Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಮತ್ತೆ ಕೆಲವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಹಾಗಾದರೆ ವ್ಯಾಪಾರ ಉತ್ತಮವಾಗಿರಬೇಕು ಅಂದ್ರೆ ಎಂಥ ಮಾತುಗಳನ್ನು ಆಡಬಾರದು ಅಂತಾ ತಿಳಿಯೋಣ ಬನ್ನಿ..
ಓರ್ವ ವ್ಯಾಪಾರಿಗೆ ತಮ್ಮ ವಸ್ತು ಬೀಕರಿಯಾಗಬೇಕು ಅಂದರೆ ಸೇಲ್ ಆಗಬೇಕು ಅಂದ್ರೆ, ಗ್ರಾಹಕರೊಂದಿಗೆ ಮಾತನಾಡಲೇಬೇಕಾಗುತ್ತದೆ. ಯಾಕಂದ್ರೆ ವ್ಯಾಪಾರಸ್ಥನಿಗೆ ಮಾತೇ ಬಂಡವಾಳ. ಹಾಗೆ ಮಾತನಾಡುವಾಗ, ನಿಮ್ಮ ಮಾತಿನ ಮೇಲೆ ನೀವು ನಿಗಾ ವಹಿಸಬೇಕು. ಏಕೆಂದರೆ, ಮಾತಿನಿಂದ ಏನು ಬೇಕಾದರೂ ಆಗಬಹುದು. ಅದಕ್ಕೆ ಹಿರಿಯರು ಮಾತು ಮನೆ ಕೆಡಿಸಬಹುದು, ತೂತು ಒಲೆ ಕೆಡಿಸಬಹುದು ಅಂತಾ ಹೇಳಿರೋದು.
ಇಲ್ಲಿ ಮಾತು ವ್ಯಾಪಾರವನ್ನೂ ಕೆಡಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾತಿನ ಮೇಲೆ ಗಮನವಿಟ್ಟು ವ್ಯಾಪಾರ ಮಾಡಬೇಕು. ಹೀಗೆ ಮಾತನಾಡುವಾಗ ಟೂ ಬಿ ಆನೆಸ್ಟ್, ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ಅನ್ನುವ ಪದವನ್ನು ನೀವು ಬಳಸಬಾರದು. ಸಾಮಾನ್ಯ ಜನರ ಮಾತಿನಲ್ಲಿ ಹೇಳಬೇಕು ಅಂದ್ರೆ, ಈ ರೀತಿಯಾಗಿ ಉದಾಹರಣೆ ಕೊಡಬಹುದು. ನಿಜ ಹೇಳಬೇಕು ಅಂದ್ರೆ, ಇದು ಎಲ್ಲಕ್ಕಿಂತ ಒಳ್ಳೆ ಕ್ವಾಲಿಟಿ ಬಟ್ಟೆ. ಹೀಗೆ ಹೇಳಬಾರದು. ಏಕೆಂದರೆ, ನೀವು ಇಲ್ಲಿಯವರೆಗೆ ತೋರಿಸಿದ ಬಟ್ಟೆಗಳ ಕ್ವಾಲಿಟಿ ಸರಿ ಇಲ್ಲ ಎಂದು ಗ್ರಾಹಕರು ತಿಳಿದುಕೊಳ್ಳಬಹುದು. ಅವರಿಗೆ ನಿಮ್ಮ ಮಾತಿನಿಂದ ಕನ್‌ಫ್ಯೂಸ್ ಆಗಬಹುದು. ಹಾಗಾಗಿ ಇಂಥ ಮಾತನ್ನಾಡಬೇಡಿ.
ವ್ಯಾಪಾರಿಗಳು ತಮ್ಮ ಬಳಿ ಇರುವ ವಸ್ತುಗಳನ್ನು ಗ್ರಾಹಕರಿಗೆ ತೋರಿಸಬೇಕು. ಅದರ ಬಗ್ಗೆ ವಿವರಿಸಬೇಕು. ಅದನ್ನು ಬಿಟ್ಟು ಈ ವಸ್ತುವನ್ನು ಖರೀದಿಸಿ ಎಂದು ಹೇಳಬಾರದು. ಏಕೆಂದರೆ, ತಮಗೆ ಬೇಕಾದ ವಸ್ತು ನಿಮ್ಮ ಬಳಿ ಇದೆ ಎಂದು ಗೊತ್ತಿದ್ದೇ, ಗ್ರಾಹಕರು ಅದನ್ನು ಕೊಂಡುಕೊಳ್ಳಲು ನಿಮ್ಮ ಬಳಿ ಬಂದಿರುತ್ತಾರೆ. ಆಗ ನೀವು ಬಾಯಿ ಬಿಟ್ಟು, ಇದನ್ನು ಖರೀದಿಸಿ ಎಂದರೆ, ನಿಮ್ಮ ಬಗ್ಗೆ ಅವರಿಗೆ ಅಭಿಪ್ರಾಯ ಬದಲಾಗಿ, ಅವರು ಬೇರೆ ಅಂಗಡಿಗೆ ಹೋಗಬಹುದು.
ಇನ್ನು ವ್ಯಾಪಾರ ಮಾಡುವಾಗ, ಗ್ರಾಹಕರು ತಾವು ಇಷ್ಟಪಟ್ಟು ವಸ್ತುವನ್ನು ನಿಮ್ಮ ಬಳಿ ಖರೀದಿಸಬೇಕೇ ಹೊರತು, ನೀವು ಫೋರ್ಸ್ ಮಾಡಿ, ನೀವು ಈ ವಸ್ತುವನ್ನು ಖರೀದಿಸಿ, ಇದು ತುಂಬಾ ಒಳ್ಳೆ ಪ್ರಾಡಕ್ಟ್, ನಮ್ಮಲ್ಲಿ ಬಂದಿರುವ ಹೊಚ್ಚ ಹೊಸ ಪ್ರಾಡಕ್‌ಟ್ ಎಂದು ನಿಮ್ಮ ವಸ್ತುವನ್ನು ಹೊಗಳಿ, ಫೋರ್ಸ್ ಮಾಡಿದ್ದಲ್ಲಿ, ಆ ವಸ್ತುವನ್ನು ಅವರು ಖರೀದಿಸಬಹುದು. ಆದರೆ ಮುಂದೆಂದೂ ನಿಮ್ಮ ಅಂಗಡಿಗೆ ಅವರು ಬರುವುದಿಲ್ಲ. ಮತ್ತು ನೀವು ವ್ಯಾಪಾರ ಮಾಡುವ ರೀತಿಯ ಬಗ್ಗೆ ಅವರು ಬೇರೆಯವರಲ್ಲಿಯೂ ಹೇಳುತ್ತಾರೆ.
ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?
ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..