ಹಲವು ದಾನಗಳಲ್ಲಿ ಶ್ರೇಷ್ಠದಾನ ಅಂದ್ರೆ ರಕ್ತದಾನ. ಯಾಕಂದ್ರೆ ರಕ್ತದಾನದಿಂದ ಜೀವ ಉಳಿಯತ್ತೆ. ಹಾಗಾಗಿ ರಕ್ತದಾನ ಕೂಡ ಶ್ರೇಷ್ಠವೇ. ಆದ್ರೆ ಎಲ್ಲರೂ ಎಲ್ಲರಿಗೂ ರಕ್ತ ಕೊಡಲಾಗುವುದಿಲ್ಲ. ಅದಕ್ಕೆ ಇಂತಿಷ್ಟು ತೂಕ ಹೊಂದಿರಬೇಕು. ಆರೋಗ್ಯ ಸಮಸ್ಯೆ ಎಲ್ಲ ಇರಕೂಡದು ಎಂಬ ನಿಯಮವಿದೆ. ಹಾಗಾಗಿ ಮೊದಲು ಕೊಂಚ ನಿಮ್ಮ ಬ್ಲಡ್ ತೆಗೆಯುತ್ತಾರೆ. ನಿಮ್ಮ ಆರೋಗ್ಯ ಪರೀಕ್ಷಿಸಲಾಗತ್ತೆ. ಆಗ ನಿಮಗೆ ಏನು ಸಮಸ್ಯೆಯಾಗಿಲ್ಲ ಎಂದಾಗ ಮಾತ್ರ, ನೀವು ರಕ್ತ ಕೊಡಬಹುದು. ಆದ್ರೆ ರಕ್ತದಾನ ಮಾಡಿದ ಬಳಿಕ, ನೀವು ಈ ಆಹಾರವನ್ನು ಖಂಡಿತವಾಗಿಯೂ ತಿನ್ನಬೇಕು. ಯಾವುದು ಆ ಆಹಾರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ರಕ್ತದಾನ ಮಾಡಿದ ಬಳಿಕ ಹಣ್ಣನ್ನ ತಿನ್ನಬೇಕು. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಹಾಗಾಗಿಯೇ ರಕ್ತದಾನ ಮಾಡಿದ ಬಳಿಕ ಸೇಬುಹಣ್ಣನ್ನ ತಿನ್ನಲು ಕೊಡಲಾಗತ್ತೆ. ಸೇಬು ಹಣ್ಣಿನ ಬದಲಿಗೆ, ಬಾಳೆಹಣ್ಣು, ಕಿತ್ತಳೆ ಹಣ್ಣು, ಮೂಸಂಬಿ ಹಣ್ಣು ಕೂಡ ನೀವು ತಿನ್ನಬಹುದು. ಇದರ ಬದಲು ನೀವು ಜ್ಯೂಸ್ ಕೂಡ ಸೇವಿಸಬಹುದು. ರಕ್ತದಾನ ಮಾಡಿದ ಪ್ರತೀ ಮೂರು ಗಂಟೆಗೊಮ್ಮೆ ಹಣ್ಣು ಅಥವಾ ಜ್ಯೂಸ್ ಸೇವನೆ ಮಾಡುವುದು ಅವಶ್ಯಕವಾಗಿದೆ.
ರಕ್ತದಾನ ಮಾಡಿದ ಬಳಿಕ ನಮ್ಮ ದೇಹದಲ್ಲಿನ ಶಕ್ತಿ ಕುಂದುಹೋಗುತ್ತದೆ. ಹಾಗಾಗಿ ಎರಡು ದಿನವಾದ್ರೂ ನಾವು ಉತ್ತಮ ಆಹಾರ, ಹಣ್ಣು ಹಂಪಲಿನ ಸೇವನೆ ಮಾಡಲೇಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ, ದೇಹದಲ್ಲಿ ಶಕ್ತಿ ಮರಳಿ ಪಡೆಯುವುದಕ್ಕೆ ಸಹಾಯವಾಗುತ್ತದೆ.