Political News: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಡಾ. ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಮತಎಣಿಕೆ ಶುರುವಾದಾಗಿನಿಂದ ಮಂಜುನಾಥ್ ಮುನ್ನಡೆ ಕಾಯ್ದುಕೊಂಡಿದ್ದು, 2 ಲಕ್ಷ ಮತಗಳ ಅಂತರದಿಂದ ಮಂಜುನಾಥ್ ಗೆಲ್ಲಲಿದ್ದಾರೆಂದು ಅಂದಾಜಿಸಲಾಗುತ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕರ್ನಾಟಕದಲ್ಲಿ ಗೆಲುವು ಸಾಧಿಸಿದ್ದ ಒಬ್ಬೇ ಒಬ್ಬ ಅಭ್ಯರ್ಥಿ ಅಂದ್ರೆ, ಅವರು ಡಿ.ಕೆ.ಸುರೇಶ್ ಆಗಿದ್ದರು. ಆದರೆ ಈ ಬಾರಿ ಅವರು ಸೋಲು ಕಾಣುವ ಸಾಧ್ಯತೆ ಹೆಚ್ಚಿದೆ.
ಒಕ್ಕಲಿಗರ ಮತ ಸೆಳೆಯುವಲ್ಲಿ ಡಿ.ಕೆ.ಸುರೇಶ್ ವಿಫಲರಾಗಿದ್ದು, ಹಲವರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಮನಗೆದ್ದಿದ್ದ ಮಂಜುನಾಥ್, ಚುನಾವಣೆಯಲ್ಲೂ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳು ಇದೆ. ಹೀಗಾಗಿ ಈಗಾಗಲೇ ಮಂಜುನಾಥ್ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಆಗಮಿಸಿ, ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ. ಬಿಜೆಪಿ ಕಚೇರಿಯಲ್ಲಿಯೂ ವಿಜಯೋತ್ಸವ ಆಚರಿಸಲು ಭರ್ಜರಿ ತಯಾರಿ ನಡೆಸಲಾಗಿದೆ.
Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು
ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್
ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