ಯಾರಿಗೆ ತಾನೇ ತಾವು ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ.. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ವಯಸ್ಸನ್ನ ಆದಷ್ಟು ಮುಚ್ಚಿಡೋಕ್ಕೆ ಬೇಕಾದ ಪ್ರಯತ್ನವನ್ನು ಪಡುತ್ತಾರೆ. ಆ್ಯಂಟಿ ಎಜಿಂಗ್ ಕ್ರೀಮ್, ಸೋಪ್, ಇತ್ಯಾದಿ ಪ್ರಾಡಕ್ಟನ್ನ ಬಳಸುತ್ತಾರೆ. ಆದ್ರೂ ಕೂಡ ವಯಸ್ಸು ಮುಚ್ಚಿಡೋದಕ್ಕೆ ಆಗಲ್ಲಾ. ಯಾಕಂದ್ರೆ ನಾವು ಯಂಗ್ ಆಗಿ ಕಾಣೋದು, ನಾವು ತಿನ್ನುವ ಆಹಾರದ ಮೇಲೆ ಡಿಪೆಂಡ್ ಆಗಿರತ್ತೆ. ಹಾಗಾದ್ರೆ ನಾವು ಎಂಥ ಆಹಾರವನ್ನ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಣ್ಣೆ ಹಣ್ಣು ಅಂದ್ರೆ ಬಟರ್ ಫ್ರೂಟ್, ಸ್ಟ್ರಾಬೇರೀಸ್, ಬ್ಲೂ ಬೇರಿಸ್, ಬ್ಯಾಕ್ ಬೇರಿಸ್, ಕ್ಯಾರೆಟ್, ನಿಂಬೆಹಣ್ಣು, ಕಿತ್ತಳೆ, ಪಪ್ಪಾಯಿ, ಬೆಳ್ಳುಳ್ಳಿ, ಅರಿಷಿನ, ಆಲಿವ್ ಎಣ್ಣೆ, ಡಾರ್ಕ್ ಚಾಕೋಲೇಟ್ಸ್,ಡ್ರೈ ಫ್ರೂಟ್ಸ್ ಇವನ್ನೆಲ್ಲ ನೀವು ನಿಯಮಿತವಾಗಿ ಕೊಂಚ ಕೊಂಚ ಸೇವಿಸಿದ್ರೆ, ಅಥವಾ ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಸೇರಿಸಿಕೊಂಡ್ರೆ, ನೀವು ಯಂಗ್ ಆಗಿ ಕಾಣ್ತೀರಾ.
ಬೆಣ್ಣೆ ಹಣ್ಣು ತಿಂದ್ರೆ, ಅಥವಾ ಅದರ ಜ್ಯೂಸ್ ಕುಡಿದ್ರೆ, ನಿಮ್ಮ ಸೌಂದರ್ಯ ಇಮ್ಮಡಿಯಾಗತ್ತೆ. ಸ್ಟ್ರಾಬೇರೀಸ್, ಬ್ಲೂ ಬೇರಿಸ್, ಬ್ಯಾಕ್ ಬೇರಿಸ್ ತಿಂದ್ರೆ, ನಿಮ್ಮ ಮುಖದಲ್ಲಿ ಕಾಂತಿ ಬರತ್ತೆ. ಕ್ಯಾರೆಟ್, ನಿಂಬೆಹಣ್ಣು, ಪಪ್ಪಾಯಿ, ಕಿತ್ತಳೆ ಹಣ್ಣನ್ನ ಸೇವಿಸಿದ್ರೆ, ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಬೆಳ್ಳುಳ್ಳಿ, ಅರಿಷಿನ, ಆಲಿವ್ ಎಣ್ಣೆ ಬಳಸಿದ್ರೆ, ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಡಾರ್ಕ್ ಚಾಕೋಲೇಟ್ಸ್, ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಇದರ ಜೊತೆ ಆದಷ್ಟು ನೀರು ಕುಡಿಯಿರಿ, ಚೆನ್ನಾಗಿ ನಿದ್ದೆ ಮಾಡಿರಿ. ವ್ಯಾಯಾಮ, ಸ್ವಿಮ್ಮಿಂಗ್, ಸೈಕಲಿಂಗ್ ಮಾಡಿರಿ. ಧ್ಯಾನ ಮಾಡಿದ್ರೆ ಮುಖದಲ್ಲಿ ಕಳೆ ಹೆಚ್ಚತ್ತೆ.
ಅಲ್ಲದೇ, ಮುಖವನ್ನ ಸ್ವಚ್ಛವಾಗಿ ತೊಳೆಯಿರಿ. ಮುಖಕ್ಕೆ ಸೋಪ್ ಬಳಸಬೇಡಿ, ಕಡಲೆ ಹಿಟ್ಟು ಅಥವಾ ಮುಲ್ತಾನಿ ಮಿಟ್ಟಿ ಬಳಸಿ. ತಿಂಗಳಿಗೆ ಎರಡು ಬಾರಿಯಾದ್ರೂ ಫೇಸ್‌ಪ್ಯಾಕ್ ಹಾಕಿ. ಸ್ಕ್ರಬಿಂಗ್ ಮಾಡಿ, ಸ್ಟೀಮ್ ತೆಗೆದುಕೊಳ್ಳಿ. ಆಯ್ಲ ಮಸಾಜ್ ಮಾಡಿ. ಯಾವಾಗಲೂ ನಗು ನಗುತ್ತ, ಸಂತೋಷವಾಗಿರಿ.