Thursday, February 6, 2025

Latest Posts

ಯಾದಗಿರಿ ಜಿಲ್ಲೆಯಲ್ಲಿ ಜನಸ್ವರಾಜ್ ಸಮಾವೇಶಕ್ಕೆ ಚಾಲನೆ.

- Advertisement -

ವಿಧಾನ ಪರಿಷತ್ ಚುನಾವಣೆಗಳ ನಿಮಿತ್ತ ಬಿಜೆಪಿ ಪಕ್ಷವು ಕರ್ನಾಟಕದಾದ್ಯಂತ ಜನಸ್ವರಾಜ್ ಕಾರ್ಯಕ್ರಮದ ಮೂಲಕ ತಮ್ಮ ಪಕ್ಷವನ್ನು ಬಲಪಡಿಸಲು ಬಿಜೆಪಿ ಸರ್ಕಾರ ಚಿಂತನೆ ನಡೆಸಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದೆ.

ಅದರoತೆ  ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಜನಸ್ವರಾಜ್ ಸಮಾವೇಶವನ್ನು ನಗರದಲ್ಲಿ ಅದ್ದೂರಿಯಾಗಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಶ್ರೀ ನವೀನ್ ಕುಮಾರ್ ಕಟೀಲು, ಕೇಂದ್ರ ಸಚಿವರು ಶ್ರೀ ಭಗವಂತ ಖೂಬಾ, ರಾಜ್ಯ ಸಚಿವರುಗಳಾದ ಶ್ರೀ ಅರಗ ಜ್ಞಾನೆಂದ್ರ, ಶ್ರೀ ಮುರುಗೇಶ್ ನಿರಾಣಿ, ಲೋಕಸಭಾ ಸದಸ್ಯರುಗಳಾದ  ಶ್ರೀ ರಾಜಾ ಅಮರೇಶ್ವರ ನಾಯಕ, ಶ್ರೀ ಉಮೇಶ ಜಾಧವ್,  ಶಾಸಕರುಗಳಾದ ಶ್ರೀ ವೆಂಕಟರೆಡ್ಡಿ ಗೌಡ ಮುದ್ನಾಳ, ಶ್ರೀ ರಾಜುಗೌಡ, ವಿಧಾನಪರಿಷತ್ ಸದಸ್ಯರಾದ ಶ್ರೀ ಬಿ.ಜಿ ಪಾಟೀಲ್, ಶ್ರೀ ಶಶೀಲ್ ನಮೋಶಿ, ಯಾದಗಿರಿ ಜಿಲ್ಲಾಧ್ಯಕ್ಷರಾದ ಡಾ/ಶರಣಭೋಪಾಲ್ ರೆಡ್ಡಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರಗೌಡ ಮಾಗನೂರು, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -

Latest Posts

Don't Miss