ಕನ್ನಡದ ಕರಿಚಿರತೆ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ.. ಸೆಟ್ಟೇರಿದ ದಿನದಂದಲೂ ಸಖತ್ ಹೈಪ್ ಕ್ರಿಯೇಟ್ ಮಾಡ್ತಿರುವ ಒಂಟಿ ಸಲಗ ತೆರೆಗಪ್ಪಳಿಸಲು ಸಜ್ಜಾಗಿದೆ. ಮೇ 15ರಂದು ರಾಜ್ಯಾದ್ಯಂತ ಬಿಗ್ ಸ್ಕ್ರೀನ್ ನಲ್ಲಿ ದುನಿಯಾ ವಿಜಿ ಅಬ್ಬರಿಸಲಿದ್ದಾರೆ. ಈಗಾಗ್ಲೇ ಸಿನಿಮಾದ ಟೈಟಲ್ ಟ್ರ್ಯಾಕು, ಟೀಸರ್ ಸಖತ್ ಸೌಂಡ್ ಮಾಡ್ತಿದ್ದು, ಸಲಗ ಮೇಕಿಂಗ್ ಸ್ಟೈಲ್ ಎಲ್ಲವೂ ಚಿತ್ರಪ್ರೇಮಿಗಳನ್ನು ಅಟ್ರ್ಯಾಕ್ಟ್ ಮಾಡ್ತಿದೆ.

ಈ ಮಧ್ಯೆ ಮಡಿಕೇರಿಯ ದುಬಾರೆ ಅರಣ್ಯಕ್ಕೆ ಭೇಟಿ ರೀಲ್ ಸಲಗ ಭೇಟಿ ನೀಡಿದೆ. ಅಲ್ಲಿ ರಿಯಲ್ ಸಲಗಗಳ ಜೊತೆ ವಿಜಿ ಕಾಲ ಕಳೆದಿದ್ದಾರೆ. ಬ್ಲಾಕ್ ಕೋಬ್ರಾ ವಿಜಿ ನೋಡ್ತಿದ್ದಂತೆ ಅಲ್ಲಿದ್ದ ಪ್ರವಾಸಿಗರು ಸಖತ್ ಖುಷಿಪಟ್ಟಿದ್ದಾರೆ.
ಇಡೀ ಕುಟುಂಬದ ಜೊತೆ ದುಬಾರೆ ಅರಣ್ಯದ ಪ್ರದೇಶಕ್ಕೆ ತೆರಳಿರುವ ವಿಜಯ್ ಅಲ್ಲಿನ ಪೊಲೀಸ್ ಹಾಗೂ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ, ಅವರೊಟ್ಟಿಗೆ ವಾಲಿಬಾಲ್ ಆಡಿ ಎಂಜಾಯ್ ಮಾಡಿದ್ದಾರೆ. ಈ ವೇಳೆ ಮಾವುತರ ವಿಜಿ ಜೊತೆ ಆಡಿ ಕುಣಿದು ಕುಪ್ಪಳಿಸಿದ್ದಾರೆ.
ಪ್ರವಾಸಿಗರು ದುನಿಯಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಸದ್ಯ ಒಂಟಿ ಸಲಗ ರಿಯಲ್ ಸಲಗಳ ಜೊತೆ ಕಾಲ ಕಳೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.