ್ ವಸ್ತುಗಳು ಮಕ್ಕಳಿಗೆ ಹಾನಿ ಮಾಡಬಹುದು. ಅದರಲ್ಲೂ ಮೊಬೈಲ್ ಚಾರ್ಜ್ ಹಾಕಿ, ಆ ಚಾರ್ಜರ್ ಮಕ್ಕಳ ಕೈಗೆ ಸಿಕ್ಕರೆ ಜೀವಕ್ಕೆ ಅಪಾಯವಾಗುತ್ತದೆ. ಆದ್ದರಿಂದ ಮಕ್ಕಳ ರೂಮಿನಲ್ಲಿ ಈ ಎಲ್ಲ ವಸ್ತುಗಳನ್ನು ಇಡಬೇಡಿ.

ಇನ್ನು ಮಕ್ಕಳಿಗೆ ಅಪಾಯವಾಗಬಹುದಾದ ಕೆಲ ಗಿಡಗಳನ್ನು ಮಕ್ಕಳ ಕೋಣೆಯಲ್ಲಿ ಇರಿಸಬಾರದು. ಯಾವುದೇ ಕಾರಣಕ್ಕೂ ಟಿವಿಯನ್ನ ನಿಮ್ಮ ಮಕ್ಕಳ ರೂಮಿನಲ್ಲಿ ಇರಿಸಬಾರದು. ಮತ್ತು ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ. ಒಮ್ಮೆ ಮಗುವಿಗೆ ಟಿವಿ, ಮೊಬೈಲ್ ಹುಚ್ಚು ಹಿಡಿದರೆ ಮತ್ತೆ ಅದನ್ನು ಬಿಡಿಸಲು ಕಷ್ಟ ಪಡಬೇಕಾಗುತ್ತದೆ. ಇದು ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಬಹುದು.

