Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕೆ ತ್ಯುತ್ತಮ ಲಾಭವಾಗುತ್ತದೆ ಅಂತಾ ಈಗಗಾಲೇ ನಿಮಗೆ ಗೊತ್ತಿರಬಹುದು. ಬಾದಾಮ್, ದ್ರಾಕ್ಷಿ, ವಾಲ್ನಟ್, ಅಂಜೀರ ಇವೆಲ್ಲವನ್ನೂ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಅದರಲ್ಲೂ ವಾಲ್ನಟ್ ಸೇವನೆಯಿಂದ ಆರೋಗ್ಯ ಇನ್ನೂ ಅತ್ಯುತ್ತಮವಾಗುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿದೆ. ಅದೇನು ಅಂತಾ ತಿಳಿಯೋಣ ಬನ್ನಿ..
ನೆನೆಸಿಟ್ಟ ವಾಲ್ನಟ್ ಸೇವಿಸಿದರೆ, ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಬಾಾದಾಮ್ ಜೊತೆಗೆ ವಾಲ್ನಟ್ ಕೂಡ ನೆನೆಸಿ ಕೊಡಲಾಗುತ್ತದೆ. ಜೊತೆಗೆ ಗರ್ಭಿಣಿಯರಿಗೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಎರಡು ಅಖ್ರೋಟ್ ಸೇವಿಸಲು ಹೇಳಲಾಗುತ್ತದೆ. ಇದರಿಂದ ಮಗುವಿನ ಬುದ್ಧಿ ಮತ್ತೆ ಚೆನ್ನಾಗಿರುತ್ತದೆ.
ಹೃದಯದ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ನೆನೆಸಿಟ್ಟ ವಾಲ್ನಟ್ ಸೇವನೆ ಮಾಡಬೇಕು. ಇದರ ಸೇವನೆಯಿಂದ ರಕ್ತನಾಳದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಆಗ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಅಜೀರ್ಣತೆ ಕಾಡಬಾರದು ಅಂದ್ರೆ, ನೆನೆಸಿಟ್ಟ ವಾಲ್ನಟ್ ಸೇವಿಸಿ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತೆ. ಆದರೆ ನೀವು ವಾಲ್ನಟ್ ನೆನೆಸದೇ, ಅಗತ್ಯಕ್ಕಿಂತ ಹೆಚ್ಚು ತಿಂದರೆ, ಮಲವಿಸರ್ಜನೆಗೆ ತೊಂದರೆಯಾಗುತ್ತದೆ.
ಥೈರಾಯ್ಡ್, ಮುಟ್ಟಿನ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೆನೆಸಿಟ್ಟ ವಾಲ್ನಟ್ ಸೇವನೆ ಮಾಡಬೇಕು. ಆಗ ಸಮಯಕ್ಕೆ ಸರಿಯಾಾಗಿ ಮುಟ್ಟಾಗುತ್ತದೆ. ಥೈರಾಯ್ಡ್ ಕಂಟ್ರೋಲಿಗೆ ಬರುತ್ತದೆ.