Health Tips: ನಮ್ಮ ದೈನಂದಿನ ಅಡುಗೆ ಕೆಲಸಗಳಲ್ಲಿ ನಮಗೆ ಉಪಯೋಗಕ್ಕೆ ಬರುವ, ಬೇಗ ಬೇಗ ಅಡುಗೆ ಮಾಡಲು ಸಹಾಯವಾಗುವ ಪಾತ್ರೆಗಳಲ್ಲಿ ಕುಕ್ಕರ್ ಕೂಡ ಒಂದು. ಬೇಳೆ, ಅನ್ನ, ತರಕಾರಿ ಕುಕ್ಕರ್‌ನಲ್ಲಿ ಬೇಯಿಸಿದರೆ, ಫಟಾಪಟ್ ಅಡುಗೆ ರೆಡಿಯಾಗುತ್ತದೆ. ಆದರೆ ಕುಕ್ಕರ್‌ನಲ್ಲಿ ಮಾಡಿದಂಥ ಅಡುಗೆ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಪ್ರೆಶರ್ ಕುಕ್ಕರಿನಲ್ಲಿ ಮಾಡಿದ ಆಹಾರ ಯಾವಾಗಲೂ ಆರೋಗ್ಯಕ್ಕೆ ಹಾನಿಕಾರಕವೇ. ಕುಕ್ಕರ್‌ನಲ್ಲಿ ಆಹಾರ ತಯಾರಿಸುವಾಗ, ಬೇಗ ಬೇಗ ಅಡಿಗೆಯಾಗುತ್ತದೆ. ಅದೇ ರೀತಿ ನಮ್ಮ ಆರೋಗ್ಯವೂ ಬೇಗ ಬೇಗ ಹಾಳಾಗುತ್ತದೆ. ನೀವು ಕುಕ್ಕರಿನಲ್ಲಿ ಬೇಯಿಸಿದ ಅನ್ನವನ್ನು ಒಂದು ವಾರ ಮತ್ತು ಗಂಜಿ ಬಸಿದು ತಯಾರಿಸಿದ ಅನ್ನವನ್ನು ತಿಂದು ನೋಡಿ. ಆಗ ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ.
ಕುಕ್ಕರಿನಲ್ಲಿ ತಯಾರಿಸಿದ ಅನ್ನವನ್ನು ಹೆಚ್ಚು ಸೇವಿಸುವುದರಿಂದ, ಗ್ಯಾಸ್ಟಿಕ್ ಸಮಸ್ಯೆ, ಬೊಜ್ಜು, ಜೀರ್ಣಕ್ರಿಯೆ ಸಮಸ್ಯೆ ಎಲ್ಲವೂ ಬರುತ್ತದೆ. ಆದರೆ ಗಂಜಿ ಬಸಿದು, ಪಾತ್ರೆಯಲ್ಲೇ ತಯಾರಿಸುವ ಅನ್ನದ ಸೇವನೆಯಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ, ಕುಕ್ಕರಿನಲ್ಲಿ ಬೇಯಿಸಿದ ಅನ್ನದ ಸೇವನೆಯಿಂದ ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾಗುತ್ತದೆ. ಗಂಜಿ ಬಸಿದು ಮಾಡಿದ ಅನ್ನದ ಸೇವನೆಯಿಂದ ಶುಗರ್ ಪ್ರಮಾಣ ಹೆಚ್ಚಾಗುವುದಿಲ್ಲ.
ಕುಕ್ಕರಿನಲ್ಲಿ ಬೇಯಿಸುವ ಆಹಾರದದ ಸೇವನೆಯಿಂದ ಹೊಟ್ಟೆ ನೋವಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ಸೇರಿ ಹಲವು ಸಮಸ್ಯೆ ಉದ್ಭವಿಸುತ್ತದೆ. ಅದರಲ್ಲೂ ನೀವು ಆಫೀಸಿನಲ್ಲಿ ಕುಳಿತು ಕೆಲಸಮ ಮಾಡುವವರಾಗಿದ್ದರೆ, ನಿಮ್ಮ ಹೊಟ್ಟೆಯ ಬೊಜ್ಜು ರೀತಾ ಬೆಳೆಯಲು ಶುರುವಾಗುತ್ತದೆ. ಹಾಗಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಮಾಡುವ ಆಹಾರ ದೇಹಕ್ಕೆ ಎಂದಿಗೂ ಉತ್ತಮವಲ್ಲ.