Wednesday, August 20, 2025

Latest Posts

ರಾತ್ರಿ ಉತ್ತಮ ನಿದ್ರೆ ಬರುವುದಕ್ಕೆ ಸೇವಿಸಬೇಕಾದ ಆಹಾರಗಳಿದು..

- Advertisement -

ನಿದ್ದೆ ಅನ್ನೋದು ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವ ವಿಶ್ರಾಂತಿ. ಮನುಷ್ಯ ಆರೋಗ್ಯವಾಗಿ ಬದುಕಲು, ಆಹಾರ, ನೀರು, ವ್ಯಾಯಾಮದ ಜೊತೆ ನಿದ್ದೆ ಕೂಡ ಬೇಕಾಗುತ್ತದೆ. ಈ ಪ್ರಪಂಚದಲ್ಲಿ ಅದೆಷ್ಟೇ ಜನ ನಿದ್ದೆ ಇಲ್ಲದೇ ಬಳಲುತಿದ್ದಾರೆ. ಕೆಲವರಿಗೆ ರಾತ್ರಿ ಚಿಂತೆಯಿಂದ ನಿದ್ದೆ ಬರುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ಊಟವಿಲ್ಲದಿದ್ದರೆ ನಿದ್ರೆ ಬರುವುದಿಲ್ಲ. ಮತ್ತೆ ಕೆಲವರಿಗೆ ಚಿಂತೆ ಇಲ್ಲದಿದ್ದರೂ, ಹೊಟ್ಟೆ ತುಂಬ ಉಂಡರೂ ನಿದ್ರೆ ಬರುವುದಿಲ್ಲ. ಹಾಗಾದ್ರೆ ರಾತ್ರಿ ಉತ್ತಮವಾಗಿ ನಿದ್ರೆ ಬರಬೇಕು ಅಂದ್ರೆ ಯಾವ ಆಹಾರವನ್ನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೊದಲನೇಯದಾಗಿ ಗಟ್ಟಿ ಆಹಾರ. ಕೆಲವರು ರಾತ್ರಿ ಮಲಗುವಾಗ ಬ್ರೆಡ್, ಸ್ನ್ಯಾಕ್ಸ್ ತಿಂದು ಮಲಗುತ್ತಾರೆ. ಹೀಗೆ ರಾತ್ರಿ ಮಲಗುವಾಗ ಜಂಕ್ ಫುಡ್ ತಿಂದು ಮಲಗುವುದರಿಂದ ನಿದ್ದೆಯೂ ಸರಿಯಾಗಿ ಬರುವುದಿಲ್ಲ. ಅಲ್ಲದೇ ಆರೋಗ್ಯ ಹಾಳಾಗುವುದರ ಜೊತೆಗೆ ಬೊಜ್ಜು ಕೂಡ ಬೆಳೆಯುತ್ತದೆ. ಆದ್ದರಿಂದ ಅನ್ನಾಹಾರ ಅಥವಾ ರೊಟ್ಟಿ ಚಪಾತಿಯನ್ನ ತಿನ್ನಿ. ಇದರೊಂದಿಗೆ ಕೊಂಚ ತುಪ್ಪ ಬಳಸಿದರೆ ಇನ್ನೂ ಉತ್ತಮ.

ಎರಡನೇಯದಾಗಿ ಬಾಳೆಹಣ್ಣು. ರಾತ್ರಿ ಬಾಳೆ ಹಣ್ಣು ತಿಂದು ಹಾಲು ಕುಡಿದು ಮಲಗುವುದರಿಂದ ಉತ್ತಮ ನಿದ್ರೆ ಬರುವುದಲ್ಲದೇ, ಮಲಬದ್ಧತೆ ನಿವಾರಣೆಯಾಗುತ್ತದೆ. ಹಾಲು ಬಿಸಿ ಇದ್ದರೆ ಇನ್ನೂ ಉತ್ತಮ. ರಾತ್ರಿ ಬರೀ ಬಾಳೆ ಹಣ್ಣು ತಿಂದು ಮಲಗುವುದಕ್ಕಿಂತ ಇದು ಉತ್ತಮ. ಅದರಲ್ಲೂ ರಾತ್ರಿ ಪಚ್ಚಬಾಳೆಹಣ್ಣು ಅಷ್ಟೇ ತಿನ್ನುವುದು ಉತ್ತಮವಲ್ಲ. ಇದರೊಂದಿಗೆ ಹಾಲು ಕುಡಿಯಬೇಕು. ಯಾಕಂದ್ರೆ ರಾತ್ರಿ ಬರೀ ಪಚ್ಚೆಬಾಳುಹಣ್ಣು ತಿನ್ನುವುದರಿಂದ ಶೀತವಾಗುವ ಸಾಧ್ಯತೆ ಹೆಚ್ಚು.

ಇನ್ನು ನಿಮಗೆ ರಾತ್ರಿ ಬಾಳೆಹಣ್ಣು ತಿನ್ನಲು ಇಷ್ಟವಾಗದಿದ್ದರೆ, ರಾತ್ರಿ ಗೋಲ್ಡನ್ ಮಿಲ್ಕ್ ಕುಡಿದು ಮಲಗಿ. ಅಂದ್ರೆ ಅರಿಶಿನ ಹಾಲು. ಹಾಲಿಗೆ ಅರಿಶಿನ, ಕಲ್ಲುಸಕ್ಕರೆ, ಕೊಂಚ ತುಪ್ಪ, ಜೀರಿಗೆ, ಲವಂಗ,  ಎಲ್ಲ ಹಾಕಿ ಕುದಿಸಿದರೆ, ಅದೇ ಗೋಲ್ಡನ್ ಮಿಲ್ಕ್. ಇದು ಆರೋಗ್ಯಕ್ಕೂ, ಸೌಂದರ್ಯಕ್ಕೂ ಒಳ್ಳೆಯದಲ್ಲದೇ, ಉತ್ತಮಮವಾಗಿ ನಿದ್ದೆ ಬರುವುದಕ್ಕೆ ಸಹಕಾರಿಯಾಗಿದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss