Health Tips: ಕೂದಲು ಉದುರುವುದು ಅಂದ್ರೆ, ಈ ಕಾಲದ ಯುವಪೀಳಿಗೆಯವರ ನಾರ್ಮಲ್ ಸಮಸ್ಯೆ. ಅಂಥ ಸಮಸ್ಯೆಗಳಿಗಾಗಿ ಮಾರುಕಟ್ಟೆಲ್ಲಿ ಬೇರೆ ಬೇರೆ ರೀತಿಯ ಶ್ಯಾಂಪೂ, ಎಣ್ಣೆ ಎಲ್ಲವೂ ಬಂದಿದೆ. ಆದರೆ ಅದನ್ನು ಬಳಸಿದರೂ, ಕೂದಲು ಉದುರುವ ಸಮಸ್ಯೆ ಮಾತ್ರ ಶಾಶ್ವತವಾಗಿದೆ. ಹಾಗಾಗಿ ನಾವಿಂದು ಪರಿಣಾಮಕಾರಿ ಮನೆ ಮದ್ದಿನ ಬಗ್ಗೆ ಹೇಳಲಿದ್ದೇವೆ.
ನೀವು ತಲೆಸ್ನಾನ ಮಾಡುವ ಮುನ್ನ ತಲೆಗೂದಲಿಗೆ ಎಣ್ಣೆ ಮಸಾಜ್ ಅಂತೂ ಮಾಡಲೇಬೇಕಾಗುತ್ತದೆ. ಆವಾಗ ನಿಮಗೆ ಬೇಕಾದಷ್ಟು ತೆಂಗಿನ ಎಣ್ಣೆ ಮತ್ತು ಅದಕ್ಕೆ ಒಂದೆರಡು ವಿಟಾಮಿನ್ ಈ ಎಣ್ಣೆ ಮಿಕ್ಸ್ ಮಾಡಿ, ಕೊಂಚ ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡಬೇಕು. ಎಣ್ಣೆಯನ್ನು ಹೆಚ್ಚು ಬಿಸಿ ಮಾಡಬಾರದು. ಹಾಗೇ ಮಾಡಿದ್ದಲ್ಲಿ, ಎಣ್ಣೆಯಲ್ಲಿರುವ ಪೋಷಕಾಂಶ ಹೊರಟು ಹೋಗುತ್ತದೆ. ಹಾಗಾಗಿ ಎಣ್ಣೆಯನ್ನು ಕೊಂಚ ಬಿಸಿ ಮಾಡಿ, ಆರಿಸಿ, ಕೊಂಚ ಬೆಚ್ಚಗಿರುವಾಗ, ತಲೆಗೂದಲಿಗೆ ಮಸಾಜ್ ಮಾಡಬೇಕು. ನಿಮಗೆ ಅಲರ್ಜಿಯಾಗುವುದಿಲ್ಲ. ನೆಗಡಿಯಾಗುವುದಿಲ್ಲ ಎಂದಲ್ಲಿ ನೀವು ಇದಕ್ಕೆ ಕೊಂಚ ಹರಳೆಣ್ಣೆ ಕೂಡ ಬಿಸಿ ಮಾಡಿ ಹಚಚ್ಚಬಹುದು.
ವಾರದಲ್ಲಿ ಎರಡು ಬಾರಿ ನೀವು ಈ ರೀತಿ ಎಣ್ಣೆ ಬಳಸಿ, ತಲೆ ಸ್ನಾನ ಮಾಡಿದ್ರೆ, ನಿಮ್ಮ ತಲೆಗೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ ತಲೆಸ್ನಾನ ಮಾಡುವಾಗ, ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸುವುದು ಉತ್ತಮ. ಅಥವಾ, ನೀವೇ ಮನೆಯಲ್ಲಿ ಮಾಡಿದ ಶ್ಯಾಂಪೂ ಬಳಸಿ. ಅಥವಾ ಸೀಗೇಕಾಯಿ ಪುಡಿ ಬಳಸಿ, ತಲೆಸ್ನಾನ ಮಾಡಿ.
ಇನ್ನು ಎರಡನೇಯದಾಗಿ ನೀವು ಕಾಯಿಹಾಲನ್ನು ಮನೆಯಲ್ಲೇ ತಯಾರಿಸಿ, ಕಂಡೀಷನರ್ ರೀತಿ ಬಳಸಬಹುದು. ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದಲ್ಲದೇ, ಕೂಲು ಸಾಫ್ಟ್ ಆಗಿ ಇರುತ್ತದೆ. ಅದಕ್ಕಾಗಿ ನೀವು ಕಾಯಿ ತುರಿದು, ರುಬ್ಬಿ, ಅದರ ಹಾಲನ್ನು ತೆಗೆಯಬೇಕು. ಈಗ ಕಾಯಿಹಾಲು ರೆಡಿ.
ಮೊದಲು ತಲೆಗೂದಲಿಗೆ ಎಣ್ಣೆ ಮಸಾಜ್ ಮಾಡಿ, ತಲೆ ಸ್ನಾನ ಮಾಡಿ. ಬಳಿಕ, ಕಾಯಿ ಹಾಲನ್ನು ಕೂದಲ ಬುಡಕ್ಕೆ ಹಚ್ಚಿ 30 ನಿಮಿಷ ಬಿಟ್ಟು, ಮತ್ತೆ ತಲೆ ಸ್ನಾನ ಮಾಡಿ. ಹೀಗೆ ಮಾಡಿದಾಗ, ನಿಮ್ಮ ಕೂದಲು ಗಟ್ಟಿಮುಟ್ಟಾ, ಸಾಫ್ಟ್ ಆಗಿ, ಆರೋಗ್ಯಕರವಾಗಿ ಇರುತ್ತದೆ.
ಬರೀ ತಲೆಗೂದಲಿಗೆ ಎಣ್ಣೆ, ಶ್ಯಾಂಪೂ ಬಳಸುವುದರಿಂದ ನಮ್ಮ ಕೂದಲು ಚೆಂದಗಾಣಿಸುವುದಿಲ್ಲ. ಅಥವಾ ಆರೋಗ್ಯಕರವಾಗುವುದಿಲ್ಲ. ಅದರೊಂದಿಗೆ ನಾವು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ದೇಹವನ್ನು ತಂಪಾಗಿ ಇರಿಸಬೇಕು. ಹಾಗಾದ್ರೆ ಕೂದಲು ಚೆನ್ನಾಗಿ ಬೆಳೆಯಬೇಕು. ನಾವು ನೋಡಲು ಅಂದವಾಗಿ ಕಾಣಬೇಕು ಅಂದ್ರೆ, ಏನು ಸೇವಿಸಬೇಕು ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.