ನಮಗೆ ಬಿದ್ದ ಕನಸು ಏನೆಂಬುದು ಬೆಳಗ್ಗೆ ಆದಾಗ ಮರೆತು ಹೋಗುತ್ತದೆ. ಆದರೆ ಕೆಲ ಕನಸುಗಳು ಮಾತ್ರ ನೆನಪಿನಲ್ಲಿರುತ್ತದೆ. ನಮಗೆ ಗೊತ್ತಿರುವ ವ್ಯಕ್ತಿಗಳು ಕನಸಿನಲ್ಲಿ ಬಂದರೆ, ಅವರಿಗೇನಾದರೂ ತೊಂದರೆಯಾದಂತೆ ಕನಸು ಬಿದ್ದರೆ, ಅಂಥ ಕನಸುಗಳೆಲ್ಲ ನೆನಪಿನಲ್ಲಿರುತ್ತದೆ. ಅದೇ ರೀತಿ, ನಮ್ಮ ಕನಸಿನಲ್ಲಿ ನಾವು ಸತ್ತಂತೆ ಕಂಡರೆ, ಅಂಥ ಕನಸು ನಮಗೆ ತುಂಬ ಕಾಡುತ್ತದೆ. ಹಾಗಾದರೆ ಆ ಕನಸಿಗೆ ಅರ್ಥವೇನು ಅನ್ನೋ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ..
ನಮ್ಮ ಮರವಾದಂತೆ ನಾವೇ ಕನಸು ಕಂಡರೆ, ಹೆದರಬೇಕಾಗಿಲ್ಲ ಎನ್ನುತ್ತೆ ಸ್ವಪ್ನ ಶಾಸ್ತ್ರ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ನಮ್ಮ ಸಾವನ್ನೇ ನೋಡುವುದು ಶುಭ ಸಂಕೇತವೆನ್ನಲಾಗಿದೆ. ಈ ಮೂಲಕ ನಮ್ಮ ಜೀವನ ಉತ್ತಮ ಸ್ಥಿತಿಗೆ ಬರಲಿ ಎಂಬ ಸೂಚನೆ ಸಿಕ್ಕಂತೆ. ಅಲ್ಲದೇ ಇಂಥ ಕನಸು ಕಾಣೋದು, ಭಾಗ್ಯೋದಯದ ಗುಪ್ತ ಸಂಕೇತ ಎನ್ನಲಾಗಿದೆ.
ಇನ್ನು ಕನಸಿನಲ್ಲಿ ನೀವು ನಿಮ್ಮ ಶ್ರಾದ್ಧದ ಅಥವಾ ಬೇರೆಯವರ ಶ್ರಾದ್ಧದ ಊಟವನ್ನು ಉಂಡಂತೆ, ಕನಸು ಕಂಡರೆ, ನಿಮ್ಮ ಆರೋಗ್ಯ ಅಭಿವೃದ್ಧಿಯಾಗಲಿದೆ, ನಿಮಗೆ ಯಾವುದಾದರೂ ಖಾಯಿಲೆ ಇದ್ದರೆ, ಅದು ಗುಣವಾಗಲಿದೆ ಎಂದು ಅರ್ಥ. ಭೂಮಿಯನ್ನು ಬಿಟ್ಟು ತೇಲುತ್ತಿದ್ದು, ಅಥವಾ ಆಕಾಶದಲ್ಲಿ ತೇಲುತ್ತಿದ್ದು, ನೀವು ಸತ್ತಂತೆ ಕನಸು ಬಿದ್ದರೆ, ಎಲ್ಲ ತರಹದ ಚಿಂತೆಯಿಂದಲೂ ನಿಮಗೆ ಮುಕ್ತಿ ಸಿಗುತ್ತದೆ ಎಂದರ್ಥ. ಇನ್ನು ನೀವು ಬೆಂಕಿಯಲ್ಲಿ ಸುಟ್ಟಂತೆ ಕನಸು ಕಂಡರೆ, ಅಥವಾ ನೀವೇ ಸೂಸೈಡ್ ಮಾಡಿಕೊಳ್ಳುವಂತೆ ಕನಸು ಕಂಡರೆ. ಅಥವಾ ನಿಮ್ಮನ್ನು ಯಾರೋ ಕೊಂದಂತೆ ಕನಸು ಬಿದ್ದರೂ, ಅದು ಒಳ್ಳೆಯ ಸಂಕೇತವೇ. ತುಂಬಾ ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗುವ ಸಮಯ ಹತ್ತಿರ ಬಂದಿದೆ ಅನ್ನೋದು ಇದರ ಸೂಚನೆಯಾಗಿದೆ.