ಕೊರೋನಾ ಮೂರನೇ ಅಲೆಯ(Corona Third wave)ಬಗ್ಗೆ ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚುತ್ತಿದೆ. ಆದರೆ ಇವತ್ತು ಆರೋಗ್ಯ ಸಚಿವರು ಕೊಟ್ಟ ಮಾಹಿತಿ ರಾಜ್ಯದ ಜನತೆಗೆ ನಿರಾಳವಾಗುವ ಭರವಸೆಯನ್ನಂತೂ ನೀಡುತ್ತಿದೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Health Minister K.Sudhakar) ಪತ್ರಿಕಾಗೋಷ್ಟಿಯಲ್ಲಿ ನೀಡಿದ ಸರ್ಕಾರದ ಸಿದ್ಧತೆ ಕೊರೋನಾ ಎದುರಿಸೋಕೆ ಹೇಗೆ ಸರ್ಕಾರ(Government) ಸಿದ್ಧವಾಗಿದೆ ಎನ್ನುವ ಸ್ಪಷ್ಟ ಚಿತ್ರಣ ಕೊಡ್ತಿದೆ.
ಕೊರೋನಾ ಮೂರನೇ ಅಲೆ ಎದುರಿಸೋಕೆ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಜನರು ಆತಂಕ ಪಡುವ ಅಗತ್ಯವಿಲ್ಲ ಎನ್ನುವ ಭರವಸೆಯನ್ನು ರಾಜ್ಯದ ಜನತೆಗೆ ನೀಡಿದ್ದಾರೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್. ಇಂದು ವಿಕಾಸಸೌದದಲ್ಲಿ ಅಧಿಕಾರಿಗಳ ಜೊತೆ ಆಗಮಿಸಿದ ಆರೋಗ್ಯ ಸಚಿವರು ಸರ್ಕಾರದ ಬಳಿ 65 ಲಕ್ಷ ಡೋಸ್ ವ್ಯಾಕ್ಸಿನ್ ಸ್ಟಾಕ್ ಇದೆ. ವ್ಯಾಕ್ಸಿನ್ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾದರೆ ಅದನ್ನೂ ಕೊಡೋಕೆ ಕೇಂದ್ರ ರೆಡಿ ಇದೆ ಅಂದ್ರು.
ಸದ್ಯ ಕೊರೋನಾ 61000 ಕೇಸ್‌ಗಳಲ್ಲಿ 6% ದಷ್ಟು ಮಾತ್ರ ಆಸ್ಪತ್ರೆ ಸೇರಿದ್ದಾರೆ. ಪ್ರತಿದಿನ 2 ಲಕ್ಷ ಟೆಸ್ಟ್(Test)ನಡೀತಿದೆ ಇದರ ಜೊತೆಗೆ ಇನ್ನೂ 30 ಸಾವಿರದಿಂದ 50 ಸಾವಿರದಷ್ಟು ಟೆಸ್ಟ್ ಹೆಚ್ಚಿಸೋಕೆ ಈಗಾಗಲೇ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ರಾಜ್ಯಾದ್ಯಂತ 265 ಟೆಸ್ಟಿಂಗ್ ಲ್ಯಾಬ್‌ಗಳಿವೆ(testing labs)ಇನ್ನು ಅಕ್ಕಪಕ್ಕದ ರಾಜ್ಯಗಳಿಂದ ಬರುವವರು 72 ಗಂಟೆಯೊಳಗಿನ ಆರ್‌ಟಿಪಿಸಿಆರ್ ರಿಪೋರ್ಟ್(RTPCR Report)ತಂದರೆ ಮಾತ್ರ ರಾಜ್ಯದೊಳಗೆ ಪ್ರವೇಶ ಎನ್ನುವ ಕಠಿಣ ನಿಯಮ ಮಾಡಿದ್ದೇವೆ ಎಂದರು.
