News: ಡಾ.ಬ್ರೋ ಅಂದ್ರೆ ಯಾವ ಕನ್ನಡಿಗನಿಗೆ ಗೊತ್ತಿಲ್ಲ ಹೇಳಿ..? ರಿಯಾಲಿಟಿ ಶೋನಲ್ಲಿ ನಿಮ್ಮಜ್ಜಿಗೆ ಡಾ. ಬ್ರೋ ಗೊತ್ತಾ ಅಂತಾ ಆ ಚಾನೆಲ್‌ನ ಮುಖ್ಯಸ್ಥ ಪ್ರಶ್ನೆ ಕೇಳಿದ್ದೇ ತಡ, ಜನ ನಮ್ಮಜಿಗೂ ಡಾ.ಬ್ರೋ ಪರಿಚಯ ಮಾಡಿಸ್ತೀವಿ ಅನ್ನೋ ರೇಂಜ್‌ಗೆ, ಡಾ.ಬ್ರೋಗೆ ಸಪೋರ್ಟ್ ಮಾಡಿದ್ರು. ಯಶ್, ದರ್ಶನ್‌ಗೂ ಇಲ್ಲ ಇನ್‌ಸ್ಟಾ ಫಾಲೋವರ್ಸ್ ಡಾ.ಬ್ರೋಗೆ ಇದ್ದಾರೆ.
ಇದಕ್ಕೆಲ್ಲ ಕಾರಣ, ಈ ಹುಡುಗನಿಗೆ ಇರುವ ಮುಗ್ಧತನ. ಪರ್ಫೆಕ್ಟ್ ಆಗಿ ಇಂಗ್ಲೀಷ್ ಮಾತನಾಡೋಕ್ಕೆ ಬರದಿದ್ದರೂ, ತನ್ನ ಮುಗ್ಧ ಮಾತಿನಿಂದ ಜನರ ಮನಸ್ಸನ್ನು ಗೆದ್ದವರು ಡಾ.ಬ್ರೋ. ಆದರೆ ಚೀನಾದಲ್ಲಿ ವ್ಲಾಗ್ ಮಾಡೋಕ್ಕೆ ಹೋಗಿ, ಅಲ್ಲಿ ಜೈಲುವಾಸ ಅನುಭವಿಸಿ, ಬಳಿಕ ಹೇಗೋ, ಬಿಡುಗಡೆಯಾಗಿ ಬಂದು, ಅಯೋಧ್ಯೆ ರಾಮಮಂದಿರದ ಬಗ್ಗೆ ಡಾ.ಬ್ರೋ ವೀಡಿಯೋ ಮಾಡಿದ್ದರು. ಈ ವೇಳೆ ಡಾ.ಬ್ರೋ, ಪ್ರಧಾನಿಯ ಚೇಲಾ ಅಂತಾ ಕೆಲವರು ಟ್ರೋಲ್ ಮಾಡಿದ್ರು.
ಆದರೂ ಕೂಡ ಡಾ.ಬ್ರೋ ತನ್ನ ಕೆಲಸವನ್ನು ತಾನು ಮುಂದುವರಿಸಿಕೊಂಡು ಹೋಗಿ, ಹಲವು ದೇಶಗಳನ್ನು ಸುತ್ತಿ ವ್ಲಾಗ್ ಮಾಡಿದ್ದರು. ಇದೀಗ ಡಾ.ಬ್ರೋ ಹೊಸ ಉದ್ಯಮ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಆಫೀಸು ಓಪನ್ ಮಾಡಿರುವ ಬ್ರೋ, ಗೋ ಪ್ರವಾಸವೆಂಬ ಟ್ರಾವೆಲಿಂಗ್ ಉದ್ಯಮ ಶುರು ಮಾಡಿದ್ದಾರೆ.
ಈ ಕೆಲಸಕ್ಕೆ ಡಾ.ಬ್ರೋಗೆ ಅವರ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದಾರೆ. ಇವರೆಲ್ಲ ಸೇರಿ, ನಿಮ್ಮನ್ನು ಭಾರತ ಸೇರಿ, ಬೇರೆ ಬೇೆರೆ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಇನ್ನು ಗೋ ಪ್ರವಾಸಕ್ಕೆ ಎಷ್ಟರ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿದೆ ಅಂದ್ರೆ, ಫಟಾಪಟ್ ಎಂದು ಟಿಕೇಟ್ ಸೇಲ್ ಆಗಿದೆ. ಡಾ.ಬ್ರೋ ಈ ಪ್ರವಾಸಿಗರ ಜೊತೆಗೆ ಹೋಗಿ, ಅಲ್ಲಿನ ವಿಶೇಷತೆಯನ್ನು ಪ್ರವಾಸಿಗರಿಗೆ ತೋರಿಸುತ್ತಾರೆ.
ಇನ್ನು ಡಾ.ಬ್ರೋ ಈ ಕೆಲಸದಲ್ಲಿ ಬ್ಯುಸಿ ಇದ್ದು, ಯೂಟ್ಯೂಬ್‌ನಲ್ಲಿ ವೀಡಿಯೋ ಅಪ್ಲೋಡ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಹಾಗಾಗಿ ಯೂಟ್ಯೂಬ್ ಮಾತ್ರ ಸ್ಟಾಪ್ ಮಾಡಬೇಡಿ ಎಂದು ಡಾ.ಬ್ರೋ ಫ್ಯಾನ್ಸ್ ರಿಕ್ವೆಸ್ಟ್ ಮಾಡಿದ್ದಾರೆ.