ಕೊರೋನಾ ಹೆಚ್ಚಿರುವ ಬೆಂಗಳೂರಲ್ಲಿ 8 ಜೋನಲ್ ವಾರ್ ರೂಂಗಳಿದ್ದು, ಸೆಂಟ್ರಲ್‌ವಾರ್ ರೂಂ ಬಿಬಿಎಂಪಿ ಕಛೇರಿಯ ಆವರಣದಲ್ಲೇ ಇದೆ. ಈ ಜೋನ್‌ಗಳ ಸಂಪರ್ಕಕ್ಕೆ ಎರಡು ಹೆಲ್ಪ್ಲೈನ್‌ಗಳು(Helplines)ಕೂಡ ಇವೆ. 14410 ರಾಜ್ಯಾದ್ಯಂತ ಇರುವ ಹೆಲ್ಪ್ಲೈನ್ ಸಂಖ್ಯೆಯಾದರೆ ಬೆಂಗಳೂರಿಗೆ 1533 ಹೆಲ್ಪ್ಲೈನ್ ಸಂಖ್ಯೆ. ಇನ್ನು ಆಸ್ಪತ್ರೆ ಮತ್ತು ಸಿಬ್ಬಂದಿಯ ಲಭ್ಯತೆ ಕೂಡ ಹೆಚ್ಚಿದ್ದು, ರಾಜ್ಯಾದ್ಯಂತ 6000 ಆಕ್ಸೀಜನ್ ಬೆಡ್‌ಗಳು 2928 ಆಕ್ಸೀಜನ್ ಬೆಡ್‌ಗಳಿವೆ. ಸದ್ಯ ಆಕ್ಸೀಜನ್ ಡಿಮಾಂಡ್ ಕಡಿಮೆ ಇದ್ದರೂ ಸೆಫ್ಟಿಗಾಗಿ 250ಕ್ಕೂ ಹೆಚ್ಚು ಆಕ್ಸೀಜನ್ ಪ್ಲ್ಯಾಂಟ್ ರಾಜ್ಯಾದ್ಯಂತ ಇವೆ.
ಇನ್ನು ಈಗಾಗಲೇ ಮಕ್ಕಳಿಗೆ ಡೋಸ್ ಕೊಡೋಕೆ ಸರ್ಕಾರ ಸಂಪೂರ್ಣ ತಯಾರಿ ಮಾಡಿಕೊಳ್ಳುತ್ತಿದ್ದು, 15-18 ವರ್ಷದೊಳಗಿನ 50% ಮಕ್ಕಳಿಗೆ ಈಗಾಗಲೇ ವ್ಯಾಕ್ಸಿನ್ ಕೊಡಲಾಗಿದ್ದು, ಬಹಳ ಮುಖ್ಯವಾಗಿ ರಾಜ್ಯದ ಎಲ್ಲ ಶಾಲೆಗಳಲ್ಲೂ 15 ದಿನಕ್ಕೊಮ್ಮೆ ವೈದ್ಯರು ಮಕ್ಕಳ ಪರೀಕ್ಷೆ ಮಾಡಲಿದ್ದು, ಅನಾರೋಗ್ಯ ಪೀಡಿತ ಮಕ್ಕಳಿಗೆ ಆರೈಕೆ ಮಾಡಲಿದ್ದಾರೆ ಎನ್ನುವ ಮಹತ್ವದ ಮಾಹಿತಿ ನೀಡಿದ್ರು ಆರೋಗ್ಯ ಸಚಿವರು.
ಇನ್ನು ಪಾದಯಾತ್ರೆಗೆ ಕಾಂಗ್ರೆಸ್ ಇವತ್ತು ಬ್ರೇಕ್ ಹಾಕಿರೋದನ್ನು ಮೆಚ್ಚಿಕೊಂಡ ಡಾ. ಕೆ. ಸುಧಾಕರ್ ಇದು ಒಳ್ಳೆಯ ನಿರ್ಧಾರ ಈಗಲಾದರೆ ಕಾಂಗ್ರೆಸ್ ಪಾದಯಾತ್ರೆ ಹಿಂದೆ ಪಡೆದಿದ್ದು ಇದು ಕರ್ನಾಟಕದ ಜನರ ಗೆಲುವು ಅಂತ ಹೇಳಿದ್ರು. ಒಟ್ಟಾರೆ ರಾಜ್ಯ ಸರ್ಕಾರ ಸರ್ವ ರೀತಿಯಲ್ಲೂ ಕೊರೋನಾ ಎದುರಿಸಲು ಸನ್ನದ್ಧವಾಗಿದೆ ಆದರೆ ಜನರು ಸಹಕರಿಸಬೇಕು ಎನ್ನುವ ಮಾತಿನ ಮೂಲಕ ಆರೋಗ್ಯ ಸಚಿವರು ಕೊರೋನಾ ಅತಂಕದಲ್ಲಿರುವ ಜನರಿಗೆ ಧೈರ್ಯ ತುಂಬುವ ಜೊತೆಗೆ ಜನರ ಸಹಕಾರವನ್ನೂ ಕೇಳಿಕೊಂಡ್ರು…